ಮಗನಿಂದ ಕಿರುಕುಳ ದಯಾಮರಣಕ್ಕೆ ಅನುಮತಿ ಕೊಡಿ: ಕಾಳೇನಹಳ್ಳಿ ಗ್ರಾಮದ ಜವರೇಗೌಡ ಅಳಲು

Kalenahalli Javaregowda press conference Mandya

ಮಂಡ್ಯ: ಆಸ್ತಿಗಾಗಿ ತಮ್ಮ ಎರಡನೇ ಮಗ ಮಾರಣಾಂತಿಕವಾಗಿ ಹಲ್ಲೆ ಮಾಡಿದಲ್ಲದೆ, ನಿರಂತರ ಕಿರುಕುಳ ನೀಡುತ್ತಿದ್ದಾನೆ. ನಮಗೆ ನ್ಯಾಯ ಕೊಡಿ, ಇಲ್ಲದಿದ್ದರೆ ದಯಾಮರಣಕ್ಕೆ ಅವಕಾಶ ನೀಡುವಂತೆ ಎಂದು ಪಾಂಡವಪುರ ತಾಲೂಕು ಕಾಳೇನಹಳ್ಳಿ ಗ್ರಾಮದ ಜವರೇಗೌಡ ಮನವಿ ಮಾಡಿದರು.
ತಮ್ಮ ಜೀವನ ನಿರ್ವಹಣೆಗೆಂದು ಉಳಿಸಿಕೊಂಡಿರುವ ಆಸ್ತಿಯನ್ನು ನೀಡುವಂತೆ ಮಗ ನೀಲೇಗೌಡ ಹಾಗೂ ಆತನ ಪತ್ನಿ ಕೀರ್ತಿ ಕಿರುಕುಳ ನೀಡುತ್ತಿದ್ದಾರೆ. ಹಲ್ಲೆಯಿಂದ ನನಗೆ ಕೈಮುರಿದಿದೆ. ನನ್ನ ಪತ್ನಿ ಭಾಗ್ಯಮ್ಮಗೆ ಕಾಲು ಮುರಿದಿದ್ದು, ಎದ್ದು ಓಡಾಡದ ಸ್ಥಿತಿಯಲ್ಲಿದ್ದಾರೆ ಎಂದು ಬುಧವಾರ ಅಳಲು ತೋಡಿಕೊಂಡರು.
ಈ ಸಂಬಂದ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ, ದೂರನ್ನೇ ಬದಲಿಸಿಕೊಡುವಂತೆ ಒತ್ತಡ ಹೇರಿ ಅನ್ಯಾಯವೆಸಗಲಾಗುತ್ತಿದೆ. ದೂರಿನಲ್ಲಿ ಮಾರಣಾಂತಿಕ ಹಲ್ಲೆ ಎಂಬುದನ್ನು ಬದಲಿಸುವುದರ ಜತೆಗೆ ನೀಲೇಗೌಡ ಹಾಗೂ ಮಾವ ಸೇರಿದಂತೆ ಕೆಲವರ ಹೆಸರನ್ನು ತೆಗೆಯುವಂತೆ ಒತ್ತಡ ಹಾಕುತ್ತಿದ್ದಾರೆ. ಪ್ರಕರಣ ಸಂಬಂಧ ನ್ಯಾಯ ಒದಗಿಸಬೇಕೆಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಲ್ಲಿ ಮನವಿ ಮಾಡಿದ್ದು, ನ್ಯಾಯ ಒದಗಿಸಲಾಗದಿದ್ದರೆ ದಯಾಮರಣ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಜವರೇಗೌಡ ಪುತ್ರಿ ವರಲಕ್ಷ್ಮೀ, ವಕೀಲೆ ಸಲ್ಮಾ ಇತರರಿದ್ದರು.

Share This Article

ಸೂರ್ಯ, ಗುರು ಗ್ರಹದಿಂದ ರೂಪುಗೊಳ್ಳಲಿದೆ ಕೇಂದ್ರ ಯೋಗ: ಈ 3 ರಾಶಿಯವರಿಗೆ ಹಣದ ಸಮಸ್ಯೆ ದೂರ! Kendra Yoga

Kendra Yoga : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ನಿಮಗೆ ಜ್ವರ ಬಂದ್ರೆ ಈ ರೀತಿ ಮಾಡ್ತೀರಾ? ಈ ವಿಷಯಗಳನ್ನು ನೀವು ಖಂಡಿತ ತಿಳಿದುಕೊಳ್ಳಲೇಬೇಕು? Fever

Fever : ದೇಹದ ಉಷ್ಣತೆಯು ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಾದಾಗ, ಜನರಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರ ಬಂದಾಗ…

ಸಂಬಳ ಸಾಲ್ತಿಲ್ಲ! ಸಾಲ ತೀರಿಸಲು ಚಿನ್ನದ ಸಾಲ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ | Gold Loan

Gold Loan: ಸಂಸ್ಥೆ ಕೊಡುತ್ತಿರುವ ಸಂಬಳ ನಮಗೆ ಮಾತ್ರವಲ್ಲ, ನಮ್ಮ ಸಾಲ ತೀರಿಸಲು ಸಹ ಸಾಲುತ್ತಿಲ್ಲ…