ಕ್ರಮಬದ್ಧ ಧ್ಯಾನದಿಂದ ಲಾಭ ಅನೇಕ – ಹೃತ್ಪೂರ್ವಕತಾ ಧ್ಯಾನ ತರಬೇತಿ ಸಂಸ್ಥೆ ಶಿಕ್ಷಕ ಎಂ.ರಾಮಚಂದ್ರ ಹೇಳಿಕೆ

ಕಂಪ್ಲಿ: ಕ್ರಮಬದ್ಧ ಧ್ಯಾನದಿಂದ ನಕರಾತ್ಮಕ ಯೋಚನೆಗಳು ದೂರವಾಗಿ ಮನಸು ಪ್ರಫುಲ್ಲವಾಗುತ್ತದೆ ಎಂದು ಹೃತ್ಪೂರ್ವಕತಾ ಧ್ಯಾನ ತರಬೇತಿ ಸಂಸ್ಥೆ ಶಿಕ್ಷಕ ಎಂ.ರಾಮಚಂದ್ರ ಹೇಳಿದರು.

ತಾಲೂಕಿನ ಕಂಪ್ಲಿ-ಕೊಟ್ಟಾಲ್ ಗ್ರಾಮದ ಶ್ರೀ ರಾಮಚಂದ್ರ ಮಿಷನ್ ಸಂಸ್ಥೆ ಆವರಣದಲ್ಲಿ ಹೃತ್ಪೂರ್ವಕತಾ ಧ್ಯಾನ ತರಬೇತಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ 20 ದಿನಗಳ ಕಾಲ ಹಮ್ಮಿಕೊಂಡಿರುವ ಉಚಿತ ಧ್ಯಾನ ತರಬೇತಿ ಬೇಸಿಗೆ ಶಿಬಿರ ಉದ್ಘಾಟಿಸಿ ಇತ್ತೀಚೆಗೆ ಮಾತನಾಡಿದರು.

ನಿರಂತರ ಧ್ಯಾನ, ಯೋಗ ಅಭ್ಯಾಸದಿಂದ ಪೂರ್ವಜರು ಸದೃಢರಾಗಿದ್ದರು. ವಿದ್ಯಾರ್ಥಿಗಳು ಧ್ಯಾನದ ಮೊರೆ ಹೋದಲ್ಲಿ ಜ್ಞಾಪಕ ಶಕ್ತಿ, ಕೌಶಲ, ಆತ್ಮಸ್ಥೈರ್ಯ, ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯ ಎಂದರು. ಪಟ್ಟಣ ಸೇರಿ ಸುತ್ತಲಿನ 60ಕ್ಕೂ ಅಧಿಕ ವಿದ್ಯಾರ್ಥಿಗಳು, ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿದ್ದರು. ತರಬೇತಿ ಕೇಂದ್ರದ ಸ್ವಯಂ ಸೇವಕರಾದ ಕೆ.ನಾಗರಾಜ, ಬಿ.ರಮೇಶ್, ಪಿ.ಗಂಗಾಧರ ತರಬೇತಿ ನೀಡಿದರು.