ಬಸವಕಲ್ಯಾಣದಲ್ಲಿ ಕಲ್ಯಾಣ ಪರ್ವ ೧೮ರಿಂದ

blank

ಬೀದರ್: ವಿಶ್ವಗುರು ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಅ.೧೮, ೧೯ ಮತ್ತು ೨೦ ರಂದು ಮೂರು ದಿನಗಳವರೆಗೆ ೨೩ನೇ ಕಲ್ಯಾಣ ಪರ್ವ ನಡೆಯಲಿದೆ. ಸುಮಾರು ೧ ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ಅಲ್ಲಮಪ್ರಭು ಶೂನ್ಯ ಪೀಠದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

blank

೧೨ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ, ವಚನ ಸಾಹಿತ್ಯ ಕೊಡುಗೆ ನೀಡಿದ ನೆಲ ಬಸವಕಲ್ಯಾಣದ ೧೦೮ ಅಡಿಯ ಬಸವೇಶ್ವರ ಬೃಹತ್ ಪುತ್ಥಳಿಯ ಆವರಣದಲ್ಲಿ ಕಲ್ಯಾಣ ಪರ್ವ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

೧೮ರಂದು ಬೆಳಗ್ಗೆ ೭-೩೦ಕ್ಕೆ ವೇದಿಕೆ ದೈವಿಕರಣ, ಸಾಮೂಹಿಕ ಬಸವಾರ್ಚನೆ, ೧೦೮ ಮಂತ್ರ ಪಠಣ ಜರುಗಲಿದೆ. ೧೦-೩೦ಕ್ಕೆ ಜರುಗುವ ಧರ್ಮ ಚಿಂತನಾಗೋಷ್ಠಿಯಲ್ಲಿ ಬಸವಧರ್ಮ ಪೀಠ ಪೀಠಾಧ್ಯಕ್ಷ ಪೂಜ್ಯ ಶ್ರೀಮನ್ ನಿರಂಜನ ಮಹಾಜಗದ್ಗುರು ಮಾತೆ ಗಂಗಾದೇವಿ,ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಶ್ರೀ ಶಿವಾನಂದ ದೇವರು, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಪ್ರಭುದೇವ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲ್, ಗುರುಬಸವ ಪೂಜೆ ನೆರವೇರಿಸುವರು. ಶರಣು ಸಲಗರ ಉದ್ಘಾಟಿಸುವರು. ಡಾ. ಶೈಲೇಂದ್ರ ಬೆಲ್ದಾಳೆ ಧ್ವಜಾರೋಹಣ ನೆರವೇರಿಸುವರು. ಬಸವದಳದ ತೆಲಂಗಾಣ ಅಧ್ಯಕ್ಷ ಶಂಕ್ರೆಪ್ಪ ಪಾಟೀಲ್ ಅಧ್ಯಕ್ಷತೆ ವಹಿಸುವರು. ಚಿಂತಕ ಸಂಜಯ ಮಾಕಲ್ ಅನುಭಾವ ನೀಡುವರು. ಶಾಸಕ ಪ್ರಭು ಚವ್ಹಾಣ, ಎಂಎಲ್ಸಿ ಎಂ.ಜಿ. ಮುಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಳ್, ಸುಧೀರ ಕಾಡಾದಿ, ಬಾಬು ವಾಲಿ, ಎಂ.ಎಸ್. ಖೂಬಾ, ಬಿ.ಜಿ. ಶೆಟಕಾರ, ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಸಂಜೆ ೪ಕ್ಕೆ ಮಹಿಳಾ ಗೋಷ್ಠಿ ನಡೆಯಲಿದ್ದು, ಗೀತಾ ಈಶ್ವರ ಖಂಡ್ರೆ ಬಸವಜ್ಯೋತಿ ಪ್ರಜ್ವಲನೆ ಮಾಡುವರು. ಉಮಾ ಸುರೇಶ ಶೆಟಕಾರ ಧ್ವಜಾರೋಹಣ ನೆರವೇರಿಸುವರು. ಶಾರದಾತಾಯಿ ಬಳ್ಳಾರಿ ಅಧ್ಯಕ್ಷತೆ ವಹಿಸುವರು. ಶಬ್ರಿನಾ ಮಹ್ಮದ್ ಅಲಿ ಅನುಭಾವ ನೀಡುವರು. ಶಕುಂತಲಾ ಬೆಲ್ದಾಳೆ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ ಸೇರಿ ಪ್ರಮುಖರು ಅತಿಥಿಗಳಾಗಿರುವರು ಎಂದು ಹೇಳಿದರು.

ಮೆರವಣಿಗೆ ಸಮಿತಿಯ ರಾಜೇಂದ್ರಕುಮಾರ ಗಂದಗೆ, ಶಂಕ್ರೆಪ್ಪ ಪಾಟೀಲ್ ಜಹೀರಾಬಾದ್, ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲ ಪಾಟೀಲ್ ಖಾಜಾಪುರ, ಉತ್ಸವ ಸಮಿತಿ ಕೋಶಾಧ್ಯಕ್ಷ ಸಂಜುಕುಮಾರ ಪಾಟೀಲ್ ಗೌಡಗಾಂವ ಮಾತನಾಡಿ, ೧೮ರಂದು ವಚನ ಸಂಗೀತ ಹಾವಗಿರಾವ ಶೆಂಬೆಳ್ಳಿ ತಂಡದಿಂದ, ೧೯ ರಂದು ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್ ತಂಡದಿAದ ಮತ್ತು ಶ್ರೇಯಾ ಭಂಡೆ ಬಿ.ಕೆ. ಸಂತೋಷ ತಂಡದಿಂದ ವಚನ ರೂಪಕ ನೃತ್ಯಗಳು ನಡೆಯಲಿವೆ. ಕಲ್ಯಾಣ ಪರ್ವಕ್ಕೆ ಆಗಮಿಸುವವರಿಗೆ ವಸತಿ ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ.ಮೂರು ದಿನಗಳ ಕಾಲ ಬಸವಕಲ್ಯಾಣದಲ್ಲಿಯೆ ಉಳಿದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿವೇಕ ಕಾಶೆಪ್ಪ ಧನ್ನೂರ, ಕೋಶಾಧ್ಯಕ್ಷ ಕಂಟೆಪ್ಪ ಗಂಧಿಗುಡಿ, ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ ಗಡಗಿ, ಗಣೇಶ ಬಿರಾದಾರ ಇದ್ದರು.

blank

೧೯ ರಂದು ಸಚಿವ ಈಶ್ವರ ಖಂಡ್ರೆ ಉದ್ಘಾಟನೆ: ಅ.೧೯ರಂದು ಬೆಳಗ್ಗೆ ೭-೩೦ಕ್ಕೆ ಶರಣ ವಂದನೆ, ಶರಣರಿಗೆ ಶರಣಾರ್ಥಿ, ಆದಿ ಪ್ರಮಥರ ಪೂಜೆ ಬಸವಧರ್ಮ ಪೀಠದ ಜಗದ್ಗುರು ಜಂಗಮ ಮೂರ್ತಿಗಳಿಂದ ನಡೆಯಲಿದೆ. ೮-೩೦ಕ್ಕೆ ಅಕ್ಕ ನಾಗಲಾಂಬಿಕಾ ಸಂಸ್ಮರಣೆ ನಿಮಿತ್ತ ಬಸವಧರ್ಮದ ವಿಜಯೋತ್ಸವ ಹಾಗೂ ಅಲ್ಲಮಪ್ರಭು ಶೂನ್ಯ ಪೀಠಾಧೀಶರ ಪೀಠಾರೋಹಣ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿಯವರಿಂದ ನಡೆಯಲಿದೆ. ಬೆಳಗ್ಗೆ ೧೦-೩೦ಕ್ಕೆ ೨೩ನೇ ಕಲ್ಯಾಣ ಪರ್ವದ ಉದ್ಘಾಟನೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನೆರವೇರಿಸುವರು. ಪೂಜ್ಯ ಜಗದ್ಗುರು ಡಾ.ಮಾತೆ ಗಂಗಾದೇವಿ, ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ, ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ,. ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಸೋಮಶೇಖರ ಅಣ್ಣೆಪ್ಪ ಪಾಟೀಲ್ ಗಾದಗಿ ಅವರಿಂದ ಗುರುಬಸವ ಪೂಜೆ, ಬಸವರಾಜ ಕೋರಕೆ ಧ್ವಜಾರೋಹಣ. ಹೈದರಾಬಾದ್‌ನ ಅನಿಲಕುಮಾರ ಪಾಟೀಲ್ ಅಧ್ಯಕ್ಷತೆ ವಹಿಸುವರು. ಶಾಸಕ ಗಣ್ಯರು ಅತಿಥಿಗಳಾಗಿ ಆಗಮಿಸುವರು. ಮಧ್ಯಾಹ್ನ ೩-೩೦ಕ್ಕೆ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ವಿಷಯ ಕುರಿತು ಯುವಗೋಷ್ಠಿ ನಡೆಯಲಿದ್ದು, ಪೂಜ್ಯರು, ಗಣ್ಯರು ಅತಿಥಿಗಳಾಗಿ ಉಪಸ್ಥಿತರಿರುವರು, ಸಂಜೆ ೫-೩೦ಕ್ಕೆ ಧರ್ಮಚಿಂತನ ೨ನೇ ಗೋಷ್ಠಿ ನಡೆಯಲಿದೆ. ೨೦ರಂದು ಬೆಳಗ್ಗೆ ೯ಕ್ಕೆ ಬಸವಕಲ್ಯಾಣದ ಕೋಟೆ ಆವರಣದಿಂದ ಮಹಾಮನೆಯವರೆಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ಸಮಾರೋಪ ಜರುಗಲಿದೆ ಎಂದು ಶ್ರೀ ಬಸವಕುಮಾರ ಸ್ವಾಮೀಜಿ ತಿಳಿಸಿದರು

Share This Article

ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits

Goat Milk Health Benefits :  ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…

ಪೋಷಕರೇ ಹುಷಾರ್‌! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips

Parents Tips : ಮಕ್ಕಳಿರುವ ಮನೆ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆರು ವರ್ಷದವರೆಗೆ…

ಮಿದುಳಿನ ಆರೋಗ್ಯ ರಕ್ಷಣೆಗೆ ನಾವೇನು ಮಾಡಬೇಕು?

ಇಂದು ಕೃತಕ ಬುದ್ಧಿಮತ್ತೆ ಕೂಡ ನಮ್ಮ ಕೈಯಲ್ಲಿದೆ. ಆದರೆ ದುರದೃಷ್ಟವಶಾತ್ ನಮ್ಮ ಮಿದುಳಿನ ಆರೋಗ್ಯ ದಿನೇ…