ಅಪೌಷ್ಟಿಕ ಮಕ್ಕಳಿಂದ ಭಿಕ್ಷಾಟನೆ ಮಾಡಿಸುತ್ತಿದ್ದವರು ಅಂದರ್

ಕಲಬುರಗಿ: ಅಪೌಷ್ಟಿಕ ಮಕ್ಕಳನ್ನು ಅಕ್ರಮ ಸಾಗಣೆ ಮಾಡಿ ಭಿಕ್ಷಾಟನೆ ಮಾಡಿಸುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ ಇಬ್ಬರು ಮಹಿಳೆಯರ ವಿರುದ್ಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಬಿಯಾ (30), ಫರೀದಾ (24) ಹಾಗೂ ಕಲಬುರಗಿ ಮೂಲದ ಬಶೀರ್ ಅಹ್ಮದ್ ಎಂಬುವರನ್ನು ಹೆಚ್ಚುವರಿ ಎಸ್ಪಿ ಜಯಪ್ರಕಾಶ, ಎಎಸ್ಪಿ ಲೋಕೇಶ ಬಿ.ಜೆ ಮಾರ್ಗದರ್ಶನದಲ್ಲಿ ಪಿಎಸ್ಐ ಮಲ್ಲಮ್ಮ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ. ಬಶೀರ್ ಭಿಕ್ಷಾಟನೆಗೆ ಹಚ್ಚುತ್ತಿದ್ದ ಮುಖ್ಯ ವ್ಯಕ್ತಿ ಎನ್ನಲಾಗಿದೆ.

ಅಪೌಷ್ಟಿಕ ಮಕ್ಕಳನ್ನು ತಳ್ಳುವ ಬಂಡಿಯಂತಿರುವ ಗಾಲಿಯ ಡಬ್ಬಾದಲ್ಲಿ ಕುಳ್ಳಿರಿಸಿ, ಇನ್ನಿಬ್ಬರು ಬಾಲಕರ ಮೂಲಕ ಭಿಕ್ಷೆ ಬೇಡಲು ಹಚ್ಚಿದ್ದರು. ಈ ಬಾಲಕರಿಗೆ ಇಂತಿಷ್ಟು ಹಣ ನೀಡುತ್ತಿದ್ದರು. ಈ ಮೂಲಕ ವ್ಯವಸ್ಥಿತವಾಗಿ ಭಿಕ್ಷಾಟನೆ ಕೆಲಸ ಮಾಡಿಸುತ್ತಿದ್ದರು ಎನ್ನಲಾಗಿದೆ.
ಬಂಧಿತರಿಬ್ಬರು ಆರು ಮಕ್ಕಳೊಂದಿಗೆ ಕೆಲ ದಿನಗಳ ಹಿಂದಷ್ಟೆ ಕಲಬುರಗಿಗೆ ಬಂದಿದ್ದರು. ಹುಸೇನಿ ಗಾಡರ್್ನ್ ಪ್ರದೇಶದಲ್ಲಿ ಗುರುವಾರ ಭಿಕ್ಷಾಟನೆ ಮಾಡುತ್ತಿದ್ದಾಗ ಸಾರ್ವಜನಿಕರು ಮಕ್ಕಳ ಸಹಾಯವಾಣಿಗೆ ಕರೆ ಮಾಹಿತಿ ನೀಡಿದ್ದರು. ಆಗ ಸಹಾಯವಾಣಿ ಹಾಗೂ ಡಾನ್ ಬಾಸ್ಕೋ ಸಿಬ್ಬಂದಿ ಕಾಯರ್ಾಚರಣೆ ಮಾಡಿ ಮಕ್ಕಳನ್ನು ರಕ್ಷಿಸಿದ್ದರು.

ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳನ್ನು ಜಿಲ್ಲಾಸ್ಪತ್ರೆ ಎನ್ಆರ್ಸಿ ಕೇಂದ್ರ ಹಾಗೂ ಭೀಕ್ಷೆ ಬೇಡುತ್ತಿದ್ದ ಇಬ್ಬರು ಬಾಲಕರನ್ನು ಬಾಲಕರ ಬಾಲಮಂದಿರಕ್ಕೆ ಸೇರಿಸಲಾಗಿತ್ತು.

Leave a Reply

Your email address will not be published. Required fields are marked *