ಕನಕದಾಸರ ಸಾಹಿತ್ಯ, ಕೀರ್ತನೆ ಓದಿ

ಮಂಡ್ಯ: ಕನಕದಾಸರು ರಚಿಸಿರುವ ಕೀರ್ತನೆಗಳು ಕನ್ನಡದ ಅತಿ ಶ್ರೇಷ್ಠ ಸಾಹಿತ್ಯದ ಹೆಗ್ಗಳಿಕೆಗೆ ಪಾತ್ರವಾಗಿವೆ ಎಂದು ಸಾಹಿತಿ ಡಾ.ಮಳಲಿ ವಸಂತಕುಮಾರ ಅಭಿಪ್ರಾಯಪಟ್ಟರು.
ತಾಲೂಕಿನ ಬಿ.ಹೊಸೂರು ಕಾಲನಿಯ ಅಕ್ಕಮಹಾದೇವಿ ಮಹಿಳಾ ವಿವಿಯ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಕನಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ನೆಲೆಗಟ್ಟಿನಲ್ಲಿ ವೈಚಾರಿಕತೆಯ ವಿಚಾರವನ್ನು ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ. ಪ್ರತಿಯೊಬ್ಬರೂ ಕನಕದಾಸರ ಸಾಹಿತ್ಯವನ್ನು ಓದಲೇಬೇಕು ಎಂದು ಸಲಹೆ ನೀಡಿದರು.
ಕನಕದಾಸರು ಕನ್ನಡ ನಾಡಿನ ಬಹುದೊಡ್ಡ ಆಸ್ತಿ, ಜ್ಞಾನದಿಂದ. ಜಾತಿ-ಮತಗಳನ್ನು ಮೀರಿ ನಿಂತವರು. ಹಾಗಾಗಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಕಲಾವಿದ ಸಿ.ಪಿ.ವಿದ್ಯಾಶಂಕರ್ ಗಮಕ ವಾಚನ ಮಾಡಿದರು. ಕೇಂದ್ರದ ವಿಶೇಷಾಧಿಕಾರಿ ಪ್ರೊ.ವಿಜಯಶ್ರೀ ಸಬರದ, ಕನ್ನಡ ವಿಭಾಗದ ಅತಿಥಿ ಉಪನ್ಯಾಸಕಿ ಡಾ.ಟಿ.ವಿ.ತೇಜಸ್ವಿನಿ ಇದ್ದರು.

 

29