ಶಾರ್ಟ್ ಸರ್ಕ್ಯೂಟ್, ಕಾರ್ ಭಸ್ಮ

ಕಂಪ್ಲಿ: ತಾಲೂಕಿನ ರಾಮಸಾಗರದ ರಾಮಲಿಂಗೇಶ್ವರ ದೇವಸ್ಥಾನ ಬಳಿ ಭಾನುವಾರ ರಾತ್ರಿ ಅಗ್ನಿ ಅವಘಡದಲ್ಲಿ 9.3 ಲಕ್ಷ ರೂ. ಮೌಲ್ಯದ ಹೊಂಡೈ ಕ್ರೀಟಾ ಕಾರು ಸಂಪೂರ್ಣವಾಗಿ ಸುಟ್ಟಿದೆ. ರಾತ್ರಿ ವೇಳೆ ಜೋರಾಗಿ ಗಾಳಿ ಬೀಸಿದ ಪರಿಣಾಮ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕೂಟ್ ಸಂಭವಿಸಿದ್ದು, ಗ್ರಾಮದ ಮಂಜುನಾಥ ಅವರ ಹೊಲದ ಬಳಿಯ ಶೆಡ್‌ನಲ್ಲಿ ನಿಲ್ಲಿಸಲಾಗಿದ್ದ ಕಾರು, ಕಾರಿನ ಶೆಡ್ಡು ಹಾಗೂ ಒಂದು ಹುಲ್ಲಿನ ಬಣವೆ ಸುಟ್ಟಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.