ತವರಿಗೆ ಹೋಗಿದ್ದ ಪತ್ನಿಯನ್ನು ಕೊಲ್ಲಲು ವಾಟ್ಸ್​ಆ್ಯಪ್​ ಅಸ್ತ್ರವನ್ನಾಗಿಸಿಕೊಂಡು ಕಾರ್ಯಸಾಧಿಸಿದ ಪತಿ

blank

ಕಲಬುರಗಿ: ತವರು ಮನೆ ಸೇರಿದ್ದ ಪತ್ನಿಯನ್ನು ಅತ್ತು ಕರೆದು ಗೋಗರೆದು ಉಪಾಯವಾಗಿ ವಾಪಸ್​ ಕರೆಸಿಕೊಂಡು ಪತಿರಾಯನೊಬ್ಬ, ಬಳಿಕ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ಕಲಬುರಗಿಯಲ್ಲಿ ನಡೆದಿದೆ. ಪೊಲೀಸರ ವಿಚಾರಣೆ ವೇಳೆ ಆತಂಕಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.

ಶರಣಮ್ಮ ಕೊಲೆಯಾದವಳು. ಪತಿ ಶರಣಪ್ಪನೊಂದಿಗಿನ ವೈಮನಸ್ಸಿನಿಂದ ಶರಣಮ್ಮ ತವರು ಮನೆ ಸೇರಿದ್ದಳು. ಇತ್ತ ಪತ್ನಿಯ ಮೇಲೆ ತೀವ್ರ ಅಸಮಾಧಾನಗೊಂಡಿದ್ದ ಶರಣಪ್ಪ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ನೀನಿಲ್ಲದೆ ನನಗೆ ಬದುಕುವುದಕ್ಕೆ ಆಗುವುದಿಲ್ಲ. ನಿನ್ನ ಬಿಟ್ಟು ಇರುವುದಕ್ಕೆ ಆಗುತ್ತಿಲ್ಲ. ನಿನ್ನ ಪ್ರೀತಿ ಕಾಡುತ್ತಿದೆ. ನೀನಿಲ್ಲದೆ ಮಕ್ಕಳು ಮತ್ತು ನಾನು ಊಟ-ತಿಂಡಿ‌ ಕೂಡ ಮಾಡುತ್ತಿಲ್ಲ ಎಂದು ಕಣ್ಣೀರಿಟ್ಟು ಗೋಳಾಡಿದ ವಿಡಿಯೋ ಮಾಡಿ ಶರಣಪ್ಪ ಪತ್ನಿಗೆ ವಾಟ್ಸ್​ಆ್ಯಪ್​ ಮಾಡಿದ್ದ ಎಂದು ಹೇಳಲಾಗಿದೆ.

ಗಂಡನ ಮೊಸಳೆ ಕಣ್ಣೀರನ್ನು ನಂಬಿದ ಶರಣಮ್ಮ ತವರು ಮನೆಯಿಂದ ಕಲಬುರಗಿ ತಾಲೂಕಿನ ಅವರಾದ ಗ್ರಾಮದ ಗಂಡನ ಮನೆಗೆ ಮರಳಿದ್ದಾಳೆ. ಬಳಿಕ ಹೆಂಡತಿಯನ್ನು ಹೊಲಕ್ಕೆ ಕರೆದುಕೊಂಡು ಹೋಗಿದ್ದ ಶರಣಪ್ಪ, ಹೊಲದಲ್ಲಿ ಪತ್ನಿಯೊಂದಿಗೆ ಗಲಾಟೆ ತೆಗೆದು ಕೊಲೆ ಮಾಡಿದ್ದಾನೆ. ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಪ್ಪ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

Share This Article

ಬೇಸಿಗೆಯಲ್ಲಿ ಹೊಸ ಬೆದರಿಕೆ… ಸ್ವಲ್ಪ ಎಚ್ಚರ ತಪ್ಪಿದ್ರೆ ಸಾವಿಗೆ ಕಾರಣವಾಗಬಹುದು ಎಚ್ಚರ! Summer

Summer : ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿದ್ದಂತೆ ನೀರಿನಿಂದ ಹರಡುವ ರೋಗಗಳ ಬಗ್ಗೆ ಜಾಗರೂಕರಾಗಿರಲು ಆರೋಗ್ಯ ಇಲಾಖೆ…

ಈ 3 ರಾಶಿಯ ಮಹಿಳೆಯರು ಪ್ರೀತಿಯಲ್ಲಿ ಎಂದಿಗೂ ಮೋಸ ಮಾಡುವುದಿಲ್ಲವಂತೆ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

ಹವಾಮಾನ ಬದಲಾದ ತಕ್ಷಣ ಶೀತ & ಕೆಮ್ಮು ಬರುತ್ತದೆಯೇ?; ಪರಿಹಾರಕ್ಕೆ ಇಲ್ಲಿದೆ ಮನೆಮದ್ದು | Health Tips

ದೇಶಾದ್ಯಂತ ಹವಾಮಾನ ಬದಲಾಗುತ್ತಿದ್ದು ಈ ಬದಲಾಗುತ್ತಿರುವ ಹವಾಮಾನದಲ್ಲಿ ಶೀತ, ಜ್ವರ, ಜೀರ್ಣಕಾರಿ ಸಮಸ್ಯೆ, ಅಲರ್ಜಿ ಮತ್ತು…