ಆಧಾರ್ ನೋಂದಣಿಗೆ ಸೂಕ್ತ ಕ್ರಮಕ್ಕೆ ಸೂಚನೆ

ಕಲಾದಗಿ: ಗ್ರಾಮದ ನಾಡಕಚೇರಿಗೆ ಜಿಲ್ಲಾಕಾರಿ ಆರ್.ರಾಮಚಂದ್ರನ್ ಮಂಗಳವಾರ ದಿಢೀರ್ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

ಆಧಾರ್ ನೋಂದಣಿ ಸಮಸ್ಯೆ ಕುರಿತು ಹೆಚ್ಚು ದೂರುಗಳು ಬಂದ ಹಿನ್ನೆಲೆ ವೃತ್ತ ನಿರೀಕ್ಷಕ ಆರ್.ಆರ್.ಕುಲಕರ್ಣಿ ಅವರನ್ನು ನೋಂದಣಿ ಕಾರ್ಯದ ಬಗ್ಗೆ ಪ್ರಶ್ನಿಸಿದರು. ಮೂರ‌್ನಾಲ್ಕು ತಿಂಗಳಿಂದ ಆಧಾರ್ ಕೇಂದ್ರ ಕಾರ್ಯನಿರ್ವಹಿಸುತ್ತಿಲ್ಲ ಎನ್ನುತ್ತಿದಂತೆ ಜಿಲ್ಲಾಕಾರಿ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಸರಿಪಡಿಸುವಂತೆ ಕುಲಕರ್ಣಿ ಅವರಿಗೆ ಸೂಚಿಸಿದರು. ಆಧಾರ್ ನೋಂದಣಿಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡುವಂತೆ ಆದೇಶಿಸಿದರು.

ಸಾರ್ವಜನಿಕರ ಅಳಲು
ಜಿಲ್ಲಾಕಾರಿ ಸಾರ್ವಜನಿಕರಿಂದ ಆಧಾರ್ ನೋಂದಣಿ ಬಗ್ಗೆ ಮಾಹಿತಿ ಪಡೆಯುವಾಗ ವ್ಯಕ್ತಿಯೊಬ್ಬರೂ ‘ಆಧಾರ್ ಮಾಡಿಸಲು ಪೋಸ್ಟ್ ಆಫೀಸ್‌ಗೆ ಹೋದರೆ ಅವರು ನಾಡಕಚೇರಿಗೆ ಕಳಿಸುತ್ತಾರೆ. ಇಲ್ಲಿ ಬಂದರೆ ಇವರು ಪೋಸ್ಟ್ ಆಫೀಸ್‌ಗೆ ಹೋಗ್ರಿ ಎನ್ನುತ್ತಾರೆ’ ಎಂದು ಅಳಲು ತೋಡಿಕೊಂಡರು. ಅಲ್ಲಿಂದ ಅಂಚೆ ಕಚೇರಿಗೆ ತೆರಳಿದ ಜಿಲ್ಲಾಕಾರಿ, ಪೋಸ್ಟ್ ಮಾಸ್ಟರ್ ಎಸ್.ಎಂ. ತೆಗ್ಗಿ ಅವರಿಂದ ಆಧಾರ್ ನೋಂದಣಿ ಬಗ್ಗೆ ಮಾಹಿತಿ ಪಡೆದು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಫಸಲ್ ಬಿಮಾ ಮಾಹಿತಿ
ನಾಡಕಚೇರಿ ಮುಂಭಾಗದಲ್ಲಿದ್ದ ರೈತರಿಗೆ ಫಸಲ್ ಬಿಮಾ ಯೋಜನೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಕಾರಿ, ಅದರ ಸದುಪಯೋಗವನ್ನು ಎಲ್ಲರೂ ಪಡೆಯುವಂತೆ ಕೋರಿದರು.

ರೈತ ಸಂಪರ್ಕ ಕೇಂದ್ರಕ್ಕೂ ಭೇಟಿ
ರೈತ ಸಂಪರ್ಕ ಕೇಂದ್ರಕ್ಕೂ ದಿಢೀರ್ ಭೇಟಿ ನೀಡಿ, ‘ಕಿಸಾನ್ ಸಮ್ಮಾನ್’ ಯೋಜನೆಗೆ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಅಗತ್ಯ ಮಾಹಿತಿ ಪಡೆದು, ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು ಎಂದು ಸಹಾಯಕ ಕೃಷಿ ಅಕಾರಿ ಪಿ.ಬಿ.ಪೂಜಾರ ಅವರಿಗೆ ಸೂಚಿಸಿದರು.

ಎಲ್ಲದಕ್ಕೂ ಆಧಾರ್ ಬೇಕಾಗಿರುವಾಗ ಅದರ ನೋಂದಣಿ ವ್ಯವಸ್ಥೆ ಸರಿ ಇರದಿರುವುದು ನಿಜಕ್ಕೂ ವಿಪರ್ಯಾಸ. ಈ ಬಗ್ಗೆ ದೂರು ಬರುತ್ತಿದ್ದಂತೆ ಕಲಾದಗಿಗೆ ಬಂದಿದ್ದೇನೆ. ಪ್ರತ್ಯೇಕ ಸಿಬ್ಬಂದಿ ಇಲ್ಲದಿರುವುದು ನೋಂದಣಿಗೆ ಸಮಸ್ಯೆಯಾಗಿದ್ದು, ಒಂದೆರೆಡು ದಿನದಲ್ಲಿ ಸರಿಪಡಿಸಲಾಗುವುದು.
– ಆರ್.ರಾಮಚಂದ್ರನ್, ಜಿಲ್ಲಾಕಾರಿ, ಬಾಗಲಕೋಟೆ
Leave a Reply

Your email address will not be published. Required fields are marked *