ಕನಕಗಿರಿ: ಕಲಬುರಗಿಯಲ್ಲಿ ಇತ್ತೀಚಿಗೆ ಗೆಲಾಕ್ಸಿ ಇಂಟರ್ ನ್ಯಾಷನಲ್ ಅಬಾಕಸ್ ಆ್ಯಂಡ್ ಮೆಂಟಲ್ ಅರ್ಥಮೆಟಿಕ್ ಸಂಸ್ಥೆಯಿಂದ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪಟ್ಟಣದ ಅಬಾಕಸ್ ತರಬೇತಿ ಕೇಂದ್ರದಿಂದ ಭಾಗವಹಿಸಿದ್ದ 12 ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

ದೀಕ್ಷಾ ಸಜ್ಜನ್, ಶ್ರೀನಿಕೇತ್, ಧಾತ್ರಿ ಹಾಗೂ ಅಥರ್ವ ಟಿ. ಸೂಪರ್ ಚಾಂಪಿಯನ್ ಆಗಿ ಹೊರಹೋಮ್ಮಿದರೆ, ಸರ್ವೇಶ್ ಹಾಗೂ ಪ್ರಜ್ವಲ್ ಚಾಂಪಿಯನ್ ಆಗಿದ್ದಾರೆ. ಇನ್ನೂ ಎ. ರೋಹಿತ್ ಹಾಗೂ ಎಂ. ರೋಹಿತ್ ರನ್ನರ್ ಅಪ್-1, ಶ್ರೀನಿಧಿ, ನಿಧಿಶ್ರೀ ರನ್ನರ್ ಅಪ್-2 ಸನ್ನಿಧಿ, ಪೃಥ್ವಿರಾಜ್ ರನ್ನರ್ ಅಪ್-3 ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಜೇತರೆಲ್ಲರಿಗೂ ಟ್ರೋಫಿ ಹಾಗೂ ನೋಬೆಲ್ ವರ್ಲ್ಡ್ ದಾಖಲೆ ನಿರ್ಮಿಸಿದ ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ತರಬೇತಿ ನೀಡಿದ ಶಿಕ್ಷಕಿ ಅರ್ಪಿತಾ ದಾಯಪುಲ್ಲೆ ತಿಳಿಸಿದ್ದಾರೆ.