ಉರುಳಿ ಬಿದ್ದ ಕಾರು: ಸ್ಥಳದಲ್ಲೇ ಸಾವಿಗೀಡಾದ ತಂದೆ, ಮಗಳು, ಮೂವರ ಸ್ಥಿತಿ ಗಂಭೀರ

ಕಲಬುರಗಿ: ಕಾರೊಂದು ಉರುಳಿ ಬಿದ್ದ ಪರಿಣಾಮ ತಂದೆ, ಮಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಳಿ ಬುಧವಾರ ನಡೆದಿದೆ.

ಸಾಯಪ್ಪ (40), ಸಂಧ್ಯಾ (11) ಮೃತ ದುರ್ದೈವಿಗಳು. ಮಹಾರಾಷ್ಟ್ರ ಮೂಲದ ಸಾಯಪ್ಪ ಹಾಗೂ ಅವರ ಕುಟುಂಬ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅವಘಡ ಸಂಭಂವಿಸಿದೆ. ಅಪಘಾತದಲ್ಲಿ ಸಾಯಪ್ಪನ ಪತ್ನಿ ಮತ್ತು ಮತ್ತೊಬ್ಬ ಮಗಳು ಸೇರಿದಂತೆ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *