ಕರಡಿ ಧಾಮಕ್ಕೆ ಚಿರತೆ ಸ್ಥಳಾಂತರ

ಕಂಪ್ಲಿ: ಸಮೀಪದ ಮೆಟ್ರಿಯ ಚಿನ್ನಾಪುರ ಹತ್ತಿರ ಭಾನುವಾರ ಸೆರೆಯಾದ 2 ವರ್ಷದ ಗಂಡು ಚಿರತೆಯನ್ನು ಹಳೆ ದರೋಜಿ ಕರಡಿಧಾಮಕ್ಕೆ ಸ್ಥಳಾಂತರಿಸಲಾಗಿದೆ. ಚಿರತೆ 1.5- 2 ಅಡಿ ಉದ್ದ, 1.5ಅಡಿ ಎತ್ತರವಿದೆ. ಅರಣ್ಯ ಇಲಾಖೆ ಮೇಲಧಿಕಾರಿಗಳ ಸೂಚನೆ ಮೇರೆಗೆ ಚಿರತೆಯನ್ನು ಮೃಗಾಲಯಕ್ಕೆ ಸ್ಥಳಾಂತರಿಸಲಾಗುವುದು. ಇನ್ನುಳಿದ ಚಿರತೆಗಳ ಸೆರೆಗೆ ತಾಲೂಕಿನ ಆರು ಕಡೆ ಇಟ್ಟಿರುವ ಬೋನುಗಳ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿ ಪರಿಶೀಲಿಸುತ್ತಿದ್ದಾರೆ ಎಂದು ಕಂಪ್ಲಿ, ಹೊಸಪೇಟೆ ತಾಲೂಕು ವಲಯ ಅರಣ್ಯಾಧಿಕಾರಿ ಎನ್.ಬಸವರಾಜ ತಿಳಿಸಿದ್ದಾರೆ.