ಮಹಿಳೆ ಶವ ಪತ್ತೆ

ಕಲಕೇರಿ: ಕುರಿ ಮೇಯಿಸಲು ಹೋಗಿದ್ದ ಸಮೀಪದ ಬೆಕಿನಾಳ ಗ್ರಾಮದ ನಿವಾಸಿ ನೀಲಗಂಗಮ್ಮ ಶಂಕ್ರೆಪ್ಪ ನಾಟೀಕಾರ (48) ಶವವಾಗಿ ಪತ್ತೆಯಾಗಿದ್ದಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀಲಗಂಗಮ್ಮಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್​ಐ ಸತೀಶ ಕಣಮೇಶ್ವರ, ಸಿಪಿಐ ಮಹಾಂತೇಶ ದ್ಯಾಮಣ್ಣವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರಿನನ್ವಯ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.