ಕನಕಗಿರಿ: ಪಟ್ಟಣದ 7ನೇ ವಾರ್ಡ್‌ನ ಗ್ರಾಮದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಸಂಜೆ ಜಿಟಿ ಜಿಟಿ ಮಳೆಯಲ್ಲೂ ಉಚ್ಚಾಯ ಜರುಗಿತು.

ಬೆಳಗ್ಗೆ ದೇವಸ್ಥಾನದಲ್ಲಿ ಹೋಮ, ಅಭಿಷೇಕ ನೆರವೇರಿಸಲಾಯಿತು. ದೇವಿ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರು ಹೋಳಿಗೆ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಭಕ್ತರಿಗಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮಧ್ಯಾಹ್ನದಿಂದ ಮಳೆ ಆರಂಭವಾಗಿದ್ದು, ಸಂಜೆ ಕಡಿಮೆಯಾದ ಮೇಲೆ ದೇವಸ್ಥಾನದಿಂದ ಪಾದಗಟ್ಟೆಯವರೆಗೆ ಜಿಟಿ ಜಿಟಿ ಮಳೆಯಲ್ಲೇ ನೂರಾರು ಭಕ್ತರ ಸಮ್ಮುಖದಲ್ಲಿ ಉಚ್ಚಾಯ ಜರುಗಿತು.
ಡೊಳ್ಳು, ವಾದ್ಯವೇಳ ಮೆರವಣಿಗೆಗೆ ಮೆರುಗು ತಂದವು. ಉಚ್ಚಾಯ ಸಾಗುತ್ತಿದ್ದಂತೆ ದೇವಿಗೆ ಭಕ್ತರು ಜೈಕಾರ ಹಾಕಿ, ಬಾಳೆಹಣ್ಣು ಎಸೆದು ಸಂಭ್ರಮಿಸಿದರು.