ಕಾಂಗ್ರೆಸ್​ಗೆ ಅಧಿಕಾರ ಕೊಟ್ಟರೆ ಜಿಎಸ್​ಟಿ ಬದಲು ಸರಳ ತೆರಿಗೆ

Latest News

ಅಲೆ ತಡೆಗೋಡೆ ಕಾಮಗಾರಿಗೆ ವಿರೋಧ

ಕಾರವಾರ: ತಖೋಲ್ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆಗಾಗಿ ಟ್ಯಾಗೋರ್ ಕಡಲ ತೀರದಿಂದ ಅಲೆ ತಡೆಗೋಡೆ ಕಾಮಗಾರಿ ಆರಂಭವಾಗಿದೆ. ಅದಕ್ಕೆ ಮೀನುಗಾರರು ವಿರೋಧ...

ಪ್ರೇಮಲೋಕ 2ರಲ್ಲಿ ಕ್ರೇಜಿಸ್ಟಾರ್ ಸನ್ಸ್!

ಬೆಂಗಳೂರು: 1987ರಲ್ಲಿ ತೆರೆಕಂಡ ಮ್ಯೂಸಿಕಲ್ ಹಿಟ್ ‘ಪ್ರೇಮಲೋಕ’ ಸಿನಿಮಾ ಬಗ್ಗೆ ಹೆಚ್ಚೇನೂ ಹೇಳುವ ಅವಶ್ಯಕತೆ ಇಲ್ಲ. ಆ ಸಿನಿಮಾ ನಿರ್ವಿುಸಿದ ದಾಖಲೆ ಒಂದೆರಡಲ್ಲ....

ರಫೇಲ್ ರಗಳೆ ಅಂತ್ಯ

ರಫೇಲ್ ಪ್ರಕರಣದಲ್ಲಿ ಸರ್ಕಾರಕ್ಕೆ ನೀಡಿದ್ದ ಕ್ಲೀನ್​ಚಿಟ್ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಈ ಬಗ್ಗೆ ಯಾವುದೇ...

ಅನನ್ಯ ಸಾಂಸ್ಕೃತಿಕ ಪ್ರಜ್ಞೆಯ ಕನಕದಾಸ

ಕನಕದಾಸರು 16ನೇ ಶತಮಾನದ ಕರ್ನಾಟಕದಲ್ಲಿ ಆಗಿ ಹೋದ ಭಕ್ತಕವಿ. ಕೀರ್ತನೆ, ನಳಚರಿತೆ, ರಾಮಧಾನ್ಯ ಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಹಾಗೂ ಅನೇಕ...

ಒಳ್ಳೆಯದನ್ನು ಮಾಡುವುದೇ ಧರ್ಮದ ಸರ್ವಸ್ವ

ಪಶ್ಚಿಮದ ಭೋಗಭೂಮಿಯಲ್ಲಿ ಮೈಕೊಡವಿ ನಿಂತ ಈ ಪೂರ್ವರಾಷ್ಟ್ರದ ತ್ಯಾಗಮೂರ್ತಿ ಅವರುಗಳಿಗೆ ತ್ಯಾಗ-ಯೋಗವನ್ನು ಬೋಧಿಸಿದರು. ಅಲ್ಲದೆ ಅಲ್ಲಿ ತನ್ನ ಮಾತೃಭೂಮಿಗಾಗಿ ವೈಯಕ್ತಿಕ ಜೀವನವನ್ನೇ ಸಾರ್ಥಕವಾಗಿ...

ಕಲಬುರಗಿ: ದೇಶದ ಸ್ವಾತಂತ್ರ್ಯ ಸೇರಿ ಸರ್ವಾಂಗೀಣ ವಿಕಾಸದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್​ಗೆ ಅಧಿಕಾರ ನೀಡಿದರೆ ಜನಸಾಮಾನ್ಯರಿಗೆ ಹೊರೆಯಾಗಿರುವ ಜಿಎಸ್​ಟಿ ತೆಗೆದುಹಾಕುವ ಮೂಲಕ ಸರಳ ರೀತಿಯ ತೆರಿಗೆ ಜಾರಿಗೆ ತರುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೂತನ ವಿದ್ಯಾಲಯ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ ಸೋಮವಾರ ಆಯೋಜಿಸಿದ್ದ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಜಿಎಸ್​ಟಿ ಅಂದ್ರೆ ‘ಗಬ್ಬರ್ ಸಿಂಗ್ ಟ್ಯಾಕ್ಸ್’. ಏಕರೂಪದ ಜಿಎಸ್​ಟಿ ಜಾರಿ ಮಾಡುವುದಾಗಿ ಹೇಳಿ ಐದಾರು ಬಗೆಯ ತೆರಿಗೆ ತಂದು ಸಣ್ಣಪುಟ್ಟ ವ್ಯಾಪಾರಿಗಳನ್ನು ಬೀದಿಗೆ ತರಲಾಗಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದೇ ಬಗೆಯ ಟ್ಯಾಕ್ಸ್ ಪದ್ಧತಿ ಜಾರಿಗೆ ತರುವುದಾಗಿ ಭರವಸೆ ನೀಡಿದರು.

ಕರ್ನಾಟಕದ ಎಲ್ಲ ರೈತರ ಸಾಲಮನ್ನಾ ಮಾಡಿದ್ದೇವೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಮೋದಿ ಸರ್ಕಾರ ರೈತರ ಸಾಲಮನ್ನಾಕ್ಕೂ ಮನಸ್ಸು ಮಾಡುತ್ತಿಲ್ಲ ಎಂದು ದೂರಿದರು.

ನೇರ ಹಣ ಜಮೆ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸರಾಸರಿ ತಲಾ ಆದಾಯಕ್ಕಿಂತ ಕೆಳಗಿರುವ ಜನರ ಖಾತೆಗೆ ನೇರ ಹಣ ಜಮೆ ಮಾಡಲಾಗುವುದು. ಕೃಷಿಕರು ನೆಮ್ಮದಿ ಆಗಿರುವಂತೆ ನೋಡಿಕೊಳ್ಳಲಾಗುವುದು ಎಂದ ರಾಹುಲ್, ಕೃಷಿಕ ಮತ್ತು ಕಾರ್ವಿುಕರು ಸುಖವಾಗಿರುವಂತೆ ಮಾಡುತ್ತೇವೆ. ಮೋದಿ ಹೋದಲ್ಲೆಲ್ಲ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳುತ್ತಾರೆ. ಆದರೆ, ಯಾರಿಗಾದರೂ ಉದ್ಯೋಗ ಸಿಕ್ಕಿರುವ ಉದಾಹರಣೆ ಇದೆಯಾ ಎಂದು ಪ್ರಶ್ನಿಸಿದರು.

ಶಿಕ್ಷಣ-ಚಿಕಿತ್ಸೆ ಉಚಿತ

ಜಮ್ಮು-ಕಾಶ್ಮೀರ ಅಂಬಾನಿ ಪಾಲಾಗಲು ಬಿಡಲ್ಲ. 2019ರಲ್ಲಿ ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ ನಿರ್ವಿುಸುವುದು. ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಣ ನೀಡಲಿದೆ. ಬಡ ಮತ್ತು ಕಾರ್ವಿುಕ ವರ್ಗಕ್ಕೆ ಎಲ್​ಕೆಜಿ ಟು ಯುನಿವರ್ಸಿಟಿ ಶಿಕ್ಷಣ ಹಾಗೂ ಚಿಕಿತ್ಸೆ ಉಚಿತವಾಗಿ ಸಿಗುವಂತೆ ಮಾಡಲಾಗುವುದು. ಮೋದಿ ಭಾರತದ ಸಂವಿಧಾನ ಬದಲಿಸಲು ಹೊರಟಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯಾಧೀಶರು ಮಾಧ್ಯಮಗಳ ಮುಂದೆ ಬಂದು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ. ಇಂಥ ಪರಿಸ್ಥಿತಿ ದೇಶದಲ್ಲಿ ಎಂದೂ ಬಂದಿರಲಿಲ್ಲ ಎಂದು ರಾಹುಲ್ ಆರೋಪಿಸಿದರು.

ಮೋದಿ… ಘೋಷಣೆ!

ಸಂವಾದ ನಡೆಯುವ ಹೊರ ಆವರಣದಲ್ಲಿ ಕೆಲ ಐಟಿ ಉದ್ಯೋಗಿಗಳು ಪ್ಲಕಾರ್ಡ್​ಗಳನ್ನು ಹಿಡಿದು ಮೋದಿ ಮೋದಿ… ಘೋಷಣೆ ಕೂಗುತ್ತಿದ್ದರು. ಒಂದು ಹಂತದಲ್ಲಿ ಪೊಲೀಸರು ಲಾಟಿ ಬೀಸಬೇಕಾಯಿತು. ಕಾಂಗ್ರೆಸ್ ಕಾರ್ಯಕರ್ತರೂ ಹರಿಹಾಯ್ದರು.

ನನ್ನ ಸೋಲಿಸಲಾಗಲ್ಲವೆಂದ ಖರ್ಗೆ…

ದಿಲ್ಲಿಯಿಂದ ಗಲ್ಲಿವರೆಗೆ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಬಾರಿ ನನ್ನನ್ನು ಸೋಲಿಸಲು ಹುನ್ನಾರ ನಡೆದಿದೆ. ಜನರ ಆಶೀರ್ವಾದ ಇರೋವರೆಗೂ ಯಾರೂ ನನ್ನನ್ನು ಸೋಲಿಸಲು ಆಗೋದಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಗುಡುಗಿದರು.

ಸುಮಲತಾ ಪ್ರವೇಶಕ್ಕೆ ಖುಷಿ

ಬೆಂಗಳೂರು: ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ಕಸಿವಿಸಿ ಹೊಂದಿರುವ ಕಾಂಗ್ರೆಸ್​ನ ನಾಯಕರಿಗೆ ಸುಮಲತಾ ನಡೆ ಖುಷಿಕೊಟ್ಟಿದೆ. ಪಕ್ಷದ ವೇದಿಕೆಯಲ್ಲಿ ಸುಮಲತಾ ತೀರ್ವನದ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆದಿವೆ. ಪಕ್ಷದ ಎರಡು ಮತ್ತು ಮೂರನೇ ಹಂತದ ನಾಯಕರಿಗಂತೂ ಮಂಡ್ಯದಲ್ಲಿ ಜೆಡಿಎಸ್ ಕಟ್ಟಿಹಾಕುವ ವಾತಾವರಣ ನಿರ್ವಣವಾಗುತ್ತಿರುವುದು ಒಳಗೊಳಗೇ ಸಮಾಧಾನ ತಂದಿದೆ. ಮೌನಕ್ಕೆ ಶರಣಾಗಿದ್ದ ಹಾಸನ, ಮಂಡ್ಯದ ಕಾಂಗ್ರೆಸ್ ಘಟಕಗಳಿಗೆ ಈಗ ಸುಮಲತಾ ಪ್ರವೇಶ ಎಲ್ಲಿಲ್ಲದ ಉತ್ಸಾಹ ತಂದಿದೆ.

ರಾಜ್ಯದಿಂದಲೇ ಸ್ಪರ್ಧಿಸಲು ಪತ್ರ

ಬೆಂಗಳೂರು: ಕರ್ನಾಟಕದಿಂದಲೇ ಸ್ಪರ್ಧಿಸುವಂತೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೆಪಿಸಿಸಿ ಒತ್ತಾಯಿಸಿದೆ. ಈ ಸಂಬಂಧ ಪತ್ರ ಮುಖೇನ ಮನವಿ ಸಲ್ಲಿಸಿರುವ ದಿನೇಶ್ ಗುಂಡೂರಾವ್, ಪಕ್ಷಕ್ಕೆ ಸಮಸ್ಯೆ ಆದಾಗಲೆಲ್ಲ ಕರ್ನಾಟಕ ಕೈ ಹಿಡಿದಿದೆ. ನಿಮ್ಮ ಅಜ್ಜಿ ಇಂದಿರಾಗಾಂಧಿ, ತಾಯಿ ಸೋನಿಯಾ ಗಾಂಧಿ ಅವರನ್ನು ರಾಜ್ಯ ಆರಿಸಿ ಕಳಿಸಿದೆ. ದೇಶದ ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ಪಕ್ಷ ಚುನಾವಣೆಯಲ್ಲಿ ಹೊರಹೊಮ್ಮಬೇಕಾಗಿದೆ ಎಂದು ವಿವರಿಸಿದ್ದಾರೆ. ನೀವು ಅಭ್ಯರ್ಥಿಯಾಗುವುದರಿಂದ ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಹುಮ್ಮಸ್ಸುಕೊಟ್ಟಂತಾಗುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಪಿಎಂ, ಅಂಬಾನಿ ಜೈಲಿಗೆ ಹೋಗಬೇಕು

ಬೆಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿ ತನಿಖೆ ನಡೆದರೆ ಉದ್ಯಮಿ ಅಂಬಾನಿ, ಪ್ರಧಾನಿ ನರೇಂದ್ರ ಮೋದಿ ಜೈಲು ಸೇರಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಮಾನ್ಯತಾ ಟೆಕ್​ಪಾರ್ಕ್​ನ ಆಂಪಿಥಿಯೇ ಟರ್​ನಲ್ಲಿ ನಡೆದ ನವೋದ್ಯಮಿಗಳ ಜತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ರಫೇಲ್ ಗುತ್ತಿಗೆಯಲ್ಲಿ ಅವ್ಯವಹಾರವಾಗಿದೆ. ತನಿಖೆ ನಡೆಸಬೇಕೆಂಬ ನಮ್ಮ ಒತ್ತಾಯಕ್ಕೆ ಮನ್ನಣೆ ನೀಡಲಿಲ್ಲ ಎಂದು ಆರೋಪಿಸಿದರು.

ಸಂವಾದದದಲ್ಲಿ ಪ್ರಧಾನಿಯನ್ನು ಚೌಕಿದಾರ್ ಚೋರ್ ಹೈ ಎಂದು ಏಕೆ ಕರೆಯಲಾಗುತ್ತದೆ ಎಂಬ ಪ್ರಶ್ನೆಗೆ ರಫೇಲ್ ಗುತ್ತಿಗೆ ವಿಚಾರ ಪ್ರಸ್ತಾಪಿಸಿದ ಅವರು, ಯುಪಿಎ ಸರ್ಕಾರ 8 ವರ್ಷ ಇದೇ ವಿಚಾರದಲ್ಲಿ ಸಮಾಲೋಚಿಸಿತ್ತು. ನಮ್ಮ ಒಪ್ಪಂದಕ್ಕೂ ಮೋದಿ ಸರ್ಕಾರದ ಒಪ್ಪಂದಕ್ಕೂ ವ್ಯತ್ಯಾಸ ಇದೆ. ರಕ್ಷಣಾ ಸಚಿವರ ಗಮನಕ್ಕೆ ಬಾರದಂತೆ ಮೋದಿಯವರೇ ಅಂಬಾನಿ ಜತೆ ಫ್ರಾನ್ಸ್​ಗೆ ತೆರಳಿ ಸಮಾಲೋಚನೆ ಮಾಡಿ ಹೆಚ್ಚು ಹಣಕ್ಕೆ ಒಪ್ಪಂದ ಮಾಡಿಕೊಂಡರು. ಸಂಸತ್ ಅಧಿವೇಶನದಲ್ಲಿ ನಾನು ಪ್ರಶ್ನೆ ಮಾಡಿದರೆ ಉತ್ತರ ನೀಡಲಿಲ್ಲ ಎಂದರು.

ಈ ವಿಚಾರವಾಗಿ ಯುವಕನೊಬ್ಬ ಪ್ರಶ್ನೆ ಎತ್ತಿದಾಗ, ಪೂರ್ಣ ಉತ್ತರಿಸದೆ ಅದು ಹಾಗಲ್ಲ ಎಂದು ಜಾರಿಕೊಂಡು ವಿಷಯಾಂತರ ಮಾಡಿದರು. ಬ್ಯಾಂಕಿಂಗ್ ವ್ಯವಸ್ಥೆ, ಜಿಎಸ್​ಟಿ ಬಗ್ಗೆಯ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಇಂದು ಬ್ಯಾಂಕುಗಳು ಕೆಲವೇ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡವ ವಾತಾವರಣ ನಿರ್ವಣವಾಗಿದೆ. ಜಿಎಸ್​ಟಿ ಎಂದರೆ ಪ್ರಧಾನಿ, ಹಣಕಾಸು ಸಚಿವರು ಒಂದು ದಿನ ಏಕಾಏಕಿ ಉದ್ಘಾಟನೆ ಮಾಡಿ ಜಾರಿಗೊಳಿಸುವುದಲ್ಲ. ಈಗ ಜಾರಿಯಾಗಿರುವ ಜಿಎಸ್​ಟಿಗೂ ನಮ್ಮ ಕಲ್ಪನೆಗೂ ವ್ಯತ್ಯಾಗಳಿವೆ. ಒಂದೇ ರೀತಿ ಮತ್ತು ಸರಳೀಕೃತ ತೆರಿಗೆ ಪದ್ಧತಿ ತರಬೇಕು. ನಮ್ಮ ಸರ್ಕಾರ ಅದನ್ನು ಜಾರಿ ಮಾಡುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಸಂವಾದದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್ ನಾಯಕರಿಂದ ಅಂತರಿಕ್ಷದಲ್ಲಿ ಚರ್ಚೆ

ಬೆಂಗಳೂರು: ದೇಶಾದ್ಯಂತ ಪಕ್ಷದಿಂದ ಆರಿಸಿ ಬಂದ ಸಂಸದರಿಗೆ ಪುನಃ ಕಣಕ್ಕಿಳಿಯಲು ಅವಕಾಶ ನೀಡಲಾಗಿದೆ. ಆದರೆ, ಮುದ್ದುಹನುಮೇಗೌಡರಿಗೆ ಅವಕಾಶ ನೀಡಿರುವುದು ಪಕ್ಷದೊಳಗೆ ವಿರೋಧಾಭಾಸಕ್ಕೆ ಕಾರಣವಾಗಿದೆ.

ಇದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸೋಮವಾರ ಕಲಬುರಗಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸುವಾಗ ಅನೌಪಚಾರಿಕ ಸಭೆ ನಡೆಸಿ, ರಾಜ್ಯದ ರಾಜಕೀಯ ಬೆಳವಣಿಗೆ, ಸೀಟು ಹಂಚಿಕೆ, ಗೊಂದಲಗಳ ಕುರಿತಂತೆ ಚರ್ಚೆ ನಡೆಸಿ, ಸಮಸ್ಯೆಯಾಗದಂತೆ ನಮ್ಮ ಮುಖಂಡರನ್ನು ಕರೆದು ಮಾತನಾಡಲು ಸಲಹೆ ನೀಡಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರಿಗೆ ಪ್ರತ್ಯೇಕವಾಗಿ ಸಲಹೆ ಕೊಟ್ಟಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರ ನಾಯಕರು ಈ ವೇಳೆ ಜತೆಗಿದ್ದರು. ತುಮಕೂರು ಲೋಕಸಭಾ ಕ್ಷೇತ್ರವನ್ನು ಪುನಃ ಪಡೆಯುವ ಬಗ್ಗೆ ಮಾತುಕತೆ ನಡೆಸಿ. ಆದರೆ, ಬೇರೆ ಕ್ಷೇತ್ರವನ್ನು ಬಿಟ್ಟುಕೊಡುವ ಬಗ್ಗೆ ಇರುವ ಅವಕಾಶವನ್ನು ನೋಡಿಕೊಂಡು ರ್ಚಚಿಸಿ ಎಂದು ರಾಹುಲ್ ಸೂಚನೆ ನೀಡಿದ್ದಾರೆ.

ಆಯ್ಕೆ ಮುಂದಕ್ಕೆ: ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಘೋಷಣೆ ಸಂಬಂಧ ಮಂಗಳವಾರ ನಡೆಯಬೇಕಿದ್ದ ಕಾಂಗ್ರೆಸ್ ಚುನಾವಣೆ ಸಮಿತಿ ಸಭೆ ಮೂರು ದಿನ ಮುಂದಕ್ಕೆ ಹೋಗಿದೆ. ಪೂರ್ವ ನಿಗದಿಯಂತೆ ಮಾರ್ಚ್ 16ರಂದು ಸಭೆ ನಡೆಯಬೇಕಿತ್ತು. ಕಾರಣಾಂತರಗಳಿಂದ 19ಕ್ಕೆ ಪುನರ್ ನಿಗದಿಯಾಗಿತ್ತು. ಈಗ ಮತ್ತೆ ಮುಂದೂಡಲ್ಪಟ್ಟಿದೆ.

ತುಮಕೂರು ಕೈತಪ್ಪಿದ್ದಕ್ಕೆ ಅಸಮಾಧಾನವಾಗಿದ್ದು ನಿಜ

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್​ನಿಂದ ವಾಪಸ್ ಪಡೆಯುವ ಸಂಬಂಧ ನಮ್ಮ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಡಾ. ಜಿ.ಪರಮೇಶ್ವರ ಹೇಳಿದರು.

ರಾಜ್ಯದ 10 ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದರಿದ್ದು, ಈ ಕ್ಷೇತ್ರಗಳ ಅಭ್ಯರ್ಥಿ ಬದಲಾವಣೆ ಬೇಡ ಎನ್ನಲಾಗಿತ್ತು. ಆದರೆ, ಅಂತಿಮವಾಗಿ ತುಮಕೂರು ಕ್ಷೇತ್ರ ಬಿಟ್ಟುಕೊಟ್ಟಾಗ ಆತಂಕ, ಅಸಮಾಧಾನ ಆಗಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಪರಿಸ್ಥಿತಿ ಇದೆ. ಇದನ್ನು ವರಿಷ್ಠ ಗಮನಕ್ಕೆ ತಂದಿದ್ದೇನೆ ಎಂದು ಸುದ್ದಿಗಾರರಿಗೆ ವಿವರಿಸಿದರು. ಜೆಡಿಎಸ್ ವರಿಷ್ಠ ದೇವೇಗೌಡ, ಕುಮಾರಸ್ವಾಮಿ ಅವರಲ್ಲಿಯೂ ಮನವಿ ಮಾಡಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತೀರ್ಮಾನ ನೋಡಬೇಕು. ದೇವೇಗೌಡರೇ ಕಣಕ್ಕಿಳಿದರೆ ಸ್ವಾಗತಾರ್ಹ ಎಂದರು.

ಕ್ಷೇತ್ರ ಹಂಚಿಕೆಯಲ್ಲಿ ಪರಮೇಶ್ವರ್ ಪ್ರಶ್ನೆ ಬರಲ್ಲ. ಮೈತ್ರಿ ಮುಂದುವರಿಯಬೇಕು, ಹೊಂದಾಣಿಕೆಯಲ್ಲಿ ಪ್ರಾಮಾಣಿಕತೆ ತೋರಿದರೆ ಗೆಲ್ಲಲು ಸಾಧ್ಯ. ಸುಲಭವಾಗಿ ಗೆಲ್ಲುವ ಸೀಟುಗಳನ್ನು ಬುದ್ಧಿವಂತಿಕೆಯಲ್ಲಿ ಹಂಚಿಕೊಳ್ಳಬೇಕು ಎಂದು ತಮ್ಮದೇ ಪಕ್ಷದ ನಾಯಕರನ್ನು ಪರೋಕ್ಷವಾಗಿ ಕುಟುಕಿದರು.

14 ಕ್ಷೇತ್ರದಲ್ಲಿ ಇಂದಿನಿಂದ ನಾಮಪತ್ರ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಚುನಾವಣೆಯ ಮೊದಲ ಹಂತದ 14 ಕ್ಷೇತ್ರಗಳಿಗೆ ಮಂಗಳವಾರ ಅಧಿಸೂಚನೆ ಪ್ರಕಟ ಆಗಲಿದೆ. ಏ.18ರಂದು ನಡೆಯುವ ಚುನಾವಣೆಗೆ ಮಾ.19ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಗೊಳ್ಳಲಿದ್ದು, ಮಾ.26 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಶುಭ ಮಹೂರ್ತವುಳ್ಳ ದಿನಗಳಂದು ನಾಮಪತ್ರ ಸಲ್ಲಿಕೆ ಭರ್ಜರಿಯಾಗಿರುತ್ತದೆ. ಮೊದಲ ಹಂತದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂ. ಕೇಂದ್ರ, ಬೆಂ. ಉತ್ತರ, ಬೆಂ. ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು, ಮಂಡ್ಯ, ಹಾಸನ, ಮೈಸೂರು- ಕೊಡಗು, ಉಡುಪಿ- ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದೆ.

# ಅಧಿಸೂಚನೆ ಪ್ರಕಟ: ಮಾ.19

# ನಾಮನಿರ್ದೇಶನಕ್ಕೆ ಕಡೇ ದಿನ: ಮಾ.26

# ನಾಮಪತ್ರ ಪರಿಶೀಲನೆ: ಮಾ.27

# ನಾಮನಿರ್ದೇಶನ ಹಿಂಪಡೆಯಲು ಕಡೇ ದಿನ: ಮಾ.29

# ಮತದಾನದ: ಏ.18

# ಮತ ಎಣಿಕೆ: ಮೇ 23

- Advertisement -

Stay connected

278,469FansLike
563FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...