Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಜಿಮ್ಸ್ ನಿಂದಲೇ ಸೇವೆ ಮುಂದುವರಿಸಲು ಆಗ್ರಹ

Thursday, 14.06.2018, 5:39 PM       No Comments

ಕಲಬುರಗಿ: ಸಿಬ್ಬಂದಿ ವಿರೋಧಿ ನೀತಿ ಅನುಸರಿಸುತ್ತಿರುವ ಜಿಮ್ಸ್ ನಿದರ್ೇಶಕರನ್ನು ವಗರ್ಾಯಿಸುವಂತೆ ಹಾಗೂ ಕೆಲ ತಿಂಗಳಿಂದ ಗುತ್ತಿಗೆ ಹಾಗೂ ಸ್ಟೈಫಂಡರಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನಸರ್್ ಹಾಗೂ ತರಬೇತಿ ನಸರ್್ಗಳ ಸೇವೆ ಜಿಮ್ಸ್ನಿಂದಲೇ ಮುಂದುವರಿಸುವಂತೆ ಆಗ್ರಹಿಸಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಹೈದರಾಬಾದ್ ಕನರ್ಾಟಕ ಶುಶ್ರೂಷಕರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಸದರ್ಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾಯಿಸಿದ ಸೇವೆಯಿಂದ ಬಿಡುಗಡೆಗೊಳ್ಳಲಿರುವ ಸಿಬ್ಬಂದಿ, ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ ತಮಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದರು.
ಆರಂಭದಿಂದ ಸೇವೆ ಸಲ್ಲಿಸುತ್ತಿದ್ದರೂ ಉಳಿದ ಸಿಬ್ಬಂದಿಗಿಂತ ಕಮ್ಮಿ ಸಂಬಳವಿದೆ. ಹೆಚ್ಚಿಸುವಂತೆ ಕೋರಿದರೆ ನಿದರ್ೇಶಕರು ತಮ್ಮೆಲ್ಲರನ್ನು ಹೊರಗುತ್ತಿಗೆ ಏಜೆನ್ಸಿ ಮೂಲಕ ಮರಳಿ ತೆಗೆದುಕೊಳ್ಳಲಾಗುವುದು. ವೇತನ ಹೆಚ್ಚಿಸಲ್ಲ ಎನ್ನುವ ಮೂಲಕ ಕಾಮರ್ಿಕ ವಿರೋಧಿ ನೀತಿ ಅನುಸುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಮ್ಸ್ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಿಂದಲೇ ವೇತನ ನೀಡಲಾಗುತ್ತಿದೆ. ಆದರೀಗ ಈಗ ಅವರ ಸೇವೆಯನ್ನು ಹೊರಗುತ್ತಿಗೆ ಮೂಲಕ ಬಳಸಿಕೊಳ್ಳಲು ಏಜೆನ್ಸಿಗೆ ನೀಡಲು ಜಿಮ್ಸ್ ಆಸ್ಪತ್ರೆ ಉಸ್ತುವಾರಿ ಸಮಿತಿ ಹಾಗೂ ಸಕರ್ಾರ ನಿರ್ಧರಿಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ತಮ್ಮನ್ನು ಸೇವೆಯಲ್ಲಿ ಮುಂದುವರಿಸಿ ಎಂದು ಕೋರಿದರೆ ಕಳೆದ 31ರಂದೇ ನಿಮ್ಮೆಲ್ಲರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದ ಎಂಬ ಪತ್ರ ತೋರಿಸಿದ್ದಾರೆ. ಆದರೆ ತಾವು ಬುಧವಾರವರೆಗೂ ಕೆಲಸ ನಿರ್ವಹಿಸಿದ್ದೇವೆ ಎಂದರು.
ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ, ಶುಶ್ರೂಷಕರ ಸಂಘದ ಉಪಾಧ್ಯಕ್ಷ ಶರಣಬಸಪ್ಪ ಹಾವನೂರ, ಕಾರ್ಯದಶರ್ಿ ಬಸವಣ್ಣ ಬಿಡಿಗಾರ, ಜಿಲ್ಲಾಧ್ಯಕ್ಷ ಸೂರ್ಯಕಾಂತ ಮಾಹೂರಕರ್, ಉಪಾಧ್ಯಕ್ಷ ಮಲ್ಲಿಕಾಜರ್ುನ ಮೈತ್ರಿ, ಮುಖಂಡರಾದ ನಟರಾಜ ಕಿರಣಗಿಕರ್, ಬಸಪ್ಪ ಜಾಡಿಗಾರ, ಶರಣಪ್ಪ ಹಾವನೂರ ಇತರರು ಪಾಲ್ಗೊಂಡಿದ್ದರು.

ಜಿಮ್ಸ್ ನಿಂದಲೇ ಸಂಬಳ ನೀಡಿಕೆ ಪದ್ಧತಿ ಮುಂದುವರಿಸಬೇಕು. ಕಾಮರ್ಿಕ ನಿಯಮ ಉಲ್ಲಂಘಿಸಿದರ ವಿರುದ್ಧ ಕ್ರಮ ಕೈಗೊಳ್ಳಬೇಕು, ಬೇರಾವ ಸಂಸ್ಥೆಯಲ್ಲೂ ಇರದ ಹೊರಗುತ್ತಿಗೆ ಪದ್ಧತಿ ಇಲ್ಲೇಕೆ ಪರಿಚಯಿಸಲಾಗುತ್ತಿದೆ? ವಲಯ 1ರಲ್ಲೇ ಕಲಬುರಗಿ ಬರುವುದರಿಂದ ಕೆಲಸಕ್ಕೆ ತಕ್ಕಂತೆ ಸಮಾನ ವೇತನ ನೀಡಬೇಕು.
| ಪ್ರತಿಭಟನಾ ನಿರತರು

Leave a Reply

Your email address will not be published. Required fields are marked *

Back To Top