More

  ವಿದ್ವಾಂಸರಿಗೆ ಕಾಳಿದಾಸ ಸಂಸ್ಕೃತ ವರ್ತಿ ಪ್ರಶಸ್ತಿ

  ಬೆಂಗಳೂರು: ಶ್ರೀ ಬೈದ್ಯನಾಥ್ ಆರ್ಯುವೇದ ಭವನ ಪ್ರೖೆವೇಟ್ ಲಿಮಿಟೆಡ್ ಸಂಸ್ಥಾಪಕ ದಿ. ವೈದ್ಯ ಪಂ. ರಾಮ್ಾರಾಯಣ ಶರ್ಮಾ ಸ್ಮರಣಾರ್ಥ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ ರಾಮ್ೆಕ್ ಸಹಯೋಗದಲ್ಲಿ 2019ನೇ ಸಾಲಿನ ‘ಮಹಾಕವಿ ಕಾಳಿದಾಸ ಸಂಸ್ಕೃತ ವರ್ತಿ’ ರಾಷ್ಟ್ರೀಯ ಪ್ರಶಸ್ತಿಯನ್ನು ದೇಶದ ಮೂವರು ಶ್ರೇಷ್ಠ ಸಂಸ್ಕೃತ ವಿದ್ವಾಂಸರಿಗೆ ನೀಡಿ ಗೌರವಿಸಲಾಗಿದೆ.

  ವೇದ, ತತ್ವಶಾಸ್ತ್ರ ಮತ್ತು ಸಾಕ್ಷರತೆ ಕ್ಷೇತ್ರದಲ್ಲಿ ‘ಡೀಪ್’ (ಆಳವಾದ ಅಧ್ಯಯನಕ್ಕೆ) ಎಂದೇ ಪ್ರಸಿದ್ಧರಾದ ನಾಲ್ಕು ವೇದಗಳಲ್ಲೂ ಕಾರ್ಯ ನಿರ್ವಹಿಸಿ ‘ಚೌಖಂಬಾ’ ಕೃತಿ ಪ್ರಕಟಿಸಿರುವ ಉತ್ತರ ಪ್ರದೇಶ ಅಯೋಧ್ಯೆಯ ಡಾ. ದೇವಿಸಹಾಯ್ ಪಾಂಡೆ, ವೇದ ಮತ್ತು ಮೀಮಾಂಸಾ ಶಾಸ್ತ್ರ ಅಧ್ಯಯನದ ಜತೆಗೆ ರಾಷ್ಟ್ರೀಯ ಸಂಸ್ಕೃತ ವಿದ್ವಾಂಸರು ಎಂಬ ಖ್ಯಾತಿ ಪಡೆದಿರುವ ಹೈದರಾಬಾದ್​ನ

  ಪ್ರೊ. ಕಂಡಾಡೆ ರಾಮಾನುಜಾಚಾರ್ಯ ಮತ್ತು ಮದ್ರಾಸ್ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕರಾಗಿ 10ಕ್ಕೂ ಹೆಚ್ಚು ಪುಸ್ತಕ ರಚಿಸಿರುವ ತಮಿಳುನಾಡಿನ ಚೆನ್ನೈನ ವೇದಾಂತಾಚಾರ್ಯ ಡಾ.ಮಣಿಶಾಸ್ತ್ರಿ ದ್ರಾವಿಡ್ ಅವರಿಗೆ ಇತ್ತೀಚೆಗೆ ನಡೆದ ‘ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ’ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಲಾ 50 ಸಾವಿರ ನಗದು ಸಹಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಬೈದ್ಯನಾಥ್ ನಿರ್ದೇಶಕ ಸುರೇಶುಕುಮಾರ್ ಶರ್ವ, ಎಂಎಲ್​ಸಿ ಜೋಗೇಂದ್ರ ಕವಾಡೆ, ವೈದ್ಯ ಬೈದ್ಯನಾಥ್ ರಮೇಶ್ ಶರ್ಮಾ ಉಪಸ್ಥಿತರಿದ್ದರು.

  ಸಾಧನೆಗೆ ಸ್ಪೂರ್ತಿ

  ಸಂಸ್ಕೃತ ಭಾಷೆ ಅಭಿವೃದ್ಧಿ, ಹೊಸ ವಿಷಯಗಳ ಪ್ರಚಾರ ಸೇರಿ ಸಂಸ್ಕೃತಕ್ಕಾಗಿ ಜೀವನ ಮುಡಿಪಾಗಿಟ್ಟವರನ್ನು ‘ಮಹಾಕವಿ ಕಾಳಿದಾಸ ಸಂಸ್ಕೃತ ವರ್ತಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಶ್ರೇಷ್ಠ ಸಂಸ್ಕೃತ ವಿದ್ವಾಂಸರನ್ನು ಗುರುತಿಸುವುದಷ್ಟೇ ಅಲ್ಲದೆ, ಅವರ ಈ ಕಾರ್ಯದಿಂದ ಇತರರು ಸ್ಪೂರ್ತಿ ಪಡೆಯಲು ಪ್ರೇರೇಪಿಸುವುದು ಈ ಪ್ರಶಸ್ತಿ ಉದ್ದೇಶ ಎಂದು ಸಂಸ್ಥೆ ಮುಖ್ಯಸ್ಥರು ತಿಳಿಸಿದ್ದಾರೆ.

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts