ಶಿರಸಿ: ಶಿರಸಿ ನಗರಸಭೆಗೆ ಅಧ್ಯಕ್ಷರಾಗಿ ಶರ್ವಿುಳಾ ಮಾದನಗೇರಿ, ಉಪಾಧ್ಯಕ್ಷರಾಗಿ ರಮಾಕಾಂತ ಭಟ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಸದಸ್ಯರು ಸ್ಪರ್ಧೆ ಒಡ್ಡಿದ್ದರೂ ಎರಡೂ ಸ್ಥಾನಗಳು ನಿರೀಕ್ಷೆಯಂತೆ ಬಿಜೆಪಿ ಸದಸ್ಯರ ಪಾಲಾಗಿವೆ.
31 ಸದಸ್ಯರಿರುವ ಶಿರಸಿ ನಗರಸಭೆಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಮೀಸಲಾತಿಗೆ ಒಳಪಟ್ಟಿತ್ತು. ಬಿಜೆಪಿಯಿಂದ ಶರ್ವಿುಳಾ ಮಾದನಗೇರಿ ಮತ್ತು ಕಾಂಗ್ರೆಸ್ ನಿಂದ ವನಿತಾ ಶೆಟ್ಟಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. 31 ಸದಸ್ಯರ ಪೈಕಿ 19ರಲ್ಲಿ ಬಿಜೆಪಿ ಸದಸ್ಯರಿರುವ ಕಾರಣ ಶರ್ವಿುಳಾ ಮಾದನಗೇರಿ ಅವರಿಗೆ ಸುಲಭ ಜಯ ಸಿಕ್ಕಿದೆ. ಕಾಂಗ್ರೆಸ್ನ ವನಿತಾ ಗಣೇಶ ಶೆಟ್ಟಿ ಅವರಿಗೆ 12 ಮತ ಪಡೆದು ಸೋಲನುಭವಿಸಿದರು.
ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ರಮಾನಂದ ಭಟ್ ಮತ್ತು ಕಾಂಗ್ರೆಸ್ನ ದಯಾನಂದ ನಾಯ್ಕ ಅವರು ಉಮೇದುವಾರಿಕೆ ಸಲ್ಲಿಸಿದ್ದರು. ಇದರಲ್ಲಿ ರಮಾಕಾಂತ ಭಟ್ 19 ಮತ ಪಡೆದು ಆಯ್ಕೆಯಾದರೆ, ದಯಾನಂದ ನಾಯ್ಕ 12 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಬಿಜೆಪಿ ಗೆಲುವಿನ ಬಳಿಕ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ ನಗರ ದಿನೇ ದಿನೆ ಬೆಳೆಯುತ್ತಿದೆ. ಇಲ್ಲಿಯ ಜನತೆಗೆ ಅಗತ್ಯ ಸೌಲಭ್ಯ ಒದಗಿಸಿ, ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಿದೆ. ಸಂಸದನಾಗಿ ನಾನು ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಯಶಸ್ವಿಯಾದ ರೆಸಾರ್ಟ್ ರಾಜಕೀಯ !
ಬಿಜೆಪಿ ಸದಸ್ಯರ ಸಂಖ್ಯಾ ಬಲ ಹೆಚ್ಚಿದ್ದರಿಂದ ಅಧಿಕಾರ ಬಿಜೆಪಿ ತೆಕ್ಕೆಗೆ ಬೀಳುವುದು ನಿಶ್ಚಿತವಾಗಿತ್ತು. ಆದರೆ, ಅಧ್ಯಕ್ಷ ಸ್ಥಾನಕ್ಕೆ ಪಕ್ಷದೊಳಗೆ ಇದ್ದ ಆಕಾಂಕ್ಷಿಗಳ ಸಮಾಧಾನ ಪಡಿಸಿ, ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಳೆದ ಮೂರು ದಿನಗಳಿಂದ ನಡೆಸಿದ ಕಸರತ್ತು ಕೊನೆಗೂ ಯಶಸ್ವಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸಂಧ್ಯಾ ನಾಯ್ಕ ಮತ್ತು ವೀಣಾ ಶೆಟ್ಟಿ ಸಹ ಆಕಾಂಕ್ಷಿಯಾಗಿದ್ದರು. ಸೋಮವಾರ ಸದಸ್ಯರ ಕೋರ್ ಕಮಿಟಿ ಸಭೆ ನಡೆಸಿದ್ದರೂ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ರಮಾಕಾಂತ ಭಟ್ ಹಾಗೂ ರಾಘವೇಂದ್ರ ಶೆಟ್ಟಿ ಆಕಾಂಕ್ಷಿತರಾಗಿದ್ದರು. ಅಸಮಾಧಾನಿತರನ್ನು ಸಮಾಧಾನ ಪಡಿಸುವ ಸಲುವಾಗಿ ಮತ್ತು ಕಾಂಗ್ರೆಸ್ ಬಿಜೆಪಿ ಸದಸ್ಯರನ್ನು ಸೆಳೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯೇ ಎಲ್ಲ ಬಿಜೆಪಿ ಸದಸ್ಯರು ಹೊರ ಪ್ರದೇಶದ ರೆಸಾರ್ಟ್ ಒಂದಕ್ಕೆ ತೆರಳಿದ್ದರು. ಗುರುವಾರ ಬೆಳಗ್ಗೆ ನೇರವಾಗಿ ನಗರಸಭೆಗೆ ಆಗಮಿಸಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಕಮಲದ ಮಡಿಲಿಗೆ ಶಿರಸಿ ನಗರಸಭೆ, ಶರ್ವಿುಳಾ ಅಧ್ಯಕ್ಷೆ, ರಮಾಕಾಂತ ಉಪಾಧ್ಯಕ್ಷ
You Might Also Like
ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!
ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…
ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information
ಬೆಂಗಳೂರು: ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…