ಸಿಡಿಲು ಬಡಿದು ಐದು ಕುರಿಗಳ ಸಾವು

ಕಲಕೇರಿ: ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಸುರಿದ ಬಿರುಗಾಳಿ ಮಿಶ್ರಿತ ಮಳೆಗೆ ಹೊರವಲಯದ ನಾಯಿಹಳ್ಳ ಪಕ್ಕದ ಜಮೀನಿನಲ್ಲಿನ ಕುರಿದೊಡ್ಡಿ ಬಳಿ ಸಿಡಿಲು ಬಿದ್ದು ಐದು ಕುರಿಗಳು ಹಾಗೂ ಒಂದು ನಾಯಿ ಸಾವಿಗೀಡಾಗಿದೆ.
ಸೂರ್ಯಕಾಂತ ತಳ್ಳೋಳಿ, ಈರಘಂಟೆಪ್ಪ ಸುಂಕದ, ನಿಂಗಪ್ಪ ಸುಂಕದ ಎಂಬುವವರಿಗೆ ಈ ಕುರಿಗಳು ಹಾಗೂ ನಾಯಿ ಸೇರಿದ್ದು, ಅಂದಾಜು 70,000 ರೂ. ಕುರಿಗಳು ಮೃತಪಟ್ಟಿವೆ.
ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ. ಅಬ್ದುಲ್‌ಮತೀನ್ ವಲ್ಲಿಭಾವಿ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *