ಮಕ್ಕಳಿಗೆ ಕಡ್ಡಾಯ ಶಿಕ್ಷಣಕ್ಕೆ ಸಂಕಲ್ಪ

ಕಲಬುರಗಿ: ಪಾಲಕರು 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಲು ಸಂಕಲ್ಪ ಮಾಡಿದಾಗಲೇ ಬಾಲಕಾಮರ್ಿಕ ಪದ್ಧತಿ ಬೇರುಸಹಿತ ಕಿತ್ತೊಗೆಯಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪಿ.ಟಿ. ಕಟ್ಟಿಮನಿ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕಾಮರ್ಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾಮರ್ಿಕ ನಿಮರ್ೂಲನಾ ಹಾಗೂ ಪುನರ್ವಸತಿ ಸಂಘ ಮತ್ತು ಮಕ್ಕಳ ಸಹಾಯವಾಣಿ-1098 ಸಹಯೋಗದಡಿ ಮಂಗಳವಾರ ಆಯೋಜಿಸಿದ್ದ ವಿಶ್ವ ಬಾಲಕಾಮರ್ಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲಕಾಮರ್ಿಕ ಪದ್ಧತಿ ನಿಮರ್ೂಲನೆ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು. ಬಹುತೇಕ ಬಾಲ ಕಾಮರ್ಿಕರು ಕೃಷಿಯಲ್ಲಿ, ನಗರದ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿರುತ್ತಾರೆ. ಜಿಲ್ಲೆಯಲ್ಲಿರುವ ಬಾಲ ಕಾಮರ್ಿಕರನ್ನು ಗುರುತಿಸಿ ಮುಖ್ಯ ವಾಹಿನಿಗೆ ಕರೆತರಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಆರ್.ಮಾಣಿಕ್ಯ ಮಾತನಾಡಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೀನಾ ರಷ್ಮಿ ಡಿಸೋಜಾ, ಚೈಲ್ಡ್ಲೈನ್ ನೋಡಲ್ ಕೇಂದ್ರದ ನಿದರ್ೇಶಕ ಡಾ. ಲಿಂಗರಾಜ ಕೋಣಿನ್, ವಿಠ್ಠಲ್ ಚಿಕಣಿ, ಫಾದರ್ ಸಜ್ಜಿತ್ ಜಾಜರ್್, ಆನಂದರಾಜ ಉಪಸ್ಥಿತರಿದ್ದರು.

ತಹಸೀಲ್ದಾರ್ ವೇದಮೂತರ್ಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಲಹಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರುಗಳಾದ ಸುರೇಶ ಬಡಿಗೇರ, ಶಿವಶಂಕರ ರೇಷ್ಮಿ, ರಾಜ್ಯ ಕಟ್ಟಡ ಮತ್ತು ಇತರೆ ಕಾಮರ್ಿಕರ ಕಲ್ಯಾಣ ಮಂಡಳಿ ಸದಸ್ಯ ಶಂಕರ ಕಟ್ಟಿಸಂಗಾವಿ ಮಾತನಾಡಿದರು. ಶಿಕ್ಷಕಿ ಆಶಾ ಹೆಗಡೆ ನಿರೂಪಿಸಿದರು.
ಸಹಾಯಕ ಕಾಮರ್ಿಕ ಆಯುಕ್ತ ಎಂ.ಎನ್.ದೇವರಾಜು ಪ್ರಾಸ್ತಾವಿಕ ಮಾತನಾಡಿದರು. ಯೋಜನಾ ನಿದರ್ೇಶಕ ಸಂತೋಷ ಕುಲಕಣರ್ಿ, ಹಿರಿಯ ಕಾಮರ್ಿಕ ನಿರೀಕ್ಷಕರಾದ ರವೀಂದ್ರಕುಮಾರ, ರಮೇಶ ಸುಂಬಡ, ಶ್ರೀಹರಿ ದೇಶಪಾಂಡೆ, ಮತ್ತು ಶಶಿಕಾಂತ ಕುಲಕಣರ್ಿ, ಶ್ರೀನಿವಾಸ, ಮಹೇಶ , ದಿಲೀಪ, ಶಿವರಾಜ ಇತರರಿದ್ದರು.

ಬಾಲಕಾಮರ್ಿಕರಾಗಿದ್ದು ಶಾಲೆಯಲ್ಲಿ ಓದಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಪುಂಡಲೀಕ ಶಿವರಾಯ, ನಿಖಿತಾ ವಿಷ್ಣುಕಾಂತ, ಸುಲ್ತಾನಾ ಮೆಹಬೂಬಸಾಬ ಅವರನ್ನು ಸನ್ಮಾನಿಸಲಾಯಿತು. ನಂತರ ಆರ್.ಕೆ.ಸಂದೀಪ ನಿದರ್ೇಶನದ ಮುಗ್ಧ ಕೈಗಳು ಎಂಬ ಕಿರುಚಿತ್ರ ಪ್ರದಶರ್ಿಸಲಾಯಿತು.

Leave a Reply

Your email address will not be published. Required fields are marked *