ಆನಂದ್​ ಸಿಂಗ್​ ಮೇಲಿನ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್​ ಬಂಧನ

ಬೆಂಗಳೂರು: ಬಿಡದಿ ಬಳಿಯ ಈಗಲ್​ಟೌನ್​ ರೆಸಾರ್ಟ್​ನಲ್ಲಿ ನಡೆದಿದ್ದ ಶಾಸಕ ಆನಂದ್​ ಸಿಂಗ್​ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಕಂಪ್ಲಿಯ ಕಾಂಗ್ರೆಸ್​ ಶಾಸಕ ಜೆ.ಎನ್​. ಗಣೇಶ್ ಅವರನ್ನು ಗುಜರಾತ್​ನಲ್ಲಿ ಬಂಧಿಸಲಾಗಿದೆ.

ಆನಂದ್​ ಸಿಂಗ್​ ಮೇಲೆ ತೀವ್ರ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಗಣೇಶ್​ ಘಟನೆ ನಡೆದ ನಂತರ ತಲೆಮರೆಸಿಕೊಂಡಿದ್ದರು. ಗಣೇಶ್​ರನ್ನು ಬಂಧಿಸಲು ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಈಗ ಹಲ್ಲೆ ನಡೆದು ಬರೋಬ್ಬರಿ 1 ತಿಂಗಳ ಬಳಿಕ ಪೊಲೀಸರು ಗಣೇಶ್ ಅವರನ್ನು ಬಂಧಿಸಿದ್ದಾರೆ.

ಈ ನಡುವೆ ಗಣೇಶ್​ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ ನ್ಯಾಯಾಲಯ ಫೆ. 25 ಕ್ಕೆ ವಿಚಾರಣೆ ನಿಗದಿಪಡಿಸಿತ್ತು. ಆದರೆ ಮಂಗಳವಾರ ಗಣೇಶ್​ ಪರ ವಕೀಲರು ಜಾಮೀನು ಅರ್ಜಿ ವಾಪಸ್​ ಪಡೆದಿದ್ದರು ಎಂದು ತಿಳಿದು ಬಂದಿತ್ತು.