ದಾವಣಗೆರೆಯಲ್ಲಿ ಕಮಲ ಸಂದೇಶ ಬೈಕ್ ಜಾಥಾ

ದಾವಣಗೆರೆ: ದಾವಣಗೆರೆಯ ಬಿಜೆಪಿ ಉತ್ತರ ಯುವ ಮೋರ್ಚಾದಿಂದ ಶನಿವಾರ ಕಮಲ ಸಂದೇಶ ಬೈಕ್ ರ‍್ಯಾಲಿ ನಡೆಯಿತು.

ನಿಟ್ಟುವಳ್ಳಿ ದುರ್ಗಾಂಬಿಕಾ ದೇವಿ ದೇವಸ್ಥಾನ ಬಳಿಯಿಂದ ಆರಂಭವಾದ ರ‍್ಯಾಲಿಗೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್. ಎ. ರವೀಂದ್ರನಾಥ್ ಚಾಲನೆ ನೀಡಿದರು.

ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು. ತಲೆಗೆ ರುಮಾಲು ಸುತ್ತಿಕೊಂಡು, ಬೈಕ್‌ಗೆ ಧ್ವಜ ಕಟ್ಟಿಕೊಂಡಿದ್ದ ಕಾರ್ಯಕರ್ತರು ಘೋಷಣೆ ಕೂಗಿದರು. ನಗರದ ವಿವಿಧ ಬೀದಿಗಳ ಮೂಲಕ ಹಾದು ಹೋಗಿ, ಪಕ್ಷದ, ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಎಂಎಲ್ಸಿ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಮುಖಂಡರಾದ ಮುಕುಂದ್, ಪಿ.ಎಸ್. ಜಯಣ್ಣ, ಲಕ್ಷ್ಮಣ, ಶಿವಶಂಕರ್, ಎಚ್.ಎನ್. ಶಿವಕುಮಾರ್, ಟಿಪ್ಪುಸುಲ್ತಾನ್, ಶಿವನಗೌಡ, ಪಿ.ಸಿ. ಶ್ರೀನಿವಾಸ್ ಪಾಲ್ಗೊಂಡಿದ್ದರು.