ವಿಜಯನಗರ: ಕನಕದಾಸರ ಜಯಂತಿ ಹಿನ್ನೆಲೆಯಲ್ಲಿ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಕನಕದಾಸ ವೃತ್ತದಲ್ಲಿ ಪುತ್ಥಳಿ ಅನಾವರಣ ಮಾಡಲಾಯಿತು. ಈ ಸಂದರ್ಭದಲ್ಲಿ ಸಚಿವ ಆನಂದ್ ಸಿಂಗ್ ವಿಶಿಷ್ಟವಾಗಿ ಜನರ ಗಮನ ಸೆಳೆದದ್ದು ಸುಳ್ಳಲ್ಲ.
ಕನಕದಾಸರ ಪುತ್ಥಳಿ ಅನಾವರಣದ ಸಭಾ ಕಾರ್ಯಕ್ರಮದಲ್ಲಿ ಆನಂದ್ ಸಿಂಗ್ ತಮ್ಮ ಮೊಬೈಲ್ನಲ್ಲಿದ್ದ ಹಾಡನ್ನು ವೇದಿಕೆಯ ಮುಂಭಾಗದಲ್ಲಿದ್ದ ಜನರಿಗೆ ಕೇಳಿಸಿದ್ದಾರೆ. ತಮ್ಮ ಭಾಷಣದ ನಡುವೆ ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಎನ್ನುವ ಹಾಡನ್ನು ಜನರಿಗೆ ಕೇಳಿಸಿದಾಗ ಜನರೂ ಉತ್ತಮ ಸ್ಪಂದನೆ ನೀಡಿದರು.
ಹಾಡನ್ನು ಪ್ಲೇ ಮಅಡುವ ಸಂದರ್ಭ ಈ ಗೀತೆಗೆ ಸಚಿವ ಆನಂದ್ ಸಿಂಗ್ ತಲೆಯಾಡಿಸುತ್ತಾ ಸಣ್ಣಗೆ ಧ್ವನಿ ಸೇರಿಸಿದರು. ಗೀತೆಯನ್ನು ಕೇಳುತ್ತಿದ್ದಂತೆಯೇ ಜನರು ಚಪ್ಪಾಳೆ ಮತ್ತು ಸಿಳ್ಳೆ ಕೇಕೆ ಹೊಡೆದರು. ಈ ಹಾಡನ್ನು ಕೇಳಿಸಿದ ನಂತರ ‘ನೀವು ಕೂಡ ಹೀಗೇ ಆಗಬೇಕು’ ಎಂದು ಜನರಿಗೆ ಆನಂದ್ ಸಿಂಗ್ ಸಲಹೆ ನೀಡಿದರು.