More

    ವಿದ್ಯುತ್ ಸ್ಪರ್ಶ ಬಾಲಕಿ ಸಾವು

    ಕಾನಹೊಸಹಳ್ಳಿ: ಬಾಲಕಿಗೆ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಾತ್ರಿಕೆಹಟ್ಟಿಯಲ್ಲಿ ಇಂದು ನಡೆದಿದೆ.

    ತಮ್ಮ ಕಣದಿಂದ ಆಟವಾಡುತ್ತಾ ಮನೆಕಡೆ ವಾಪಾಸು ಬರುತಿರುವಾಗ ಬಾಲಕಿ, ಆಕಸ್ಮಿಕವಾಗಿ ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಕಟ್ಟಿದ್ದ ಗೈವಯರ್ ತಂತಿ ಸ್ಪರ್ಶ ಮಾಡಿದ್ದರಿಂದ ಕರೆಂಟ್ ಶಾಕ್ ನಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗಡಿಗ್ರಾಮ ಕಾತ್ರಿಕೆಹಟ್ಟಿಯಲ್ಲಿ ಶುಕ್ರವಾರ ಬೆಳಿಗ್ಗೆ ಜರುಗಿದೆ.

    ಕಾತ್ರಿಕೆಹಟ್ಟಿ ಗ್ರಾಮದ ಹಂಪಮ್ಮ ಬೋರಣ್ಣ ದಂಪತಿಯ ಕೊನೆ ತುಳಸಿ ವಿದ್ಯುತ್ ಸ್ಪರ್ಶಕ್ಕೆ ಬಲಿಯಾದ ದುರ್ದೈವಿ. ಬೆಳಿಗ್ಗೆ ಮನೆಯಿಂದ ಕಣಕ್ಕೆ ಹೋಗಿ ಮನೆ ಕಡೆಗೆ ಬರುವಾಗ ಬಾಲಕಿ ದಾರಿ ಪಕ್ಕದ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಗೈವಯರ್ ಅನ್ನು ಆಕಸ್ಮಿಕವಾಗಿ ಸ್ಪರ್ಶ ಮಾಡಿದ್ದೇ ಘಟನೆಗೆ ಕಾರಣವಾಗಿದೆ. ಜೆಸ್ಕಾಂ ಇಲಾಖೆಯ ಎಡವಟ್ಟಿನಿಂದ ಕಂಬದಲ್ಲಿ ಕಳೆದ ರಾತ್ರಿ ಮಳೆಗಾಳಿಗೆ ವಿದ್ಯುತ್ ಗ್ರೌಂಡ್ ಆಗಿದೆ. ಅದನ್ನು ಆಕಸ್ಮಿಕವಾಗಿ ಬಾಲಕಿ ಮುಟ್ಟಿದ ಪರಿಣಾಮ ದುರ್ಘಟನೆ ನಡೆದಿದೆ. ಸ್ಥಳದಲ್ಲಿವರು ವಿದ್ಯುತ್ ಸ್ಪರ್ಶ ಬಿಡಿಸುವಷ್ಟರಲ್ಲಿ ಬಾಲಕಿಯ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಗ್ರಾಮದ ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
    ಘಟನಾ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದರು.
    ಆಟವಾಡಿಕೊಂಡು ಮನೆಯಿಂದ ಹೋದ ಮಗಳು ಮನೆಗೆ ಹೆಣವಾಗಿ ವಾಪಸ್ಸು ಬಂದಳು ಎಂದು ಹೆತ್ತವರು ಹಾಕುವ ಕಣ್ಣೀರು ರೋಧನಗೈದರೆ. ಬಾಲಕಿ ಮೃತದೇಹದ ನೋಡಲು ಅಗಮಿಸಿದ ಗ್ರಾಮದ ಜನರು ಕಣ್ಣೀರ ಕಂಬನಿಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.

    See also  ಮಾವನಿಂದ ಅತ್ಯಾಚಾರಕ್ಕೀಡಾಗಿದ್ದ ಸೊಸೆ ಸಾವು; ಪತಿ ಮನೆಮುಂದೆಯೇ ಅಂತ್ಯಸಂಸ್ಕಾರಕ್ಕೆ ಪಟ್ಟು...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts