ತೋಟದಲ್ಲಿ 12 ಅಡಿಯ ಕಾಳಿಂಗ ಸರ್ಪ

ಉಪ್ಪಿನಂಗಡಿ: ಇಲ್ಲಿನ ಮೊಗ್ರು ಗ್ರಾಮದ ಸುದೆಪಿಲ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಸಮೀಪದ ನಿವಾಸಿ ಡೆನಿತ್ ಸಾಲಿಯಾನ್ ಎಂಬುವರ ತೋಟದಲ್ಲಿ ಕಾಣಿಸಿದ ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಡಲಾಯಿತು. ಸಾಲಿಯಾನ್ ಅವರ ತೋಟದ ಕೊಕ್ಕೊ ಗಿಡದಲ್ಲಿ ಕಾಣಿಸಿದ ಕಾಳಿಂಗ ಸರ್ಪದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಉಪ್ಪಿನಂಗಡಿಯ ಸ್ನೇಕ್ ಝಕಾರಿಯಾ ಅವರೊಂದಿಗೆ ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ಹಿಡಿದರು.