ಸಾಲಬಾಧೆಗೆ ರೈತ ಆತ್ಮಹತ್ಯೆ

ಕನಕಗಿರಿ: ಸಮೀಪದ ಸೋಮಸಾಗರ ಗ್ರಾಮದ ರೈತ ದ್ಯಾಮಣ್ಣ ಹೊಸಮನಿ (58) ಸಾಲಭಾದೆಗೆ ಶನಿವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತ ಎಸ್‌ಬಿಐ ಕನಕಗಿರಿ, ಪಿಎಲ್‌ಡಿ ಬ್ಯಾಂಕ್, ವಿಜಯ ಬ್ಯಾಂಕ್ ಸೇರಿ ಒಟ್ಟು 3.50 ಲಕ್ಷ ರೂ. ಬೆಳೆ ಸಾಲ ಪಡೆದಿದ್ದರು. ಪ್ರಸಕ್ತ ವರ್ಷ 12 ಎಕರೆ ಜಮೀನಿನಲ್ಲಿ ಬಿತ್ತಿದ ಬೆಳೆಯೂ ಮಳೆೆ ಇಲ್ಲದೇ ಸಂಪೂರ್ಣ ಒಣಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಎಂದು ಮೃತ ರೈತನ ಮಗ ಸುರೇಶ ಹೊಸಮನಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಭೇಟಿ : ರೈತನ ಮನೆಗೆ ತಹಸೀಲ್ದಾರ್ ರವಿ ಅಂಗಡಿ ಮತ್ತು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಜಂಬಣ್ಣ ಐಲಿ, ಕಂದಾಯ ನಿರೀಕ್ಷಕ ಅಕ್ತರಸಾಬ್, ಗ್ರಾಮಲೆಕ್ಕಾಧಿಕಾರಿ ಸಂಗಮ್ಮ ಹಿರೇಮಠ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.