ಕಲಬುರಗಿ: ರಾಜ್ಯ ಸರ್ಕಾರದಿಂದ ಕೂಡಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಸರು, ಉದ್ದು ಖರೀದಿ ಕೇಂದ್ರ ಆರಂಭಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್ ಆಗ್ರಹಿಸಿದ್ದಾರೆ.
ಪ್ರಸಕ್ತ ವರ್ಷ ಉತ್ತಮ ಮಳೆ ಆಗಿರುವುದರಿಂದ, ಎಲ್ಲೆಡೆ ಭರ್ಜರಿಯಾಗಿ ಹೆಸರು, ಉದ್ದು ಬೆಳೆಯಲಾಗಿದೆ. ಈಗಾಗಲೇ ಶೇ.50 ಹೆಸರು ರಾಶಿ ಪೂರ್ಣಗೊಂಡಿದೆ. ಎಕರೆಗೆ 4ರಿಂದ 5 ಕ್ವಿಂಟಾಲ್ ಇಳುವರಿ ಬರುತ್ತಿದ್ದು, ಆದರೆ ಸರ್ಕಾರ ಮಾತ್ರ ಇಲ್ಲಿವರೆಗೂ ಖರೀದಿ ಕೇಂದ್ರ ಆರಂಭಿಸಿಲ್ಲ. ಇದರಿಂದ ರೈತರು ಚಿಂತೆಯಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ದರ ಕುಸಿದಿದ್ದು, ರೈತರಿಗೆ ಏನು ಮಾಡಬೇಕು ಎಂಬುದು ತೋಚದಂತಾಗಿದೆ. ಕೇಂದ್ರ ಸರ್ಕಾರ ಹೆಸರು ಕಾಳಿನ ದರವನ್ನು ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ 8,682 ರೂ. ದರ ನಿಗದಿಪಡಿಸಿದೆ. ಉದ್ದಿನ ಕಾಳಿಗೆ 7,400 ರೂ. ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರ ಇದೇ ದರಕ್ಕೆ ಹೆಸರು ಮತ್ತು ಉದ್ದು ಖರೀದಿಸಿದರೆ ಬೆಳೆಗಾರರ ನೆರವಿಗೆ ಬಂದAತಾಗುತ್ತದೆ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.