ಕಂಪ್ಲಿಯ ಆಂಜನೇಯ ದೇವಸ್ಥಾನದ ಜಾಗ ಒತ್ತುವರಿ ಪರಿಶೀಲನೆ

ಕಂಪ್ಲಿ: ಪಟ್ಟಣದ ಶಿಬಿರದಿನ್ನಿಯ ಆಂಜನೇಯ ಸ್ವಾಮಿ ದೇವಸ್ಥಾನದ ಜಾಗ ಒತ್ತುವರಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಡಿಸಿ ಆದೇಶದ ಮೇರೆಗೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಮಹೇಶ್ ಸೋಮವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳೀಯ ನಿವಾಸಿ ಸಂಜೀವಪ್ಪ ಎನ್ನುವವರು ದೇವಸ್ಥಾನದ ಜಾಗ ಒತ್ತುವರಿಯಾಗಿದೆ ಎಂದು ದೂರು ನೀಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕಂದಾಯ ಇಲಾಖೆಯ ದಾಖಲೆ ಹಾಗೂ ನಕ್ಷೆಗಳನ್ನು ಪರಿಶೀಲಿಸಿದ ಬಳಿಕ ವರದಿ ಡಿಸಿಗೆ ಕಳುಹಿಸಲಾಗುವುದು ಎಂದು ಸಹಾಯಕ ಆಯುಕ್ತ ಮಹೇಶ್‌ತಿಳಿಸಿದರು.

ಸಂಜೀವಪ್ಪ ಮಾತನಾಡಿ, 2004ರಿಂದ ಎಸಿ ಹಾಗೂ ಡಿಸಿ ಕಚೇರಿಗೆ ದೇವಸ್ಥಾನಜಾಗ ಒತ್ತುವರಿ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ದೇವಸ್ಥಾನದ 43.28 ಎಕರೆ ಪೈಕಿ 0.74 ಸೆಂಟ್ಸ್ ಜಾಗದಲ್ಲಿ ಗುಡಿ, ಬಾವಿ ಹಾಗೂ ತುಳಸಿಕಟ್ಟೆ ಇದ್ದು, ಇದೇ ಸ್ಥಳದಲ್ಲಿ ಸ್ಥಳೀಯರು ಒಂದಷ್ಟು ಭಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.

Leave a Reply

Your email address will not be published. Required fields are marked *