ಕನಕಗಿರಿ: ಮಹಾಯೋಗಿ ವೇಮನರ ವಿಚಾರಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ ಎಂದು ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಹೇಳಿದರು.
ಪಟ್ಟಣದ 11ನೇ ವಾರ್ಡಿನಲ್ಲಿ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಶಕ್ತಿ ಸಂಘ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತ್ಯೋತ್ಸವ ನಿಮಿತ್ತ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಭಾನುವಾರ ಮಾತನಾಡಿದರು.
ವೇಮನರು ಆಧ್ಯಾತ್ಮದೆಡೆಗೆ ಸಾಗಿ ಮನುಕುಲಕ್ಕೆ ಜ್ಞಾನಾಮೃತ ನೀಡಿ ಆದರ್ಶಪ್ರಾಯರಾಗಿದ್ದಾರೆ. ಇಂತಹ ಮಹಾನ್ ದಾರ್ಶನಿಕರ ವಿಚಾರಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಬದುಕೋಣ ಎಂದರು.
ಪ್ರಮುಖರಾದ ಉಮಾ ಪಂಪಾರೆಡ್ಡಿ, ಈರಮ್ಮ ಶಿವನಗುಂಡಿ, ರಂಗಮ್ಮ ಬೊರೆಡ್ಡಿ, ತಿಪ್ಪಮ್ಮ ಮಾದಿನಾಳ, ಈರಮ್ಮ ರಂಗಾರೆಡ್ಡಿ, ಶಾಂತಾ ಮಾದಿನಾಳ, ಹೂವಮ್ಮ, ಪಾರ್ವತಿ, ಭಾಗ್ಯಮ್ಮ, ಲಕ್ಷ್ಮೀದೇವಿ ಅಳ್ಳಳ್ಳಿ, ಜಯಶ್ರೀ ಬಿ., ಅನಿತಾ ಮಾದಿನಾಳ, ಲಕ್ಷ್ಮೀದೇವಿ ಬೊರೆಡ್ಡಿ ಇತರರಿದ್ದರು.