ಶಾಲೆ ಸಂಸತ್ ರಚನೆ

ಕಲಕೇರಿ: ಗ್ರಾಮದ ಜೆ. ಜೆ. ಶಿಕ್ಷಣ ಸಂಸ್ಥೆಯ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ನೂತನ ಶಾಲಾ ಸಂಸತ್ ರಚಿಸಲಾಯಿತು.
ಶಾಲೆ ಸಂಸತ್ ಮತದಾನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ವೋಟಿಂಗ್ ವಿಭಾಗ ರಚಿಸಿ, ಮತದಾರರ ಪೆಟ್ಟಿಗೆ ಇಟ್ಟು, ಹೆಬ್ಬಟ್ಟಿಗೆ ಶಾಹಿ,ಬ್ಯಾಲೆಟ್ ಪೇಪರ್ ನೀಡಿದರು. ಶಿಕ್ಷಕರು ಪೋಲಿಂಗ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವಿಕೆ ಪ್ರಕ್ರಿಯೆ ಮೂರು ದಿನಗಳ ಕಾಲ ನಡೆಸಲಾಯಿತು. ಪೊಲೀಸ್ ಅಧಿಕಾರಿಯಾಗಿ ಸುರೇಶ ಮಾಲಿಪಾಟೀಲ, ಮುರ್ತುಜಾ ನಾಯ್ಕೋಡಿ, ಶಾಹಿನ್ ಮಕಾಂದಾರ, ಹೀಗಾನ ಕೆಂಬಾವಿ, ಆಸ್ಮಾ ಧಖನಿ, ಆಫ್ರೀನಾ ಕಲಕೇರಿ ಕಾರ್ಯ ನಿರ್ವಹಿಸಿದರು.
ಮುಖ್ಯಗುರು ವಿನೋದ ನಂದಿಮಠ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಾಹಿತಿ ಮುತ್ತು ಕುಂಟೋಜಿ ಚುನಾವಣೆ ವೀಕ್ಷಕರಾಗಿ ಕಾರ್ಯ ನಿರ್ವಹಿಸಿ ಮತದಾನದ ಮಹತ್ವ ವಿವರಿಸಿದರು. ಪ್ರಧಾನ ಮಂತ್ರಿಯಾಗಿ ಅರುಣ ಕನ್ನೋಳ್ಳಿ, ಹಣಕಾಸು ಮಂತ್ರಿಯಾಗಿ ಸುಸ್ಮೀತಾ ಹಿರೇಅಂಬಿಗೇರ, ಕ್ರೀಡಾಮಂತ್ರಿಯಾಗಿ ಅಮೃತಾ ಹಿರೇಮಠ, ಆರೋಗ್ಯ ಮಂತ್ರಿಯಾಗಿ ವಿಜಯಲಕ್ಷ್ಮೀ ಹಿರೇಮಠ, ಅನುರಾಧಾ ರಂಜೇರಿ, ಅಂಬಿಕಾ ಮೋಪಗಾರ ಆಯ್ಕೆಯಾದರು. ಶಾಲೆ ಸಿಬ್ಬಂದ್ದಿ, ಎಲ್ಲ ಮಕ್ಕಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *