ಕಲಕೇರಿ: ಶಾಂತಿ ಮತ್ತು ಸೌಹಾರ್ದದಿಂದ ಪ್ರತಿಯೊಬ್ಬರೂ ಗಣೇಶ ಉತ್ಸವ ಮತ್ತು ಮೊಹರಂ ಹಬ್ಬ ಆಚರಿಸಲು ಮುಂದಾಗಬೇಕು. ಯಾವುದೇ ಅಹಿತರ ಘಟನೆಗಳಿಗೆ ಎಡೆಮಾಡಿಕೊಡಬಾರದೆಂದು ಸಿಂದಗಿ ಸಿಪಿಐ ಸತೀಶಕುಮಾರ ಕಾಂಬಳೆ ಹೇಳಿದರು.
ಕಲಕೇರಿ ಗ್ರಾಮದ ಪೊಲೀಸ್ ಠಾಣೆ ಆವರಣದಲ್ಲಿ ಮುಂಬರುವ ಗಣೇಶೋತ್ಸವ ಮತ್ತು ಮೊಹರಂ ಹಬ್ಬದ ಪ್ರಯುಕ್ತವಾಗಿ ಹಮ್ಮಿಕೊಂಡಿದ್ದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಬ್ಬದ ಆಚರಣೆಯಲ್ಲಿ ಅನ್ಯರಿಗೆ ತೊಂದರೆ ಕೊಡಬಾರದು. ಪ್ರತಿಯೊಬ್ಬರೂ ಕಾನೂನನ್ನು ಪಾಲನೆ ಮಾಡಬೇಕು. ಕಾನೂನಿನ ಚೌಕಟ್ಟು ಮೀರಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು.
ಈಗಾಗಲೆ ಕೆಲ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಯೊಜನೆ ಮಾಡಲಾಗಿದ್ದು ಮಂಜೂರಾತಿ ದೊರೆತ ತಕ್ಷಣವೇ ಅವುಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇದರಿಂದ ಅನೇಕ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದರು.
ಕಲಕೇರಿ ಪಿಎಸ್ಐ ವಿನೋದ ಪೂಜಾರಿ ಮಾತನಾಡಿ, ಗಣೇಶ ಉತ್ಸವ ಮತ್ತು ಮೊಹರಂ ಹಬ್ಬಗಳು ಜತೆ ಜತೆಯಲ್ಲಿ ಬಂದಿರುವುದರಿಂದ ಪ್ರತಿಯೊಬ್ಬರೂ ಸಹೋದರತ್ವ ಭಾವದಿಂದ ಆಚರಿಸಬೇಕು. ಯಾವುದೇ ಕೋಮು ಗಲಭೆಗಳಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ, ನಮ್ಮ ಇಲಾಖೆಯಿಂದ ಬಿಗಿ ಬಂದೋಬಸ್ತ್ ಒದಗಿಸಲಾಗುವುದೆಂದು ತಿಳಿಸಿದರು.
ತಾಪಂ ಸದಸ್ಯ ಲಕ್ಕಪ್ಪ ಬಡಗೇರ ಮಾತನಾಡಿದರು. ಮಾಜಿ ತಾಪಂ ಸದಸ್ಯ ಸೋಮಶೇಖರ ಸಜ್ಜನ್, ಎಎಸ್ಐ ಆಸಂಗಿ, ನಬೀಲಾಲ್ ನಾಯ್ಕೋಡಿ, ಶರಭಯ್ಯ ಗದ್ದಗಿಮಠ, ನಜೀರ್ ದಲಾಲ್ ಮತ್ತಿತರರಿದ್ದರು.
ಬಾಪುಗೌಡ ದೇಸಾಯಿ, ಶರಬಯ್ಯ ಗದ್ಗಿಮಠ, ದೇವಿಂದ್ರ ದೊರೆಗೋಳ ದೇವಿಂದ್ರ ಬಡಗೇರ, ಜೈಭೀಮ್ ಹೊಸಮನಿ, ಪರಶುರಾಮ ದೊರೆಗೋಳ, ಅಪ್ಪು ದೇಸಾಯಿ, ರಾಜು ಆಲಗೂರ, ಸುಧಾಕರ ಕೌದಿ, ಮಲಕು ವಡ್ಡರ, ಪರಶುರಾಮ ವಡ್ಡರ, ಜಗು ವಡ್ಡೋಡಗಿ, ಅರ್ಜುನ ನಡುವಿನಕೇರಿ, ರಮೇಶ ಮೋಪಗಾರ, ಬಸವರಾಜ ಆಸ್ಕಿ(ವಂದಾಲ), ಸಂಜು ರಾಠೋಡ, ರಾಕೇಶ ಕೊಂಡಗೂಳಿ, ವಾಗೀಶ ನಾಗಠಾಣ, ಅಶೋಕ ವಡ್ಡರ, ಕಾಶೀಂ ನಾಯ್ಕೋಡಿ, ದೌವಲು ನಾಯ್ಕೋಡಿ, ನಬಿಲಾಲ ನಾಯ್ಕೋಡಿ, ಬಶೀರ ನಾಯ್ಕೋಡಿ, ಮಹಮ್ಮದ ಉಸ್ತಾದ, ಬಾಬು ಬಡೇಮ್ಮಗೋಳ, ಹುಸೇನ ಕೊಬಾಳ, ಮಹಿಬೂಬ್ ಬಾಷಾ ಮನಗೂಳಿ ಮತ್ತಿತರರಿದ್ದರು.