ಹುಂಡಿಯಲ್ಲಿ 6.10 ಲಕ್ಷ ರೂ. ಲಭ್ಯ

ಕಲಾದಗಿ: ಸಮೀಪದ ಪ್ರಸಿದ್ಧ ಪವಮಾನ ಕ್ಷೇತ್ರ ತುಳಸಿಗೇರಿಯ ಹನುಮಂತ ದೇವರ ದೇವಸ್ಥಾನದಲ್ಲಿನ ಹುಂಡಿಗಳಲ್ಲಿದ್ದ ಹಣವನ್ನು ಗುರುವಾರ ಎಣಿಕೆ ಮಾಡಲಾಯಿತು. 6,10,001 ರೂಪಾಯಿ ಲಭ್ಯವಾಗಿದೆ.

ದೇವಾಲಯದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಮೋಹನ ನಾಗಠಾಣ ನೇತೃತ್ವದಲ್ಲಿ ದೇವಾಲಯದ ಗರ್ಭಗೃಹದ ಬಳಿಯಿರುವ ಹಾಗೂ ಪ್ರಾಂಗಣದಲ್ಲಿರುವ ನಾಲ್ಕು ಹುಂಡಿಗಳನ್ನು ತೆರೆದು ಅದರಲ್ಲಿ ಭಕ್ತರು ಹಾಕಿದ್ದ ಹಣ ಎಣಿಸಲಾಯಿತು.

ಹಳೇ ನಾಣ್ಯಗಳು ಪತ್ತೆ: ಎರಡು ಬಾರಿ ಎಣಿಕೆ ವೇಳೆ ವಿದೇಶ ನೋಟುಗಳು ಪತ್ತೆಯಾಗಿದ್ದವು. ಈ ಬಾರಿ ಒಂದಿಷ್ಟು 3 ಪೈಸೆ, 4 ಪೈಸೆ, 20 ಪೈಸೆ ನಾಣ್ಯಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದವು.

ಡಿಸೆಂಬರ್‌ನಲ್ಲಿ ದೇವಾಲಯದ ಗರ್ಭ ಗೃಹದ ಬಳಿ ಇರುವ ಹುಂಡಿ ತೆರೆದಾಗ 1 ಡಾಲರ್ ಮೌಲ್ಯದ ಎರಡು ಅಮೆರಿಕ ದೇಶದ ಕರೆನ್ಸಿಗಳು ಮತ್ತು 5 ರೂಪಾಯಿ ಮೌಲ್ಯದ ಭೂತಾನ್ ದೇಶದ ‘ನೆಗೂಲಟ್ರಮ್’ ಎಂದು ಕರೆಸಿಕೊಳ್ಳುವ ನೋಟು ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಉಪ ತಹಸೀಲ್ದಾರ್ ಪಿ.ಬಿ. ಸಿಂಗರಿ, ಕಂದಾಯ ವೃತ್ತ ನಿರೀಕ್ಷಕ ಆರ್.ಆರ್. ಕುಲಕರ್ಣಿ, ಕಂದಾಯ ನಿರೀಕ್ಷಕ ಯು.ಎಸ್. ಸೌದಾಗರ, ಗ್ರಾಮ ಲೆಕ್ಕಾಧಿಕಾರಿ ವಿಜಯಲಕ್ಷ್ಮೀ ನಾಯ್ಕರ್, ತುಳಸಿಗೇರಿ ಗ್ರಾಮೀಣ ವಿಕಾಸ ಬ್ಯಾಂಕ್ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *