More

    ಕಾಲಿನಿಂದಲೇ ಹಕ್ಕು ಚಲಾಯಿಸಿದ ಅಂಗವಿಕಲೆ ಲಕ್ಷ್ಮೀದೇವಿ

    ಕಾನಹೊಸಹಳ್ಳಿ: ಗುಡೇಕೋಟೆ, ಕಾನಹೊಸಹಳ್ಳಿ ಹೋಬಳಿಯಲ್ಲಿ ಬುಧವಾರ ಸಣ್ಣಪುಟ್ಟ ಗೊಂದಲ ಹೊರತು ಬಹುತೇಕ ಶಾಂತಿಯುತ ಮತದಾನವಾಗಿದೆ.

    ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎನ್.ಟಿ.ಶ್ರೀನಿವಾಸ್ ಅವರು ಪತ್ನಿ ಡಾ.ಪುಷ್ಪಾ, ತಾಯಿ ಓಬಮ್ಮ ಜತೆ ನರಸಿಂಹನಗಿರಿ ಮತಗಟ್ಟೆ ಸಂಖ್ಯೆ 86ಕ್ಕೆ ಆಗಮಿಸಿ ಹಕ್ಕು ಚಲಾಯಿಸಿದರು.

    ಕಾಲಿನಿಂದಲೇ ಹಕ್ಕು ಚಲಾಯಿಸಿದ ಅಂಗವಿಕಲೆ ಲಕ್ಷ್ಮೀದೇವಿ

    ಹುಟ್ಟಿನಿಂದಲೂ ಭುಜದವರೆಗೆ ಎರಡೂ ಕೈಗಳಿಲ್ಲದ ಲಕ್ಷ್ಮೀದೇವಿ, ಗುಂಡುಮುಣುಗು ಗ್ರಾಮದ ಮತಗಟ್ಟೆ 120ಕ್ಕೆ ತೆರಳಿ ಕಾಲಿನಿಂದ ಹಕ್ಕು ಚಲಾಯಿಸಿದರೆ, ಹುಲಿಕುಂಟೆ ಗ್ರಾಮದ 105 ವರ್ಷದ ಶತಾಯುಷಿ ಪೆನ್ನಮ್ಮ ಮೊಮ್ಮಗನೊಂದಿಗೆ ನಡೆದುಕೊಂಡೆ ಮತಗಟ್ಟೆಗೆ ಅಗಮಿಸಿ ಹಕ್ಕು ಚಲಾಯಿಸುವ ಮೂಲಕ ಗಮನ ಸೆಳೆದರು.

    ಎಲ್ಲ ಮತಕೇಂದ್ರಗಳಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಗುಡೇಕೋಟೆ ಹೋಬಳಿಯ ಸೂಕ್ಷ್ಮ ಮತಗಟ್ಟೆ ಚಿಕ್ಕಜೋಗಿಹಳ್ಳಿ ತಾಂಡಾಕ್ಕೆ ವಿಜಯನಗರ ಎಸ್ಪಿ ಶ್ರೀಹರಿಬಾಬು ಭೇಟಿ ನೀಡಿ ಪರಿಶೀಲಿಸಿದರು.

    ಕಾಲಿನಿಂದಲೇ ಹಕ್ಕು ಚಲಾಯಿಸಿದ ಅಂಗವಿಕಲೆ ಲಕ್ಷ್ಮೀದೇವಿ

    ನುಂಕನಹಳ್ಳಿಯಲ್ಲಿ ಮತದಾನ ಬಹಿಷ್ಕಾರ

    ಗಂಡಬೊಮ್ಮನಹಳ್ಳಿ ಗ್ರಾಪಂನ ನುಂಕನಹಳ್ಳಿ ಗ್ರಾಮಸ್ಥರು 3ಕಿಮೀ ದೂರದ ಮಾರಮ್ಮನಹಳ್ಳಿಗೆ ಹೋಗಿ ಮತದಾನ ಮಾಡಲು ಯಾವುದೇ ವಾಹನ ಸೌಲಭ್ಯವಿಲ್ಲ. ಇದರಿಂದ ವೃದ್ಧರು, ಮಹಿಳೆಯರಿಗೆ ತೊಂದರೆಯಾಗಿದೆ. ನಮ್ಮೂರಿನಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸುವಂತೆ ಒತ್ತಾಯಿಸಿದ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮತದಾನ ಬಹಿಷ್ಕರಿಸಿದರು.

    ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಗುಡೇಕೋಟೆ ನಾಡಕಚೇರಿ ಕಂದಾಯ ನಿರೀಕ್ಷಕ ಚೌಡಪ್ಪ, ಗ್ರಾಮ ಲೆಕ್ಕಾಧಿಕಾರಿ ನಾಗವೇಣಿ ಇತರ ಅಧಿಕಾರಿಗಳ ಎದುರು ತಮ್ಮ ಸಮಸ್ಯೆ ಹೇಳಿಕೊಂಡ ಗ್ರಾಮಸ್ಥರು, ಗ್ರಾಮದಲ್ಲಿ 373ಮತಗಳಿದ್ದರೂ ಸ್ಥಳೀಯವಾಗಿ ಮತಕೇಂದ್ರ ಸ್ಥಾಪನೆ ಮಾಡಿಲ್ಲ.

    ನಮ್ಮೂರಿನಲ್ಲೇ ಮತಗಟ್ಟೆ ತೆರೆದರೆ ಮಾತ್ರ ಮತ ಹಾಕುವುದಾಗಿ ಎಚ್ಚರಿಸಿದರು. ಮುಂದಿನ ಸಲ ಪ್ರತ್ಯೇಕ ಮತಕೇಂದ್ರ ಸ್ಥಾಪಿಸಲು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಮನವೊಲಿಸಿದ ನಂತರ ನುಂಕನಹಳ್ಳಿ ಮತದಾರರು ಮಾರಮ್ಮನಹಳ್ಳಿ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts