More

    ಸನ್ಮಾರ್ಗದಲ್ಲಿ ನಡೆದರೆ ಶನಿದೇವನ ಕೃಪೆ- ವಿದ್ಯಾಭಾರತಿ ಸ್ವಾಮೀಜಿ ಆಶೀರ್ವಚನ

    ಕಂಪ್ಲಿ: ಅಹಿಂಸಾ, ಸತ್ಯ, ನ್ಯಾಯ ನೀತಿ ಮಾರ್ಗದಲ್ಲಿ ಜೀವಿಸುವವರು ಮಾತ್ರ ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಸಾಧ್ಯ ಎಂದು ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಸ್ವಾಮೀಜಿ ಹೇಳಿದರು.

    ಪಟ್ಟಣದ ಸತ್ಯನಾರಾಯಣಪೇಟೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ಶನೈಶ್ಚರ ಜಯಂತಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ನೀಡಿದರು. ಶನಿ ದೇವರು ಕೆಟ್ಟ ದೃಷ್ಟಿಯವನಲ್ಲ. ಪಾಪ ಪುಣ್ಯಗಳಿಗೆ ತಕ್ಕಂತೆ ಫಲ ನೀಡಲಿದ್ದಾನೆ.

    ಇದನ್ನೂ ಓದಿ: ಈ ರಾಶಿಯವರಿಗೆ ನಕಾರಾತ್ಮಕ ಕೆಲಸವೂ ಸಕಾರಾತ್ಮಕವಾಗಿ ಬಯಸಿದ ಫಲ ಸಿಗುತ್ತದೆ: ವಾರಭವಿಷ್ಯ

    ಅಧರ್ಮದ ಕಡೆ ಸಾಗುವಂತೆ ಪ್ರಭಾವ ಬೀರುವುದಿಲ್ಲ. ನಮ್ಮ ಆಯ್ಕೆಗೆ ತಕ್ಕ ಪ್ರತಿಫಲ ನೀಡುವ ಶನಿ ದೇವನ ಕೃಪೆಗೆ ಪಾತ್ರರಾಗಲು ಸದಾ ಸನ್ಮಾರ್ಗದಲ್ಲಿ ನಡೆಯಬೇಕು. ಶನೈಶ್ಚರನ ಬಗ್ಗೆ ಭಯ ಮತ್ತು ಕೆಟ್ಟ ನಂಬಿಕೆಗಳಿಂದ ಹೊರಬರಬೇಕಿದೆ ಎಂದರು.

    ಶನಿದೇವರ ಪ್ರತಿಮೆಗೆ ಏಕಾದಶ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಸಂಖ್ಯಾಸಹಿತ ಏಕಮಂತ್ರಪೂರ್ವಕ ಮಹಾಪೂಜೆ, ಮಹಾಗಣಪತಿ, ಆದಿತ್ಯಾದಿ ನವಗ್ರಹ ಸಹಿತ, ಶನೈಶ್ಚರ ಅಷ್ಟೋತ್ತರ ಸಂಖ್ಯಾ ವೇದಮಂತ್ರಸಹಿತವಾದ ತಿಲಾ ಹೋಮ, ಪುರುಷಸೂಕ್ತ, ಶ್ರೀಸೂಕ್ತ, ಮೃತ್ಯುಂಜಯ ಹೋಮ ಶ್ರದ್ಧಾಭಕ್ತಿಗಳಿಂದ ನೆರವೇರಿದವು. ಶನಿದೇವರ ವಿಗ್ರಹಕ್ಕೆ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.

    ಬ್ರಾಹ್ಮಣರಿಗೆ ವಸ್ತ್ರದಾನ ಮಾಡಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು. ಪ್ರಮುಖರಾದ ನೀತು ಜಗದೀಶ್ ರಾಯ್ಕರ್, ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಆಶ್ವತ್ಥನಾರಾಯಣ, ಸಂಪತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts