ಭ್ರಷ್ಟರ ವಿರುದ್ಧ ಮತ್ತೆ ಕಮಲ್ ಫೈಟ್

ಶಂಕರ್ ನಿರ್ದೇಶನದ ‘ಇಂಡಿಯನ್’ ಸಿನಿಮಾ 1996ರಲ್ಲಿ ರಿಲೀಸ್ ಆಗಿತ್ತು. ದೊಡ್ಡ ಮಟ್ಟದ ಯಶಸ್ಸು ಚಿತ್ರಕ್ಕೆ ಸಿಕ್ಕಿತ್ತು. ಈ ಹಿಂದೆಯೇ ಈ ಚಿತ್ರ ಸೀಕ್ವೆಲ್ ಆಗಲಿದೆ ಎಂದು ಹೇಳಿತ್ತಾದರೂ, ಕಮಲ್ ಹಾಸನ್ ಮತ್ತು ನಿರ್ದೇಶಕ ಶಂಕರ್ ಕಡೆಯಿಂದ ಅಧಿಕೃತ ಮಾಹಿತಿ ಹೊರಬಂದಿರಲಿಲ್ಲ. ಇದೀಗ ಚಿತ್ರದ ಸೀಕ್ವೆಲ್ ಬರುವ ಸುದ್ದಿ ಪಕ್ಕಾ ಆಗಿದೆ. ಸಂಕ್ರಾಂತಿ ಪ್ರಯುಕ್ತ ‘ಇಂಡಿಯನ್ 2’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಭ್ರಷ್ಟಾಚಾರದ ವಿರುದ್ಧ ಮತ್ತೆ ಗುಡುಗಲು ಕಮಲ್ ಆಗಮಿಸುತ್ತಿದ್ದಾರೆ.

ಕಮಲ್​ಗೆ ಜೋಡಿಯಾಗಿ ನಟಿ ಕಾಜೋಲ್ ಅಗರ್​ವಾಲ್ ಆಯ್ಕೆಯಾಗಿದ್ದು, ಸಿಂಬು ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿತ್ತು. ಇದೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಚಿತ್ರತಂಡದಿಂದ ಸಿಂಬು ಹೊರನಡೆದಿದ್ದಾರಂತೆ. ಸಿಂಬು ಮಾಡಬೇಕಿದ್ದ ಪಾತ್ರ ಸಿದ್ದಾರ್ಥ್ ಪಾಲಾಗಿದೆ. ‘ಪೆಟ್ಟಾ’ ಸಂಗೀತದ ಮೂಲಕವೇ ಅಭಿಮಾನಿಗಳನ್ನು ಹುಚ್ಚೆಬ್ಬಿಸಿರುವ ಅನಿರುದ್ಧ ರವಿಚಂದರ್ ‘ಇಂಡಿಯನ್ 2’ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ‘2.0’ ಸಿನಿಮಾ ನಿರ್ಮಾಣ ಮಾಡಿದ್ದ ಲೈಕಾ ಪ್ರೊಡಕ್ಷನ್ಸ್ ಈ ಚಿತ್ರದ ನಿರ್ಮಾಣ ಜವಾಬ್ದಾರಿ ಹೊತ್ತುಕೊಂಡಿದೆ. -ಏಜೆನ್ಸೀಸ್