25.1 C
Bangalore
Friday, December 6, 2019

ಕಂಬಳ ಕೋಣಗಳ ನೊಗ, ನೇಗಿಲು, ಹಲಗೆ, ಹಗ್ಗ, ಬೆತ್ತಗಳ ಸುತ್ತ

Latest News

ಯೋಗ ತರಬೇತಿಗೆ ಆಸ್ಟ್ರೇಲಿಯಾದಿಂದ ಆಹ್ವಾನ, ಬಳ್ಳಾರಿ ಸಾಧನಾ ಯೋಗ ಕೇಂದ್ರದ ರೂಪಾ ಮುರಳೀಧರ್ ಹೇಳಿಕೆ

ಬಳ್ಳಾರಿ: ಆಸ್ಟ್ರೇಲಿಯಾದ ಜನರಿಗೆ ಯೋಗ ಪದ್ಧತಿ ಬಗ್ಗೆ ತುಂಬಾ ಆಸಕ್ತಿ ಇದೆ. ಸೇವಾ ಆಸ್ಟ್ರೇಲಿಯಾ ಸಂಸ್ಥೆ ಮೂಲಕ ಆಸ್ಟ್ರೇಲಿಯಾದಲ್ಲಿ ಯೋಗ ತರಬೇತಿ ನೀಡಲು...

ಸೆನ್ಸೆಕ್ಸ್​ 334 ಅಂಶಕ್ಕೂ ಹೆಚ್ಚು ಕುಸಿತ: ನಿಫ್ಟಿ 12,000ಕ್ಕೂ ಕೆಳಕ್ಕೆ…

ಮುಂಬೈ: ಷೇರುಪೇಟೆಯ ವಾರಾಂತ್ಯದ ದಿನದ ವಹಿವಾಟಿನ ಕೊನೆಗೆ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 334 ಅಂಶ ಕುಸಿತ ಮತ್ತು ನ್ಯಾಷನಲ್...

ಬಳ್ಳಾರಿ ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ

ಬಳ್ಳಾರಿ: ನರೇಗಾ ರಾಷ್ಟ್ರೀಯ ಪ್ರಶಸ್ತಿ ಶಿಫಾರಸಿಗೆ ದೇಶದ ಒಂಬತ್ತು ಜಿಲ್ಲೆಗಳ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಬಳ್ಳಾರಿ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಶುಕ್ರವಾರ...

ಹಂಪಿ ವಿವಿ ಕೇಂದ್ರ ಸ್ಥಳಾಂತರ ಕೈಬಿಡಿ

ಬಾದಾಮಿ: ಬನಶಂಕರಿಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರವನ್ನು ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ...

ಅವೈಜ್ಞಾನಿಕ ಉಳುಮೆಯಿಂದ ಮಣ್ಣಿನ ಸವಕಳಿ, ಹೊಸಪೇಟೆ ಕೃಷಿ ಇಲಾಖೆ ಡಿಡಿ ಸಹದೇವ ಯರಗುಪ್ಪ ಹೇಳಿಕೆ

ಕೂಡ್ಲಿಗಿ: ರೈತರ ಜೀವನಕ್ಕೆ ಆಧಾರವಾಗಿರುವ ಮಣ್ಣಿನ ಸಂರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ಕೃಷಿ ಇಲಾಖೆ ಹೊಸಪೇಟೆ ವಿಭಾಗದ ಉಪನಿರ್ದೇಶಕ ಸಹದೇವ ಯರಗುಪ್ಪ ಹೇಳಿದರು. ಪಟ್ಟಣದ...

<ಎಲ್ಲದಕ್ಕೂ ಅಲಂಕಾರ, ನೊಗಕ್ಕೆ ಬೆಳ್ಳಿಯ ಲೇಪನ * ಮಿರಮಿರ ಮಿಂಚುವ ಬಣ್ಣಬಣ್ಣದ ಹಗ್ಗಗಳು>

ವಿಜಯಕುಮಾರ್ ಕಂಗಿನಮನೆ

ಸಾಮಾನ್ಯ ವೀಕ್ಷಕರಿಗೆ ಕಂಬಳದಲ್ಲಿ ಕೋಣಗಳ ಓಟ, ಚಿಮ್ಮುವ ಕೆಸರು ನೀರು, ಉಸಿರು ಬಿಗಿಹಿಡಿದು ಓಡುವ ಓಟಗಾರ, ಅತ್ತ ಕಡೆಯಿಂದ ವೀಕ್ಷಕ ವಿವರಣೆ ಇಂಥ ವಿಷಯಗಳ ಕಡೆಗೇ ಗಮನ ಹೆಚ್ಚು. ಕಂಬಳ ಕೋಣಗಳ ಓಟದಲ್ಲೂ ಹಲವು ವಿಭಾಗಗಳಿವೆ ಎಂದು ತಿಳಿದಿರುವುದು ಆ ಕ್ಷೇತ್ರದವರಿಗೆ ಮಾತ್ರ.

ಕಂಬಳ ಕೋಣಗಳಿಗೆ ಬಳಸುವ ಹಗ್ಗ, ಬೆತ್ತ, ನೊಗ, ಹಲಗೆ ಎಲ್ಲದಕ್ಕೂ ಪ್ರತ್ಯೇಕ ವಿಭಾಗ, ವಿಶೇಷ ಅರ್ಥಗಳಿವೆ. ಉಳುಮೆಗೆ ಬಳಸುವ ಈ ಸಲಕರಣೆಗಳು ಕಂಬಳದಲ್ಲಿ ಸಾಂಕೇತಿಕ ರೂಪು ಪಡೆದಿವೆ. ಈ ವಾರ ಇವುಗಳತ್ತ ಒಂದು ಕಿರುನೋಟ.

ನೆತ್ತಿಬಳ್ಳು: ನೆತ್ತಿಯ ಮೇಲೆ ಕೋಡಿಗೆ ಕಟ್ಟಿದ ಮರ ಜಾರದಂತೆ ಎಳೆದು ಹಿಡಿಯುತ್ತದೆ. ಗೊಂಡೆ, ಬೆಳ್ಳಿ ಪದಕದೊಂದಿಗೆ ಸಿಂಗಾರಕ್ಕೂ ಕೋಣಗಳಿಗೆ ಕಿರೀಟವಿಟ್ಟಂತೆ ಕಾಣುತ್ತದೆ. ಇದಕ್ಕೆ ಕಾಸರಕನ ಸೊಪ್ಪು, ಹೂವಿನ ಗಿಡದ ಸೊಪ್ಪು ಗೊಂಡೆ ಕಟ್ಟುತ್ತಾರೆ. ದೃಷ್ಟಿ ತಾಗದಂತೆ ಕಾಸರಕನ ಸೊಪ್ಪು ಬಳಸುತ್ತಾರೆ.

ಪನೆಬಳ್ಳು: ಹಾಯುವ ಕೋಣಗಳಿಗೆ ಕೊಂಬಿನ ತುದಿಗೆ ಕಟ್ಟಿ ಕುತ್ತಿಗೆ ಅಡಿಗೆ ಸುತ್ತಿರುವ ಇದು ಹಿತ್ತಾಳೆ ನೆಕ್ಲೇಸ್‌ನಂತೆ ಕಾಣುತ್ತದೆ. ಕಟ್ಟುಮಸ್ತಾದ ಪೋಕರಿ ಕೋಣಗಳಿಗೆ ಮಾತ್ರ ಬಳಕೆ.

ದುಡಿಬಳ್ಳು: ಹಿಂದೆ ಮೂಗುದಾರವಿರಲಿಲ್ಲ. ದುಡಿಬಳ್ಳಿನಿಂದಲೇ ಕೋಣಗಳನ್ನು ನಿಯಂತ್ರಿಸಬೇಕಿತ್ತು. ಈಗ ಮರಿ ಕೋಣಗಳಿಗೆ ಮಾತ್ರ ಬಳಕೆ.

ಪುಡಿಪು ಬಳ್ಳು: ನೊಗದ ಮಧ್ಯಭಾಗಕ್ಕೆ ಕಟ್ಟಿ, ಓಡಿಸುವವನು ಕೈಯಲ್ಲಿ ಹಿಡಿದು ಓಡಿಸಲು ಬಳಸುವ ಹಗ್ಗವಿದು.

ಕೊಂಟುದ ಬಳ್ಳು: ನೊಗ ಹೆಗಲಿಗೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಈ ಹಗ್ಗ ಬಳಕೆ.

ಪೊಣಕೆ ಬಳ್ಳು: ಒಂದಕ್ಕೊಂದು ದೂರ ಸರಿಯದಂತೆ ಎರಡೂ ಕೋಣಗಳು ಹತ್ತಿರವಾಗಿ ಓಡಲು ಬಳಕೆ. ನೊಗ ಹೆಗಲಿನಿಂದ ಜಾರದಂತೆ ಓಡಲು, ಸೂಕ್ತ ಜೊತೆಗಾರಿಕೆಗೂ ಪೂರಕ.

ನೊಗ: ಕೋಣಗಳ ಭುಜದ ಮೇಲಿರುವ ನೊಗ ಓಟಗಾರನಿಗೂ, ಕೋಣಗಳಿಗೂ ಬಲವಾಗಿ ಓಡಲು ಸಹಾಯ. ಇದಕ್ಕೆ ಬೆಳ್ಳಿ, ಹಿತ್ತಾಳೆ ತಗಡುಗಳಿಂದ ಮಿರುಗುವಂತೆ ಮಾಡುತ್ತಾರೆ. 35 ಇಂಚು, 42 ಇಂಚು ಉದ್ದದ ಕೋಣಗಳಿಗೆ ಅನುಗುಣವಾಗಿ ರಚನೆ ಮಾಡುತ್ತಾರೆ. ಸಾಣೂರು ಸುಂದರ ಆಚಾರ್ಯ ಇದರಲ್ಲಿ ಎತ್ತಿದ ಕೈ.

ನೇಗಿಲು: ಉಳುಮೆ ಸಂದರ್ಭ ಬಳಸುವ ನೇಗಿಲಿನ ಮಾದರಿಯಲ್ಲೇ ಚಿಕ್ಕದಾಗಿ ರಚಿಸಿ ಓಡಿಸಲಾಗುತ್ತದೆ.

ಮರ: ಎರಡು ಕೋಣಗಳು ಪಳಗಿ ಒಂದಕ್ಕೊಂದು ದೂರ ಸರಿದು ಓಡಬೇಕು, ಹಾಯಬಾರದೆಂದು ಕೋಡಿಗೆ ಹಗ್ಗದಿಂದ ಮರ ಕಟ್ಟಿ ಓಡಿಸಲು ಬಳಸಲಾಗುತ್ತದೆ. ಹಿಂದೆ ಬೆತ್ತ, ಈಂದ್, ತಾಳೆಮರಗಳಿಂದ ತಯಾರಿಸಲಾಗುತ್ತಿತ್ತು. ಈಗ ಸ್ಟೀಲ್ ಪೈಪ್ ಬಳಸುತ್ತಾರೆ.

ಕನೆ ಹಲಗೆ: ಚೌಕ ಆಕಾರವಿರುವ ಒಂದು ಪಾದ ಇಡುವಷ್ಟು ಮಾತ್ರ ಜಾಗ (ಮಂಡೆ ಪಲಯಿ) ಮನುಷ್ಯನ ತಲೆಯಷ್ಟೇ ದೊಡ್ಡದು. ನಿಶಾನಿಗೆ ನೀರು ಹಾಯಿಸಲು ಉಪಯೋಗ. ಜೊತೆಗಾರ ಸರಿಯಾಗಿದ್ದರೆ, ಓಡಿಸುವವನು ಉತ್ತಮವಾಗಿದ್ದು, ಅಷ್ಟೇ ಗಟ್ಟಿತನದ ಕೋಣಗಳು ಮಾತ್ರ ಈ ವಿಭಾಗದಲ್ಲಿ ಓಡುತ್ತವೆ.

ಅಡ್ಡ ಪಲಾಯಿ: ಗದ್ದೆ ಸಮತಟ್ಟು ಮಾಡಲು ಬಳಸುವ 10 ಅಡಿ ಅಗಲದ ಮಾದರಿಯಲ್ಲೇ ಕೋಣಗಳನ್ನು ಓಡಿಸಲು 3 ಅಡಿ ಹಲಗೆ.

ಬೆತ್ತ: ಹಿಂದೆ ಔಷಧೀಯ ಗುಣದ ಕಾಸರಕನ ಮರದ ಕೋಲು ಬಳಕೆಯಾಗುತ್ತಿತ್ತು. ಈಗ ಬೆತ್ತ ಕುಸುರಿ ಕೆಲಸದೊಂದಿಗೆ ಹೊಸ ರೂಪ ಪಡೆದಿದೆ. ಯಜಮಾನರ ಬೆತ್ತ, ಓಟಗಾರರ ಬೆತ್ತ ಎಂಬ ಎರಡು ರೀತಿಯ ಬೆತ್ತ ಚಾಲ್ತಿಯಲ್ಲಿದೆ.

ಇಂದು ಅಡ್ವೆ ನಂದಿಕೂರು ಕಂಬಳ: ಆಧುನಿಕ ಕಂಬಳದ ಭಾಗವಾಗಿ ಹೊನಲು ಬೆಳಕು ಆರಂಭಗೊಂಡ ಕಂಬಳ ಅಡ್ವೆ ನಂದಿಕೂರು. 27ನೇ ವರ್ಷದ ಅಡ್ವೆ ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಫೆ.23ರಂದು ಕೊಳಚ್ಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ ಸಾರಥ್ಯದಲ್ಲಿ ಅದ್ದೂರಿಯಾಗಿ ನಡೆಯಲಿದೆ.

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...