ಪಂಜಾಬ್‌, ಹರಿಯಾಣ ಜನರಿಗೆ ಮರ್ಯಾದೆ ಕೊಡಿ ಎಂದು ಪ್ರತಿಭಟನೆ

ಕಲಬುರಗಿ: ‘ಪಂಜಾಬ್ ಹರಿಯಾಣ ಜನರಿಗೆ ಮರ್ಯಾದೆ ಕೊಡಿ’ ಎಂದು ಫ್ಲೆಕ್ಸ್‌ ಹಿಡಿದು ವ್ಯಕ್ತಿಯೊಬ್ಬ ಪ್ರತಿಭಟನೆ ನಡೆಸುತ್ತಿರುವ ಅಪರೂಪದ ಘಟನೆ ವರದಿಯಾಗಿದೆ.

ಚಂಡೀಗಢ್‌ನ ಸೆಕ್ಟರ್ 46ರ ಸರ್ಕಾರಿ ಸ್ನಾತಕೋತ್ತರ ಕಾಲೇಜಿನ ಪ್ರೊಫೆಸರ್ ಪಂಡಿತ್‌ರಾವ್‌ ಎಂಬಾತ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಫ್ಲೆಕ್ಸ್ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾಲುಟಗಿ ಗ್ರಾಮದವರಾದ ಪಂಡಿತ್‌ರಾವ್, ಸಿಖ್ಖರ ಮೇಲಿನ ಹಲ್ಲೆಯನ್ನು ಖಂಡಿಸಿ ಹಾಗೂ ಅವರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡಿದ್ದರು.

ಕಲಬುರಗಿಯ ಕೆಲವೆಡೆ ಮಕ್ಕಳ ಕಳ್ಳೆರೆಂದು ಸಿಖ್ಖರ ಮೇಲೆ ಹಲ್ಲೆ ನಡೆಸಲಾಗಿತ್ತು.

Leave a Reply

Your email address will not be published. Required fields are marked *