ಜಮೀನಿನಲ್ಲಿ ಶೇಖರಿಸಿದ್ದ ಮರಳು ವಶಕ್ಕೆ

ಕಂಪ್ಲಿ: ಸಮೀಪದ ದೇವಲಾಪುರದ ಕುರೇಕುಪ್ಪ ರಸ್ತೆ ಬಳಿಯ ಜಮೀನಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮರಳನ್ನು ತಹಸೀಲ್ದಾರ್ ನೇತೃತ್ವದ ತಂಡ ಸೋಮವಾರ ವಶಕ್ಕೆ ಪಡೆದಿದೆ.

ದೇವಲಾಪುರದ ತಿಪ್ಪನಗೌಡ ಎಂಬುವವರ ಜಮೀನಿನಲ್ಲಿ ಮರಳು ಶೇಖರಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಎಂ.ರೇಣುಕಾ ನೇತೃತ್ವದಲ್ಲಿ ಪಿಡಬ್ಲುೃಡಿ, ಕುಡುತಿನಿ ಪೊಲೀಸರು ದಾಳಿ ನಡೆಸಿ ಅಂದಾಜು 16-18 ಟ್ರಾೃಲಿ ಮರಳು ವಶಕ್ಕೆ ಪಡೆದಿದ್ದಾರೆ. ಪಿಡಬ್ಲುೃಡಿಗೆ ಮರಳು ಒಪ್ಪಿಸಲಾಗಿದೆ. ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಪಿಡಬ್ಲುೃಡಿ ಇಂಜಿನಿಯರ್ ತಿಪ್ಪೇಸ್ವಾಮಿ, ಕಂದಾಯ ಅಧಿಕಾರಿ ಎಸ್.ಎಸ್.ತಂಗಡಗಿ, ಗ್ರಾಮಲೆಕ್ಕಾಧಿಕಾರಿ ವಿಜಯಕುಮಾರ್, ಕುಡುತಿನಿ ಪೊಲೀಸ್ ಠಾಣೆ ಎಎಸ್‌ಐ ಈಶ್ವರಪ್ಪ, ಮುಖ್ಯಪೇದೆ ನಾಗರಾಜ, ಗೃಹ ರಕ್ಷಕ ಸಿಬ್ಬಂದಿ ಚಿದಾನಂದಪ್ಪ, ಗ್ರಾಮ ಸಹಾಯಕ ಹೀಮಂತರಾಜ್ ಇದ್ದರು.

Leave a Reply

Your email address will not be published. Required fields are marked *