ಪ್ರಿಯಾಂಕಾ ವಾದ್ರಾಗೆ ಸ್ವಾಗತ ಕೋರಿದ ಕಮಲ್ ಹಾಸನ್​

ಪುದುಚೆರಿ: ಅಧಿಕೃತವಾಗಿ ರಾಜಕೀಯ ಪ್ರವೇಶಕ್ಕೆ ಸಜ್ಜಾಗುತ್ತಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾಗೆ ತಮಿಳು ನಟ, ರಾಜಕಾರಣಿ ಕಮಲ್​ ಹಾಸನ್​ ಸ್ವಾಗತ ಕೋರಿದ್ದಾರೆ.

ಬುಧವಾರ ಮಕ್ಕಳ್​ ನಿಧಿ ಮೈಯಮ್​ (ಎಂಎನ್ಎಂ) ಪಕ್ಷದ ಪುದುಚೆರಿ ಘಟಕವನ್ನು ಅಧಿಕೃತವಾಗಿ ಉದ್ಘಾಟಿಸಿದ ನಂತರ ಮಾತನಾಡಿ, ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯ ಒದಗಿಸುವುದಾಗಿ ಘೋಷಿಸಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ನಿರ್ಧಾರವನ್ನು ಶ್ಲಾಘಿಸಿದರು ಮತ್ತು ರಾಜಕೀಯಕ್ಕೆ ಪ್ರವೇಶಿಸುತ್ತಿರುವ ಸೋದರಿ ಪ್ರಿಯಾಂಕಾರನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಕಮಲ್​ ಹಾಸನ್​ ಸುಳಿವು ನೀಡಲಿಲ್ಲ. ಆದರೆ ಮೈತ್ರಿ ಕುರಿತು ಹಲವು ಪಕ್ಷಗಳೊಂದಿಗೆ ಅನೌಪಚಾರಿಕ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಎಐಎಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ನಿಧನದ ನಂತರ ಉಂಟಾಗಿರುವ ನಿರ್ವಾತವನ್ನು ಸದ್ಭಳಕೆ ಮಾಡಿಕೊಳ್ಳಲು ಕಮಲ್​ ಹಾಸನ್​ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಕಮಲ್​ ಹಾಸನ್ 2018ರ ಫೆ. 21 ರಂದು ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ಘೋಷಿಸಿದ್ದರು. (ಏಜೆನ್ಸೀಸ್​)

One Reply to “ಪ್ರಿಯಾಂಕಾ ವಾದ್ರಾಗೆ ಸ್ವಾಗತ ಕೋರಿದ ಕಮಲ್ ಹಾಸನ್​”

Comments are closed.