ನೊಂದ ಮನ ಸಂತೈಸುವ ಸಂಗೀತ

ವಿಜಯವಾಣಿ ಸುದ್ದಿಜಾಲ ಕಕ್ಕೇರಾ
ಸಂಸಾರದ ಜಂಜಾಟದಿಂದ ನೊಂದಿರುವ ಮನಸ್ಸನ್ನು ಸಂತೈಸುವ ಶಕ್ತಿ ಸಂಗೀತಕ್ಕಿದೆ ಎಂದು ಸಗರನಾಡಿನ ಖ್ಯಾತ ಗಾಯಕ ಬಸವರಾಜ ಭಂಟನೂರ ಹೇಳಿದರು.
ಪಟ್ಟಣದ ಸೋಮನಾಥ ದೇವರ ಜಾತ್ರೆ ನಿಮಿತ್ತ ದೇವಾಲಯದ ಪ್ರಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಗಮ ಸಂಗೀತದ ಮಾಂತ್ರಿಕ ಶಕ್ತಿ ಬಹುಬಾಹುಳ್ಯವುಳ್ಳದ್ದು. ಇಂಥ ಸುಗಮ ಸಂಗೀತದ ನಾದ ಮಾಧುರ್ಯದಿಂದ ಮನುಷ್ಯನ ಮನಸ್ಸನ್ನು ಉಲ್ಲಾಸ, ಕ್ರೀಯಾಶೀಲರನ್ನಾಗಿಸುತ್ತದೆ ಎಂದರು.
ಸೋಮನಾಥೇಶ್ವರ ದೇವಸ್ಥಾನದಲ್ಲಿ ನಾಡಿನ ಖ್ಯಾತ ಗವಾಯಿಗಳಾದ ಪಿ.ಎ.ಸಾಲಿಮಠ, ವಿರುಪಾಕ್ಷಿ ವಂದಲಿ ಹಾಗೂ ಗದ್ದೆಪ್ಪ ಗವಾಯಿಗಳು ಸಂಗೀತ ಸೇವೆ ಸಲ್ಲಿಸಿದ್ದಾರೆ. ಪಟ್ಟಣದ ಚಿಣ್ಣರು ಇತ್ತೀಚಿನ ದಿನಗಳಲ್ಲಿ ಸಂಗೀತದತ್ತ ಮುಖ ಮಾಡಿದ್ದು, ಸಂಗೀತ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿ ಎಂದರು.
ಪೂಜ್ಯ ನಂದಣ್ಣಪ್ಪ ಪೂಜಾರಿ ಸಮ್ಮುಖ ವಹಿಸಿದ್ದರು. ಸೋಮನಾಥ ಸಂಗೀತ ಪಾಠಶಾಲಾ ಮುಖ್ಯಸ್ಥ ಬಸಣ್ಣ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ಗಾಯಕರಾದ ಆಮಯ್ಯಸ್ವಾಮಿ ರಾಜನಕೋಳೂರು, ಯಮನೇಶ ಯಾಳಗಿ, ಈಶ್ವರಬಡಿಗೇರ, ನಿಂಗಣ್ಣ ವಿಶ್ವಕರ್ಮ, ಮಲ್ಲಿಕಾಜರ್ುನ ಲಿಂಗಸೂರ, ವಿಜಯಚಾರ್ಯ ಜೋಶಿ, ಮಹಾದೇವಪ್ಪ ಮಡಿಕೇಶ್ವರ, ಮಲ್ಲಯ್ಯ ವಡಿಕೇರಿ, ಬಸಯ್ಯಸ್ವಾಮಿ ಯಾಳಗಿ, ಮಹಾಂತೇಶ ಸೇರಿ ಹಿರಿಯ, ಕಿರಿಯ ಕಲಾವಿದರು, ಸಂಗೀತಪ್ರಿಯರು, ಸಂಗೀತಾಸ್ತರು ಉಪಸ್ಥಿತರಿದ್ದರು.

ಬಾಲ ಕಲಾವಿದರ ಸಂಗೀತ ಸೇವೆ: ಬಾಲ ಕಲಾವಿದರಾದ ವೀರೇಶ ಹೊಗರಿ, ಕುಸುಮಾ ಬೋಯಿ, ತ್ರಿವೇಣಿ ದಿವಾಕರ್, ರಕ್ಷಿತಾ ದಿವಾಕರ್, ಕಾವೇರಿ ಗುರಿಕಾರ, ಗುರಮ್ಮ ಗಣಚಾರಿಮಠ, ಸುವರ್ಣ ಜಂಪಾ, ಪ್ರೇಮಲತಾ ದ್ಯಾಸ, ರಾಜೇಶ್ವರಿ ದ್ಯಾಸ, ದೇವರಾಜ ವಿಶ್ವಕರ್ಮ, ಸುವರ್ಣಾ ದ್ಯಾಸ, ಮೇಘಾ ದೊರೆ, ಅಶ್ವಿನಿ ಲಿಂಗದಳ್ಳಿ, ಭಾಗ್ಯ, ರಾಣುನಾಥ ಜೋಗಿ ಸೇರಿ ಶಾಸ್ತ್ರೀಯ ಸಂಗೀತ, ಭಕ್ತಿ ಗೀತೆಗಳು, ಹಾಗೂ ಜಾನಪದ ಗೀತೆಗಳು ಹಾಗೂ ರಸಮಂಜರಿ ಕಾರ್ಯಕ್ರಮ ಮಧ್ಯರಾತ್ರಿವರೆಗೆ ಜರುಗಿದವು.