ಕಲ್ಮಾಡಂಡ ತಂಡಕ್ಕೆ ಪ್ರಶಸ್ತಿ ಗರಿಮೆ

ಮಡಿಕೇರಿ: ಚೇರಂಬಾಣೆಯ ಬೇಂಗ್‌ನಾಡ್ ಕೊಡವ ಸಮಾಜದ ಸ್ಪೋರ್ಟ್ಸ್ ಆ್ಯಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ನಡೆದ 3ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ 5-3 ಗೋಲುಗಳ ಅಂತರದಲ್ಲಿ ಕಲ್ಮಾಡಂಡ ತಂಡ ಚೋಕಿರ ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಚೇರಂಬಾಣೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ 2ನೇ ಬಾರಿಗೆ ಕಲ್ಮಾಡಂಡ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಚೋಕಿರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ದಾನಿಗಳಾದ ಐಚೆಟ್ಟಿರ ಕನಿಕೆ ಕಾವೇರಮ್ಮ ಅವರು ತಮ್ಮ ಪತಿ ವಸಂತ ಸ್ಮರಣಾರ್ಥ ಪ್ರಥಮ ಬಹುಮಾನ, ಶನಿವಾರಸಂತೆಯ ಚಾಮೇರ ಪವನ್ ದೇವಯ್ಯ, ಮೋನಿಕಾ ದೇವಯ್ಯ ದ್ವಿತೀಯ ಬಹುಮಾನ ವಿತರಿಸಿದರು. ಬೇಂಗ್‌ನಾಡ್ ಕೊಡವ ಸಮಾಜ ಅಧ್ಯಕ್ಷ ಕುಟ್ಟೇಟಿರ ಕುಜ್ಞಪ್ಪ, ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಪಟ್ಟಮಾಡ ಕುಶಾಲಪ್ಪ, ಕಾರ್ಯದರ್ಶಿ ಬಾಚರಣಿಯಂಡ ದಿನೇಶ್, ಪಟ್ಟಮಾಡ ಕಮಲಾಕ್ಷಿ ಬಹುಮಾನ ವಿತರಿಸಿದರು.

Leave a Reply

Your email address will not be published. Required fields are marked *