ಕನಕಗಿರಿ: ಪಟ್ಟಣದ 14ನೇ ವಾರ್ಡ್‌ನಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಪುತ್ಥಳಿ ಹಾಗೂ ವೃತ್ತವನ್ನು ಶುಕ್ರವಾರ ಅನಾವರಣಗೊಳಿಸಲಾಯಿತು. ನಟ ಪುನೀತ್ ಜನ್ಮದಿನ ನಿಮಿತ್ತ ಅವರ ಅಭಿಮಾನಿಗಳು ಅಪ್ಪು ಪುತ್ಥಳಿಯನ್ನು ಮೆರವಣಿಗೆ ಮೂಲಕ ತಂದು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿದರು.
ಸೂಗೂರಯ್ಯಸ್ವಾಮಿ ಪೌರೋಹಿತ್ಯ ವಹಿಸಿದ್ದರು. ಕರಡಿಗುಡ್ಡದ ವೆಂಕಟೇಶ್ವರ ದೇವಸ್ಥಾನದ ಅರ್ಚಕ ಬಸವಣ್ಣ ತಾತ ಉದ್ಘಾಟಿಸಿದರು. ನೂರಾರು ಅಭಿಮಾನಿಗಳು ಮೌನಾಚರಣೆ ಮೂಲಕ ಅಪ್ಪುವಿಗೆ ನಮನ ಸಲ್ಲಿಸಿದರು. ನಂತರ ಅನ್ನ ಸಂತರ್ಪಣೆಯೂ ನಡೆಯಿತು. ಪುತ್ಥಳಿ ಅನಾವರಣ ನಿಮಿತ್ತ ಅಭಿಮಾನಿಗಳು ಪಟ್ಟಣದ ವಾಲ್ಮೀಕಿ ವೃತ್ತದಿಂದ ಬಸ್ ನಿಲ್ದಾಣದವರೆಗೆ ಎರಡು ಬದಿಯಲ್ಲಿ ಪುನೀತ್ ಫ್ಲೆಕ್ಸ್‌ಗಳನ್ನು ಸಾಲಾಗಿ ಕಟ್ಟಲಾಗಿತ್ತು. ಪಪಂ ಸದಸ್ಯರಾದ ಅಭಿಷೇಕ ಕಲ್ಲುಬಾಗಿಲಮಠ, ರಾಕೇಶ ಮೋಚಿ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಪ್ರಮುಖರಾದ ಈಶಪ್ಪ ಹಿರೇಮನಿ, ಹರೀಶ ಪೂಜಾರಿ, ಬಸವರಾಜ ಕೋರಿ, ಟಿ.ಜೆ.ರಾಮಚಂದ್ರ, ಹನುಮೇಶ ವಾಲೇಕಾರ್, ಹುಲುಗಪ್ಪ ವಾಲೇಕಾರ್, ಪರಸಪ್ಪ ಚಿಟಗಿ, ನಾಗೇಂದ್ರ, ಮಂಜುನಾಥ, ತಿಮ್ಮಣ್ಣ, ನಾಗರಾಜ, ಭೀಮ, ಮಾರುತಿ ಇತರರಿದ್ದರು.