
ಕಲಾದಗಿ: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಗ್ರಾಮದಲ್ಲಿ ಆಟೋ ಚಾಲನೊಬ್ಬ ವಿಭಿನ್ನ ರೀತಿಯಲ್ಲಿ ಜನಜಾಗೃತಿ ಮೂಡಿಸುತ್ತಿದ್ದಾನೆ.
ಯುವಕ ಯಮನಪ್ಪ ಬೂದಿಹಾಳ ತನ್ನ ಟಂಟಂ ವಾಹನವನ್ನು ಹತ್ತುವ ಪ್ರತಿಯೊಬ್ಬ ಪ್ರಯಾಣಿಕರಲ್ಲೂ ಕೈತೊಳೆದುಕೊಂಡೆ ಹತ್ತುವಂತೆ ಮನವಿ ಮಾಡುತ್ತ್ತಿದ್ದಾನೆ. ವೈರಸ್ ಹಬ್ಬುವುದನ್ನು ತಡೆಗಟ್ಟಬೇಕು ಎಂಬ ಆಶಯದೊಂದಿಗೆ ಈತ ತನ್ನ ಟಂಟಂನಲ್ಲಿ ಕೈತೊಳೆದುಕೊಳ್ಳಲು ನೀರಿನ ಬಾಟಲ್ ಹಾಗೂ ಸೋಪು ಇರಿಸಿದ್ದು ‘ಸಬಕಾರ ತಗೊಳ್ರಿ, ಕೈತೊಳೆದುಕೊಳ್ಳರಿ, ಟಂಟಂ ಹತ್ತರಿ’ ಎಂದು ಪ್ರಯಾಣಿಕರಿಗೆ ಹೇಳುವ ಮೂಲಕ ಸ್ವಚ್ಛತೆ ಕಾಪಾಡಲು ಮುಂದಾಗಿದ್ದಾನೆ.
ಜತೆಗೆ ಕರೊನಾ ವೈರಸ್ ಬಗ್ಗೆ ಜಾಗೃತಿಯ ಮಾತುಗಳನ್ನು ಹೇಳುತ್ತ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಲು ಕೋರುತ್ತಾನೆ. ಈತನ ಈ ಸಾಮಾಜಿಕ ಬದ್ಧತೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.