ಕಲಬುರಗಿ ಜಿಲ್ಲೆಯ ಜನರಲ್ಲಿ ಕಾಡುತಿದೆ ದಿ. ಧರ್ಮಸಿಂಗ್ ಕೊರತೆ

ಕಲಬುರಗಿ: ಸತತವಾಗಿ ಎರಡನೇ ಬಾರಿ ಆಯ್ಕೆಯಾಗಿರುವ ತಮಗೂ ಸಚಿವ ಸ್ಥಾನ ಸಿಗಬೇಕಾಗಿತ್ತು. ಈ ನಿಟ್ಟಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಯತ್ನ ಹೈದರಾಬಾದ್-ಕನರ್ಾಟಕದ ಕಾಂಗ್ರೆಸ್ ಮುಖಂಡರಿಂದ ನಡೆದಿಲ್ಲ ಎನ್ನುವ ಕೊರಗು ನನ್ನನ್ನು ಕಾಡುತ್ತಿದೆ. ಈಗ ನನಗೆ ನನ್ನ ತಂದೆ ದಿ. ಎನ್. ಧರ್ಮಸಿಂಗ್ ಅವರ ನೆನಪು ಕಾಡುತ್ತಿದೆ.

ಹೀಗೆ ಭಾವುಕರಾಗಿ ತಮ್ಮ ಅಭಿಪ್ರಾಯಗಳನ್ನು ವಿಜಯವಾಣಿ ಜತೆ ಹಂಚಿಕೊಂಡವರು ಜೇವಗರ್ಿ ಶಾಸಕ ಡಾ. ಅಜಯಸಿಂಗ್. ಶಾಸಕರಾದ ನಂತರ ಬೆಂಗಳೂರು ಮತ್ತು ದೆಹಲಿಗಳಲ್ಲಿ ಬೀಡು ಬಿಟ್ಟಿದ್ದ ಅವರು, ಸೋಮವಾರ ನಗರಕ್ಕೆ ಆಗಮಿಸಿದ ನಂತರ ತಮ್ಮ ಬೆಂಬಲಿಗರ ಜತೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚಚರ್ೆ ನಡೆಸಿದ ಸಂದರ್ಭದಲ್ಲಿಯೇ ಒಂದಿಷ್ಟು ಸಮಯ ಪತ್ರಿಕೆ ಜತೆ ಮಾತನಾಡಿದರು.

ನನಗೂ ಮಂತ್ರಿ ಸ್ಥಾನ ಸಿಗಬೇಕಾಗಿತ್ತು. ಅದು ಸಿಕ್ಕಿಲ್ಲ ಎನ್ನುವ ಕೊರಗು ಎಲ್ಲೋ ಒಂದು ಮೂಲೆಯಲ್ಲಿದೆ. ಹಾಗಂತ ನಾನು ಯಾವುದೇ ಭಿನ್ನಮತಿಯ ಚಟುವಟಿಕೆ ನಡೆಸುವುದಿಲ್ಲ. ನಡೆಸುವವರ ಜತೆ ಕೈ ಜೋಡಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು. ಇದುವರೆಗೆ ರಾಜ್ಯದಲ್ಲಿ ಒಟ್ಟು ಹನ್ನೊಂದು ಬಾರಿ ವಿಧಾನಸಭೆಗೆ ಚುನಾವಣೆ ನಡೆದಿದೆ. ಜೇವಗರ್ಿ ಕ್ಷೇತ್ರದಲ್ಲಿ ಎಂಟು ಬಾರಿ ತಮ್ಮ ತಂದೆ ದಿ. ಧರ್ಮಸಿಂಗ್ ಆಯ್ಕೆಯಾಗಿದ್ದಾರೆ. ಇನ್ನೆರಡು ಬಾರಿ ನಾನು ಆಯ್ಕೆಯಾಗಿದ್ದೇನೆ. ಒಂದು ಬಾರಿ ನಮ್ಮ ತಂದೆಗೆ ಸೋಲಾಗಿದೆ. ದಿ. ವೀರೇಂದ್ರ ಪಾಟೀಲ್ರ ಕ್ಯಾಬಿನೆಟ್ ಹೊರತುಪಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸಕರ್ಾರವಿದ್ದಾಗಲೆಲ್ಲ ತಮ್ಮ ತಂದೆ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾಜರ್ುನ ಖಗರ್ೆಯವರು ಮಂತ್ರಿಗಳಾಗಿರುತ್ತಿದ್ದರು. ಪ್ರತಿ ಸಲವೂ ಕಲಬುರಗಿ ಜಿಲ್ಲೆಗೆ ಕನಿಷ್ಠ ಎರಡು ಸ್ಥಾನಗಳು ಸಚಿವ ಸಂಪುಟದಲ್ಲಿ ಸಿಕ್ಕಿವೆ. ಈ ಸಲವೂ ಅದೇ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಎಲ್ಲಿ ತಪ್ಪಿತು ಎನ್ನುವುದು ಅರ್ಥವಾಗುತ್ತಿಲ್ಲ ಎಂದರು.

ತಾವೂ ಸಹ ಈ ಸಂಪುಟದಲ್ಲಿ ಸಚಿವರಾಗಬಹುದು ಎಂದು ಜಿಲ್ಲೆಯ ಜನತೆ ನಿರೀಕ್ಷಿಸಿದ್ದರು. ಅವರ ನಿರೀಕ್ಷೆ ನಿರಾಶೆ ಮೂಡಿಸಿದೆ. ನನಗೆ ಮತ್ತು ಕಲಬುರಗಿ ಜಿಲ್ಲೆಯ ಮಟ್ಟಿಗೆ ಖಗರ್ೆಯವರೇ ಇಂದಿಗೂ ನಾಯಕರು. ಅವರು ನನ್ನನ್ನೂ ಮಂತ್ರಿಯನ್ನಾಗಿ ಮಾಡುವಂತೆ ವರಿಷ್ಠರ ಮೇಲೆ ಇನ್ನಷ್ಟು ಒತ್ತಡ ಹೇರಬಹುದಾಗಿತ್ತು ಎಂದು ಜಿಲ್ಲೆಯ ಜನತೆ ಹೇಳುತ್ತಿದ್ದಾರೆ. ಇನ್ನೂ ಆರು ಸ್ಥಾನಗಳನ್ನು ತುಂಬಬೇಕಾಗಿರುವುದರಿಂದ ನನ್ನ ಪರ ಅವರು ಒತ್ತಡ ಹಾಕೇ ಹಾಕುತ್ತಾರೆ ಎಂದರು.

ನಿರಂತರ ಐವತ್ತು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ನಾನಾ ಖಾತೆಗಳ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ನನ್ನ ತಂದೆ ಎನ್. ಧರ್ಮಸಿಂಗ್ ಅವರ ನೆರನನೆಪು ನನಗೆ ಈಗಿ ಕಾಡುತ್ತಿದೆ. ಪಕ್ಷದ ಹೈಕಮಾಂಡ್, ಪ್ರಭಾವಿ ನಾಯಕರೊಂದಿಗೆ ಉತ್ತಮ ಒಡನಾಟ, ಪ್ರಭಾವ ಬೆಳೆಸಿಕೊಂಡಿದ್ದ ಅವರು ಈ ಸಂದರ್ಭದಲ್ಲಿ ಇದ್ದಿದ್ದರೆ ಪರಿಸ್ಥಿತಿಯೇ ಬೇರೆ ಇರುತ್ತಿತ್ತು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು. ಧರ್ಮಸಿಂಗ್ ಅವರು ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಕಾಂಗ್ರೆಸ್ ಬಿಟ್ಟಿಲ್ಲ. ಪಕ್ಷದ ಸಂಘಟನೆಯಲ್ಲಿಯೇ ತೊಡಗಿದ್ದರು ಎನ್ನುವುದನ್ನು ಜನತೆ ಮರೆತಿಲ್ಲವೆಂದು ಅಜಯಸಿಂಗ್ ತಿಳಿಸಿದರು.

Leave a Reply

Your email address will not be published. Required fields are marked *