ಖರ್ಗೆ ನೆಲದಲ್ಲಿ ಕೈಗೆ ಮತ್ತೊಂದು ಪೆಟ್ಟು

Latest News

ಸಿರಿಯಾದಲ್ಲಿ ನಡೆದ ಕಾರು ಬಾಂಬ್​ ದಾಳಿಗೆ 10 ನಾಗರಿಕರ ಸಾವು, 15 ಮಂದಿಗೆ ಗಾಯ

ಸಿರಿಯಾ: ಇಲ್ಲಿನ ಅಲ್​ ಬಾಬ್​ ಸ್ಪುಟ್ನಿಕ್​ ನಗರದಲ್ಲಿ ಶನಿವಾರ ನಡೆದ ಕಾರ್​ ಬಾಂಬ್ ದಾಳಿಗೆ ಸುಮಾರು 10 ನಾಗರಿಕರು ಸಾವಿಗೀಡಾಗಿ, 15 ಮಂದಿ...

ಈ ಅರಿಭಯಂಕರ ವೇಗಿ ಭಾರತದ ಮಾಲ್ಕಂ ಮಾರ್ಷಲ್​ ಎಂದು ಸುನಿಲ್​ ಗಾವಸ್ಕರ್​ ಹೊಗಳಿದ್ದು ಯಾರನ್ನ?

ನವದೆಹಲಿ: ಭಾರತ ಕ್ರಿಕೆಟ್​ ತಂಡದಲ್ಲಿ ಹಿಂದೊಮ್ಮೆ ವೇಗಿಗಳನ್ನು ಚೆಂಡಿನ ಹೊಳಪನ್ನು ತೆಗೆದುಹಾಕಲು ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಇಂಥ ಒಂದು ನಂಬಿಕೆಯನ್ನು ನೀಗಿಸಿದವರು...

ಕೃಷಿ ಮಾರುಕಟ್ಟೆಯಲ್ಲಿ ರೈತನ ತರಕಾರಿ ಮೇಲೆ ಕಾರು ಚಲಾಯಿಸಿ ದರ್ಪ ತೋರಿದ ಕೃಷಿ ಅಧಿಕಾರಿ

ಹಾಪುರ್ (ಉತ್ತರ ಪ್ರದೇಶ): ಹಿರಿಯ ಕೃಷಿ ಅಧಿಕಾರಿಯೊಬ್ಬರು ರೈತನ ತರಕಾರಿ ಮೇಲೆ ಕಾರು ಚಲಾಯಿಸಿ ತರಕಾರಿ ನಾಶ ಮಾಡಿದ ಘಟನೆ ಹಾಪುರ್​ ಜಿಲ್ಲೆಯ...

ಸಂಸದ, ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಕಾಣೆಯಾಗಿದ್ದಾರೆ ಹುಡುಕಿಕೊಡಿ: ದೆಹಲಿಯಲ್ಲಿ ಪತ್ತೆಯಾದ ನಾಪತ್ತೆ ಪೋಸ್ಟರ್​!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಲ್ಬಣಿಸಿರುವ ವಾಯುಮಾಲಿನ್ಯ ಪರಿಸ್ಥಿತಿಯನ್ನು ಕುರಿತು ಚರ್ಚಿಸಲು ಸಂಸದೀಯ ಸಮಿತಿ ಕರೆದಿದ್ದ ಸಭೆಗೆ ಗೈರುಹಾಜರಾದ ಪೂರ್ವ ದೆಹಲಿಯ ಬಿಜೆಪಿ...

ಮೂಡಬಿದರೆಯ ತೋಡಾರು ಗ್ರಾಮದ ಅಯ್ಯಪ್ಪ ಭಕ್ತರೊಂದಿಗೆ ಹೆಜ್ಜೆ ಹಾಕುತ್ತಿರುವ ಶ್ವಾನ

ಚಿಕ್ಕಮಗಳೂರು: ತಿರುಪತಿಯಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ಹೊರಟಿರುವ ಭಕ್ತರ ತಂಡದ ಜತೆ ಶ್ವಾನವೊಂದು ತೆರಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ...

ಬೆಂಗಳೂರು/ಕಲಬುರಗಿ: ಪ್ರಸಕ್ತ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಲೋಕಸಭೆ ಕಾಂಗ್ರೆಸ್ ನಾಯಕ, ಕಲಬುರಗಿ ಕ್ಷೇತ್ರದ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಲು ಬಿಜೆಪಿ ಪಣತೊಟ್ಟಿದ್ದು, ಆ ಭಾಗದ ಪ್ರಮುಖ ನಾಯಕರನ್ನು ತನ್ನತ್ತ ಸೆಳೆದು ಕಾಂಗ್ರೆಸ್​ಗೆ ಪೆಟ್ಟು ನೀಡುತ್ತಿದೆ. ಇದರ ಭಾಗವಾಗಿ ಗುರುವಾರ ಪ್ರಕಟವಾದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಉಮೇಶ್ ಜಾಧವ್ ಹೆಸರು ಘೋಷಣೆಯಾಗಿದೆ. ಜತೆಗೆ ಹೈದರಾಬಾದ್ ಕರ್ನಾಟಕದ ಹಿರಿಯ, ಪ್ರಭಾವಿ ರಾಜಕಾರಣಿ ಎಂದೇ ಖ್ಯಾತಿ ಹೊಂದಿರುವ ಮಾಜಿ ಸಚಿವ ಡಾ.ಎ.ಬಿ. ಮಾಲಕರಡ್ಡಿ ಅವರನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಕಾಂಗ್ರೆಸ್​ಗೆ ಬಿಜೆಪಿ ಮತ್ತೊಂದು ಆಘಾತ ನೀಡಿದೆ. ಕಳೆದೊಂದು ವರ್ಷದಲ್ಲಿ ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಬಂದ ನಾಲ್ಕನೇ ಮುಖಂಡ ಇವರಾಗಿದ್ದಾರೆ.

ಬಿಜೆಪಿ ಸೇರುವ ಸಂಬಂಧ ಗುರು ವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವ ರನ್ನು ಬೆಂಗಳೂರಿನ ಡಾಲರ್ಸ್ ಕಾಲನಿ ಯಲ್ಲಿನ ನಿವಾಸದಲ್ಲಿ ಭೇಟಿ ಮಾಡಿದ ಮಾಲಕರಡ್ಡಿ ಮಾತುಕತೆ ನಡೆಸಿದ್ದು, ಶುಕ್ರವಾರ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಬಳಿಕ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮಾಲಕರಡ್ಡಿ ಅವರು ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದು, ಶೀಘವೇ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು

ಕೈ ನಿದ್ದೆಗೆಡಿಸಿದ ಬೆಳವಣಿಗೆ: ಲೋಕಸಭಾ ಚುನಾವಣೆ ವೇಳೆ ಘಟಾನುಘಟಿ ನಾಯಕರು ಪಕ್ಷ ತೊರೆಯುತ್ತಿರುವುದು ಖರ್ಗೆ ಸೇರಿ ಕಾಂಗ್ರೆಸಿಗರನ್ನು ಕಂಗೆಡಿಸಿದೆ. ಕಾರಣ, ಇವರ ಪಕ್ಷಾಂತರದಿಂದ ಬೀದರ್, ಕಲಬುರಗಿ, ರಾಯಚೂರು ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಯಾದಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಐದು ಸಲ ಶಾಸಕರಾಗಿ ಎರಡು ಬಾರಿ ಸಚಿವರಾಗಿದ್ದ ಇವರ ಪಕ್ಷ ತೊರೆಯುವ ನಿರ್ಧಾರಕ್ಕೆ ಖರ್ಗೆ ಮೇಲಿನ ಅಸಮಾಧಾನವೇ ಕಾರಣವಾಗಿದೆ. ಈಗಾಗಲೇ ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರ, ಮಾಲೀಕಯ್ಯ ಗುತ್ತೇದಾರ್ ಮತ್ತು ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ಬಿಜೆಪಿ ಸೇರಿದ್ದು, ಈ ಸಾಲಿಗೀಗ ಮಾಲಕರಡ್ಡಿ ಸೇರಲಿದ್ದಾರೆ.

4 ವರ್ಷದ ಹಿಂದೆಯೇ: ನಾಲ್ಕು ವರ್ಷ ಮೊದಲೇ ಮಾಲಕರಡ್ಡಿ ಬಿಜೆಪಿ ಸೇರಬೇಕಿತ್ತು ಎಂದು ಅವರ ಬೆಂಬಲಿಗರು ಹೇಳುತ್ತಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಲಬುರಗಿಗೆ ಭೇಟಿ ನೀಡಿದ್ದಾಗ ಡಾ.ಮಾಲಕರಡ್ಡಿ ಸೇರಿ ಕೆಲ ಹಿರಿಯ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಲಾಗಿತ್ತು. ಇದು ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷ ಬಿಡಲು ತೀರ್ವನಿಸಿದ್ದಾಗ ಟಿಕೆಟ್ ಕೊಟ್ಟು ಸಮಾಧಾನಪಡಿಸಲಾಗಿತ್ತು. ಆದರೆ, ಬಿಜೆಪಿ ವಿರುದ್ಧ ಸೋಲು ಅನುಭವಿಸಿದ್ದರು. ಮಾಲಕರಡ್ಡಿ ಬೇಸರವನ್ನು ಮನಗಂಡಿದ್ದ ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರ ಪಕ್ಷಕ್ಕೆ ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆನ್ನಲಾಗಿದೆ. ಹೀಗಾಗಿ ಬಿಜೆಪಿ ಮುಖಂಡರಲ್ಲೂ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಲಾಗಿದೆ.

ನಾನು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರ್ಚಚಿಸಿದ್ದೇನೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸದ್ಯ ಪ್ರಧಾನಿಯಾಗುವ ಯೋಗ್ಯತೆ ಇಲ್ಲ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗ ಬೇಕೆಂಬ ನಿಟ್ಟಿನಲ್ಲಿ ಬೇಷರತ್ ಆಗಿ ಬಿಜೆಪಿ ಸೇರಲು ಮುಂದಾಗಿದ್ದೇನೆ. ಶುಕ್ರವಾರವೇ ಬಿಜೆಪಿಗೆ ಸೇರುವೆ.

| ಡಾ.ಎ.ಬಿ. ಮಾಲಕರಡ್ಡಿ ಮಾಜಿ ಸಚಿವ

ಗೌಡರದ್ದು ರಾಕ್ಷಸ ಫ್ಯಾಮಿಲಿ!

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರದ್ದು ರಾಕ್ಷಸ ಫ್ಯಾಮಿಲಿ ಇದ್ದಂಗೆ… ಇದು ಜೆಡಿಎಸ್​ನ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ದೇವೇಗೌಡರನ್ನು ಹೊಗಳಿದ ಪರಿ! ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸುತ್ತಿದ್ದಾರೆಂಬ ಬಿಜೆಪಿ ಟೀಕೆ ಕುರಿತು ನಗರದಲ್ಲಿ ಪ್ರತಕರ್ತರ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಸಿದ ಶ್ರೀನಿವಾಸ್, ಅವರು ಯಾರಿಗೂ, ಯಾವುದಕ್ಕೂ ಅಂಜುವುದಿಲ್ಲ ಎಂದರು.

ಇಂದು ಕಾಂಗ್ರೆಸ್ ಪಟ್ಟಿ ರಿಲೀಸ್

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಗುರುವಾರ ಸಭೆ ನಡೆಸಿದ್ದು, ಶುಕ್ರವಾರ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದ್ದಾರೆ. ಮೈತ್ರಿ ಕಾರಣಕ್ಕೆ ಕಾಂಗ್ರೆಸ್ ಪಾಲಿಗೆ 20 ಕ್ಷೇತ್ರಗಳು ಸಿಕ್ಕಿದ್ದು, ಇದರಲ್ಲಿ ಏಳು ಕ್ಷೇತ್ರಗಳಿಗೆ ಮಾತ್ರ ಹೆಸರು ಅಂತಿಮಗೊಳಿಸಬೇಕಿತ್ತು. ಉಳಿದಂತೆ 9 ಹಾಲಿ ಸಂಸದರಿಗೆ ಮತ್ತೆ ಅವಕಾಶ ಸಿಕ್ಕಿತ್ತು. ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಹಾವೇರಿ, ಹುಬ್ಬಳ್ಳಿ ಧಾರವಾಡ, ದಕ್ಷಿಣ ಕನ್ನಡ, ಬೆಂ.ದಕ್ಷಿಣಕ್ಕೆ ಅಭ್ಯರ್ಥಿ ಗುರುವಾರ ರಾತ್ರಿ ಅಂತಿಮಗೊಳಿಸಲಾಗಿದೆ.

ಹಾಸನ ಕಿಚ್ಚು ಮಂಡ್ಯ ರೊಚ್ಚು

ಬೆಂಗಳೂರು: ಹಾಸನ ಹಾಗೂ ಮಂಡ್ಯ ಕ್ಷೇತ್ರಗಳು ಮೈತ್ರಿ ಪಕ್ಷಗಳ ಪಾಲಿಗೆ ಅಕ್ಷರಶಃ ಬಿಸಿತುಪ್ಪವಾಗಿ ಪರಿಣಮಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ ಆದಿಯಾಗಿ ಪ್ರಮುಖ ನಾಯಕರೆಲ್ಲ ಅಭ್ಯರ್ಥಿಗಳ ಆಯ್ಕೆ ಸಭೆಗಾಗಿ ದೆಹಲಿಗೆ ತೆರಳಿದ್ದರಿಂದ ಗುರುವಾರ ಹಾಸನ ಬಿಕ್ಕಟ್ಟು ಪರಿಹಾರಕ್ಕೆ ಕರೆಯಲಾಗಿದ್ದ ಸಭೆ ರದ್ದಾಯಿತು. ಪರಿಣಾಮ, ಆ ಜಿಲ್ಲೆಯಿಂದ ಆಗಮಿಸಿದ್ದ ಮುಖಂಡರ ಮತ್ತು ಕಾರ್ಯಕರ್ತರು ಸಮಸ್ಯೆ ಕಾವನ್ನು ಹಾಗೇ ಇಟ್ಟುಕೊಂಡು ತಮ್ಮೂರು ಗಳಿಗೆ ವಾಪಸಾದರು. ಹಾಸನ ಜಿಲ್ಲೆಯ ನಮ್ಮ ಪಕ್ಷದ ಮುಖಂಡರ ಜತೆಗೆ ಜೆಡಿಎಸ್ ನಾಯಕರ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸಬೇಕಿದ್ದ ರಾಜೀ ಸಂಧಾನ ಸಭೆ ಮುಂದಕ್ಕೆ ಹೋಗಿದ್ದು, ಶನಿವಾರ ಸಭೆ ನಡೆಸುವ ಬಗ್ಗೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಜತೆಗೆ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆಗೆ ತೆರಳುವಂತೆ ಅವರು ಹಾಸನ ಮುಖಂಡರಿಗೆ ತಾಕೀತು ಮಾಡಿದ್ದಾರೆ.

ಮಂಜು ಪುತ್ರ ಹಾಜರಿ: ಎ.ಮಂಜು ಬಿಜೆಪಿಗೆ ಹೋಗಿದ್ದಾರೆ. ಅವರ ಪುತ್ರ ಕಾಂಗ್ರೆಸ್​ನಲ್ಲಿ ಉಳಿಯುತ್ತೇನೆ ಎಂದಿದ್ದಾರೆ. ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸುವ ವೇಳೆ ಮಂಜು ಪುತ್ರ ಮಂಥರ ಗೌಡ ಹಾಜರಿರಲಿದ್ದಾರೆ ಎಂದು ಹಾಸನ ಜಿಲ್ಲೆಯ ಎಚ್.ಕೆ.ಮಹೇಶ್ ಪ್ರತಿಕ್ರಿಯಿಸಿದ್ದಾರೆ.

ಮಂಡ್ಯ ಬಿಕ್ಕಟ್ಟು

ಸಿಎಂ ಸವಾಲಿನಂತೆ ಪಕ್ಷೇತರ ಅಭ್ಯರ್ಥಿ ಯಾಗಿ ಕಣಕ್ಕಿಳಿದ ಸುಮಲತಾ ಶಕ್ತಿ ಪ್ರದರ್ಶನ ಹಿನ್ನೆಲೆ ಕಾಂಗ್ರೆಸ್ ಚುರುಕಾಗಿದೆ. ಸದಾಶಿವನಗರ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಮಂಡ್ಯ ಕೈ ಮುಖಂಡರ ಸಭೆ ನಡೆಸಿ, ಮನವೊಲಿ ಸುವ ಪ್ರಯತ್ನ ಮಾಡಿದ್ದಾರೆ. ಯಾರೆಲ್ಲ ಸುಮಲತಾ ಜತೆ ಗುರುತಿಸಿಕೊಂಡಿದ್ದಾರೆ ಎಂದು ಮಳವಳ್ಳಿ ಶಾಸಕ ಕೆ.ಅನ್ನದಾನಿ ಡಿಕೆಶಿಗೆ ವರದಿ ಒಪ್ಪಿಸಿದ್ದರು.

ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಹಾಸನ, ಮಂಡ್ಯ, ರಾಮನಗರ, ಮೈಸೂರು ಕಾರ್ಯಕರ್ತ ರಲ್ಲಿ ಗೊಂದಲ ಇದೆ. ಸಮಸ್ಯೆ ತಿಳಿ ಮಾಡಲು ನಾನು ಜವಾಬ್ದಾರಿ ತೆಗದುಕೊಂಡಿ ದ್ದೇನೆ. ದೇವೇಗೌಡರು, ಕುಮಾರಸ್ವಾಮಿ ಸೇಫ್ ಪಾಲಿಟಿಕ್ಸ್ ಯಾವತ್ತೂ ಮಾಡಿಲ್ಲ.

| ಡಿ.ಕೆ.ಶಿವಕುಮಾರ್ ಸಚಿವ

ಮಂಡ್ಯದಲ್ಲಿ ಸುಮಲತಾ ನಾಮಪತ್ರ ಸಲ್ಲಿಕೆ ವೇಳೆ ನಡೆಸಿದ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಬರೀಷ್ ಮೇಲಿನ ಅಭಿಮಾನಕ್ಕಾಗಿ ಪಾಲ್ಗೊಂಡಿದ್ದಾರೆ. ಅದಕ್ಕೂ ಪಕ್ಷಕ್ಕೂ ಸಂಬಂಧ ವಿಲ್ಲ. ಕೆಲವರು ಕಾಂಗ್ರೆಸ್ ಬಾವುಟ ಪ್ರದರ್ಶನ ಮಾಡಿರು ವುದು ತಿಳಿದುಬಂದಿದೆ. ವೈಯಕ್ತಿಕವಾಗಿ ಅಂಬರೀಷ್ ಪ್ರೀತಿಸುವ ಕಾರ್ಯ ಕರ್ತರು ಹಾಗೆ ಮಾಡಿರಬಹುದು.

| ಡಾ.ಜಿ.ಪರಮೇಶ್ವರ್ ಡಿಸಿಎಂ

ಬೆಂ.ಉತ್ತರಕ್ಕೆ ಮೈತ್ರಿ ಪರದಾಟ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಯಾರಾಗಬೇಕೆಂಬ ಬಗ್ಗೆ ಎರಡೂ ಪಕ್ಷದ ನಾಯಕರಲ್ಲಿ ಸ್ಪಷ್ಟತೆ ಮೂಡಿಲ್ಲ. ಮಹತ್ವದ ಬೆಳವಣಿಗೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಚಿವ ಕೃಷ್ಣ ಬೈರೇಗೌಡರ ಮನೆಗೆ ಆಗಮಿಸಿ ಕ್ಷೇತ್ರದ ಬಗ್ಗೆ ಚರ್ಚೆ ನಡೆಸಿದರು. ಈ ಕ್ಷೇತ್ರವನ್ನು ದೇವೇಗೌಡರೇ ಪ್ರತಿನಿಧಿಸುತ್ತಾರೋ ಅಥವಾ ಕಾಂಗ್ರೆಸ್​ಗೆ ಕ್ಷೇತ್ರ ಬಿಟ್ಟುಕೊಡಲಾಗುತ್ತದೋ ಎಂಬ ಬಗ್ಗೆ ಊಹಾಪೋಹ ಹರಿದಾಡಿತ್ತು. ಕಾಂಗ್ರೆಸ್​ಗೆ ಬಿಟ್ಟುಕೊಟ್ಟರೆ ಬಿ.ಎಲ್.ಶಂಕರ್ ಅಥವಾ ಕೃಷ್ಣ ಬೈರೇಗೌಡ ಕಣಕ್ಕಿಳಿಸಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು.

‘ತುಮಕೂರಿನಲ್ಲಿ ನಾನೇ ಸ್ಪರ್ಧಿಸಬೇಕೆಂದು ಎಲ್ಲರೂ ಹಿಂಸೆ ಕೊಡುತ್ತಿದ್ದಾರೆ. ಹಾಗೆ ಬೆಂಗಳೂರು ಉತ್ತರದಿಂದ ಕಣಕ್ಕಿಳಿವಂತೆಯೂ ಒತ್ತಡ ಇದೆ. ಅದನ್ನು ಕೃಷ್ಣ ಬೈರೇಗೌಡರಿಗೆ ಹೇಳಿದ್ದೇನೆ. ಕಾಂಗ್ರೆಸ್ ನಾಯಕರೊಂದಿಗೆ ಇನ್ನೊಮ್ಮೆ ಮಾತನಾಡಿ ಅಂತಿಮ ತೀರ್ಮಾನ ಮಾಡುತ್ತೇನೆ ಎಂದು ದೇವೇಗೌಡ ಹೇಳಿದರು. ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಒಡಂಬಡಿಕೆ ಪ್ರಕಾರ ಬೆಂಗಳೂರು ಉತ್ತರ ಜೆಡಿಎಸ್​ಗೆ ಕೊಟ್ಟಿದ್ದೇವೆ. ಮತ್ತೆ ಕಾಂಗ್ರೆಸ್ ಪಡೆದುಕೊಳ್ಳುವ ಪ್ರಸ್ತಾಪ ಇಲ್ಲ. ನಮ್ಮಲ್ಲಿ ಗುಂಪುಗಾರಿಕೆ, ಗೊಂದಲ, ಬೇರೆ ಆಲೋಚನೆ ಇಲ್ಲ ಎಂದು ಗೌಡರಿಗೆ ಮನವರಿಕೆ ಮಾಡಿದ್ದೇವೆ. ಇನ್ನೂ ಒಂದು ಸುತ್ತು ಮಾತುಕತೆ ನಡೆಸುತ್ತೇವೆ. ಅವರ ಅಂತಿಮ ನಿರ್ಧಾರದ ನಂತರ ಬೇರೆ ಮಾರ್ಗ ನೋಡಬೇಕಾಗುತ್ತದೆ ಎಂದರು. ನಾನು ಸ್ಪರ್ಧೆ ಮಾಡುವ ಪರಿಸ್ಥಿತಿ ಬಂದರೂ ಬರಬಹುದು, ಆದರೆ ನಾನಂತೂ ಸ್ಪರ್ಧೆಗೆ ಸಿದ್ಧ್ದಲ್ಲ. ಈಗಾಗಲೇ ಈ ವಿಷಯವನ್ನು ನಮ್ಮ ನಾಯಕರ ಗಮನಕ್ಕೂ ತಂದಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ಇಂದು ಪ್ರಜ್ವಲ್ ನಾಮಪತ್ರ ಸಲ್ಲಿಕೆ: ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಶುಕ್ರವಾರ (ಮಾ.22) ಮಧ್ಯಾಹ್ನ 12.05ರಿಂದ 12.45ರೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ಸುಮಲತಾ ಸಮಾವೇಶಕ್ಕೆ ಬಂದವರ ಪೈಕಿ ಮಂಡ್ಯ ಜಿಲ್ಲೆಯವರು ಕಡಿಮೆ. ಮೈಸೂರು, ಚನ್ನಪಟ್ಟಣ, ರಾಮನಗರದಿಂದ ಜನ ಕರೆಸಲಾಗಿದೆ. ಕಾಂಗ್ರೆಸ್​ನವರನ್ನು ಒಟ್ಟಾಗಿ ಕರೆದುಕೊಂಡು ಹೋಗ್ತೀವಿ. ಈಗಾಗಲೇ ಸುಮಲತಾ ಜತೆ ಗುರುತಿಸಿಕೊಂಡವರ ಜತೆ ಮಾತುಕತೆ ನಡೆಸಲಾಗಿದೆ. ಸುಮಲತಾಗೂ ಜನ ಇರಬಹುದು. ಅವರಿಗಿಂತ ಹತ್ತು ಪಟ್ಟು ಅಭಿಮಾನಿಗಳು ಕುಮಾರಸ್ವಾಮಿ ಅವರಿಗಿದ್ದಾರೆ.

| ಡಿ.ಸಿ.ತಮ್ಮಣ್ಣ ಸಾರಿಗೆ ಸಚಿವ

ತುಮಕೂರಿಗೆ ಬನ್ನಿ ಎಂದು ಗೌಡರಿಗೆ ದುಂಬಾಲು

ಬೆಂಗಳೂರು: ನೂರಾರು ಕಾರ್ಯಕರ್ತರೆದುರು ವಿನೀತರಾಗಿ ಕೈ ಮುಗಿದು ನಿಂತಿದ್ದ ದೇವೇಗೌಡರು.. ನೀವು ತುಮಕೂರಿಗೆ ಬರಬೇಕು, ನಿಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದೆಂದು ಉತ್ಸಾಹದಿಂದ ಹೇಳುತ್ತಿದ್ದ ಕಾರ್ಯಕರ್ತರು.. ಅರ್ಧ ತಾಸು ಮೌನವಾಗಿ ಕೈ ಮುಗಿದೇ ನಿಂತಿದ್ದ ಗೌಡರು, ಕೊನೆಗೆ ಹೇಳಿದ್ದು ಒಂದೇ ಮಾತು: ‘ನಿಮ್ಮನ್ನೆಲ್ಲ ನಿರಾಸೆ ಮಾಡಲ್ಲ’! ಹಲವು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಎಚ್.ಡಿ.ದೇವೇಗೌಡರ ಚುನಾವಣಾ ಸ್ಪರ್ಧೆ ವಿಚಾರ ಗುರುವಾರ ಕೂಡ ಇತ್ಯರ್ಥವಾಗದೆ ಉಳಿದಿದೆಯಾದರೂ, ಪದ್ಮನಾಭನಗರ ನಿವಾಸದ ಬಳಿ ಜಮಾಯಿಸಿದ್ದ ತುಮಕೂರಿನ ನೂರಾರು ಕಾರ್ಯಕರ್ತರೆದುರು ಮೊದಲ ಬಾರಿಗೆ ಸಕಾರಾತ್ಮಕವಾಗಿ ಮಾತನಾಡಿದರು. ಈ ಮೂಲಕ ದೇವೇಗೌಡರು ತುಮಕೂರಿನಿಂದಲೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಮಾ.22ರಂದು ದೆಹಲಿಯಲ್ಲಿ ಕಾಂಗ್ರೆಸ್ ಪಟ್ಟಿ ಹೊರ ಬೀಳುತ್ತಿದ್ದಂತೆಯೇ ಜೆಡಿಎಸ್ ಕೂಡ 8 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಿಂದ ರಾಹುಲ್ ಗಾಂಧಿ ಸ್ಪರ್ಧಿಸಲ್ಲ

ಮಾಗಡಿ(ರಾಮನಗರ): ರಾಜ್ಯದಿಂದ ರಾಹುಲ್ ಗಾಂಧಿ ಸ್ಪರ್ಧಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಕರ್ನಾಟಕದಿಂದ ಇಂದಿರಾಗಾಂಧಿ, ಸೋನಿಯಾಗಾಂಧಿ ಅವರು ರಾಜ್ಯದಿಂದ ಸ್ಪರ್ಧಿಸಿದ್ದರು. ಅದೇ ರೀತಿ ರಾಹುಲ್ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಕೇಳಿಕೊಂಡಿದ್ದೆವು. ಅದಕ್ಕೆ ಸಕಾರಾತ್ಮಕ ಉತ್ತರ ಬಂದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

- Advertisement -

Stay connected

278,507FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....