ಕಂಪ್ಲಿ: ದೇವಸಮುದ್ರ ಗ್ರಾಮದ ಕೊಟ್ಟೂರೇಶ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರಾಧನಾ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಬುಧವಾರ ನಡೆಯಿತು.
ಕೊಪ್ಪಳ ಪ್ರಾದೇಶಿಕ ಯೋಜನಾಧಿಕಾರಿ ಸುಧಾ ಮಾತನಾಡಿ, ಕೌಟುಂಬಿಕ ಸಾಮರಸ್ಯ ಸಾಧಿಸಿದಲ್ಲಿ ನೆಮ್ಮದಿಯೊಂದಿಗೆ ಉತ್ತಮ ಜೀವನ ಸಾಗಿಸಲು ಸಾಧ್ಯ. ಸರ್ಕಾರಿ ಯೋಜನೆ, ಸಾಲ ಸೌಲಭ್ಯ ಬಳಸಿಕೊಂಡು ಸ್ವಉದ್ಯೋಗಸ್ಥರಾಗಬೇಕಿದೆ. ಧರ್ಮಸ್ಥಳ ಯೋಜನೆಯ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ ಪ್ರಗತಿಸಾಧಿಸುವಂತೆ ತಿಳಿಸಿದರು.
ಸರ್ಕಾರಿ ಹಿಪ್ರಾ ಶಾಲೆ ಶಿಕ್ಷಕಿ ಸುನೀತಾ ಮಾತನಾಡಿ, ಮಹಿಳೆಯರು ಆರ್ಥಿಕ ಶಿಸ್ತು ರೂಢಿಸಿಕೊಂಡಲ್ಲಿ ಉತ್ತಮ ಜೀವನ ಸಾಗಿಸಬಹುದು ಎಂದರು.
ಸಮನ್ವಯಾಧಿಕಾರಿ ರೇಖಾ, ವಲಯ ಮೇಲ್ವಿಚಾರಕ ಅವಿನಾಶ್, ಕೇಂದ್ರದ ಅಧ್ಯಕ್ಷೆ ಡಿ.ಎಂ.ಭಾಗ್ಯಮ್ಮ, ಒಕ್ಕೂಟದ ಅಧ್ಯಕ್ಷ ಸೋಮಲಿಂಗಂ, ಸೇವಾ ಪ್ರತಿನಿಧಿ ವನಜಾಕ್ಷಿ ಇತರರಿದ್ದರು.