More

  ರಸ್ತೆ ಅಪಘಾತದಲ್ಲಿ ಬಾಲಕಿ ಸಾವು

  ಕಾನಹೊಸಹಳ್ಳಿ: ಎಂ.ಬಿ.ಅಯ್ಯನಹಳ್ಳಿ ಬಳಿ ಮಂಗಳವಾರ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸಿದ್ದಾಪುರ ಗ್ರಾಮದ ಸಿಂಚನ (12) ಮೃತೆ. ಬೈಕ್ ಸವಾರ ಮಹೇಶ್(45), ಈತನ ಪುತ್ರ ಎರಡು ವರ್ಷದ ಲಕ್ಷ್ಮಣ ಗಾಯಗೊಂಡಿದ್ದಾರೆ.

  ಇದನ್ನೂ ಓದಿ: ಮೈಸೂರು ಭೀಕರ ಅಪಘಾತ : ಬಸ್ ಚಾಲಕ ಬಂಧನ

  ಬಾಲಕಿಯ ವರ್ಗಾವಣೆ ಪತ್ರ ಪಡೆಯಲೆಂದು ಕೂಡ್ಲಿಗಿಗೆ ಬೈಕ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 50ರ ಮಾರ್ಗವಾಗಿ ಹೋಗುತ್ತಿರುವಾಗ ಲಾರಿ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಸಿಂಚನಳನ್ನು ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸಲಿಲ್ಲ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳಕ್ಕೆ ಕಾನಹೊಸಹಳ್ಳಿ ಪಿಎಸ್‌ಐ ಎ.ಯರಿಯಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  ಮರುಕಳಿಸಿದ ಅವಘಡ

  ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒಂದು ವರ್ಷದ ಹಿಂದೆ ವೃದ್ಧನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದ, ಸ್ಥಳೀಯರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ನಂತರ ಹೆದ್ದಾರಿ ಪ್ರಾಧಿಕಾರ ಸ್ಥಳೀಯರೊಂದಿಗೆ ಸಭೆ ನಡೆಸಿ ಸ್ಕೈ ವಾಕರ್ ನಿರ್ಮಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈವರೆಗೆ ಯಾವುದೇ ಕೆಲಸ ಆಗಿಲ್ಲ. ಈಗ ಮತ್ತೊಂದು ಜೀವ ಬಲಿಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  ಅನಧಿಕೃತ ಯೂಟರ್ನ್ ಬಂದ್

  ಹೆದ್ದಾರಿಯಲ್ಲಿರುವ ಅನಧಿಕೃತ ಯೂಟರ್ನ್‌ಗಳನ್ನು ಪಿಎಸ್‌ಐ ಯರಿಯಪ್ಪ ಅಂಗಡಿ ಜೆಸಿಬಿಯಿಂದ ಬಂದ್ ಮಾಡಿಸಿದರು. ಯಾರಾದರೂ ತೆರವುಗೊಳಿಸಿದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts