kalaburagi : ಕೋರ್ಟ್ ಗೆ ಹೋಗಲು ರೆಡಿಯಾಗುತ್ತಿದ್ದ ಹಿರಿಯ ನ್ಯಾಯಾಧೀಶರು ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಈ ಘಟನೆ, ಕಲಬುರಗಿ ಜಿಲ್ಲಾ ನ್ಯಾಯಲಯದಲ್ಲಿ ನಡೆದಿದೆ.
ಕಲಬುರಗಿ ಜಿಲ್ಲಾ 3ನೇ ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿಶ್ವನಾಥ್ ವಿ ಮೂಗತಿ (44) ಸಾವನ್ನಪ್ಪಿದ ದುರ್ದೈವಿ. ವಿಶ್ವನಾಥ್ ವಿ ಮೂಗತಿ ಅವರು ಕಲಬುರಗಿ ಜಿಲ್ಲಾ 3 ನೇ ಹಿರಿಯ ಶ್ರೇಣಿ ನ್ಯಾಯಾಧೀಶರಾಗಿದ್ದರು. ಕಳೆದ ವಾರವೇ ಕಲಬುರಗಿ ಕೋರ್ಟ್‌ಗೆ ವಿಶ್ವನಾಥ್ ಅವರು ವರ್ಗಾವಣೆಯಾಗಿದ್ದರು.
ಇಂದು ಕೋರ್ಟ್ ಹಾಲ್‌ಗೆ ಬರುವುದಕ್ಕಿಂತ ಮುಂಚೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಲಾಗಿದೆ. ಆದರೆ ಆಸ್ಪತ್ರೆ ಕರೆತರುವ ಮುನ್ನವೇ ನ್ಯಾಯಧೀಶರು ಕೊನೆ ಉಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.