ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು: ಕಂಪ್ಲಿ ಶಾಸಕ ಗಣೇಶ್​

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು ಕಂಪ್ಲಿಯ ಶಾಸಕ ಗಣೇಶ್​ ಹೊಸ ಬಾಂಬ್​ ಸಿಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಗಣೇಶ್​ ಅವರು ಸಿದ್ದರಾಮಯ್ಯ ಮತ್ತೆ ಈ ಅವಧಿಗೋ ಅಥವಾ ಮುಂದಿನ ಅವಧಿಗೋ ಅನ್ನೋದು ನಮಗೆ ಗೊತ್ತಿಲ್ಲ. ಆದರೆ ಅವರೇ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ಆಗುವುದಿಲ್ಲ

ಶಾಸಕರ ಅಸಮಾಧಾನ ತಣಿಸಲು ಡಿ.22 ರಂದು ಸಂಪುಟ ವಿಸ್ತರಣೆ ಮಾಡಲು ಎಂದು ನಮ್ಮ ನಾಯಕರು ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ ಸಂಪುಟ ವಿಸ್ತರಣೆ ಆದರೆ ಅಸಮಾಧಾನ ಇನ್ನಷ್ಟು ಹೆಚ್ಚುತ್ತೆ. ಹಾಗಾಗಿ ಡಿ. 22ರಂದು ಸಂಪುಟ ವಿಸ್ತರಣೆ ಆಗುವುದಿಲ್ಲ. ಲೋಕಸಭೆ ಚುನಾವಣೆ ಬಳಿಕವೇ ಸಂಪುಟ ವಿಸ್ತರಣೆ ಆಗುವುದು ಎಂದು ಗಣೇಶ್​ ತಿಳಿಸಿದ್ದಾರೆ.