ಕಂಪ್ಲಿ: ಇಲ್ಲಿನ ತೊಗಟವೀರ ಕ್ಷತ್ರಿಯ ನೇಕಾರ ಭವನದಲ್ಲಿ ಭಾನುವಾರ ಕಂಪ್ಲಿ ತಾಲೂಕು ಪದ್ಮಶಾಲಿ ಬಹೋತ್ತಮ ನೇಕಾರ ಸಂಘ ಅಸ್ತಿತ್ವಕ್ಕೆ ಬಂದಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಪಿ.ಬ್ರಹ್ಮಯ್ಯ ಮಾತನಾಡಿ, ಪದ್ಮಶಾಲಿ ಸಮುದಾಯ ಭವನ ನಿರ್ಮಾಣ ಉದ್ದೇಶವಿದ್ದು, ನಿವೇಶನ ಮತ್ತು ಅನುದಾನ ಒದಗಿಸಲು ಪುರಸಭೆ ಮುಂದಾಗಬೇಕು. ಸಮುದಾಯದವರು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳೊಂದಿಗೆ ರಾಜಕೀಯ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಾಧಿಸಲು ಜಾಗೃತರಾಗಬೇಕು ಎಂದರು.
ತಾಲೂಕು ಘಟಕಕ್ಕೆ ಟಿ.ಹನುಮಂತಪ್ಪ (ಗೌರವಾಧ್ಯಕ್ಷ), ಪಿ.ಬ್ರಹ್ಮಯ್ಯ (ಅಧ್ಯಕ್ಷ), ಜಗದೀಶ ಪೂಜಾರ (ಪ್ರ.ಕಾ.), ರಂಗಪ್ಪ, ಸಿ.ತುಕರಾಮ್ (ಉಪಾಧ್ಯಕ್ಷ), ಟಿ.ವಿಜಯಕುಮಾರ, ಎನ್.ತುಕಾರಾಮ್ (ಕಾರ್ಯದರ್ಶಿಗಳು), ಎಲ್.ಹನುಮಂತರಾಯ(ಖಜಾಂಚಿ), ಎನ್.ಶ್ರೀನಿವಾಸ, ಡಿ.ಪಂಪಾಪತಿ, ಎನ್.ಮಂಜುನಾಥ (ಸಲಹಾ ಸಮಿತಿ ಸದಸ್ಯರು), ಟಿ.ಶೇಷಾದ್ರಿ, ಪಿ.ರುದ್ರಮುನಿ, ಎನ್.ಮಂಜುನಾಥ, ರಾಘವೇಂದ್ರ, ಡಿ.ಕನಕರಾಯ, ಪಿ.ಗಂಗಾಧರ, ಡಿ.ಕೇಶವ, ಜಿ.ಗೋವಿಂದರಾಜ, ರಾಮಸ್ವಾಮಿ, ಪೂಜಾರಿ ನಾಗರಾಜ, ಎನ್.ಶಿವಶಂಕರ, ಪಿ.ವೆಂಕಟೇಶ ಸದಸ್ಯರಾಗಿ ಆಯ್ಕೆಗೊಂಡರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಕಂಪ್ಲಿ ನೇಕಾರ ಸಮುದಾಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಸುಧಾಕರ ಇತರರಿದ್ದರು.