More

    ಯಾದಗಿರಿಯ ವಿವಿಧೆಡೆ ಶಾಲೆಗಳಲ್ಲಿ ಹೊಸ ವರ್ಷಾಚರಣೆ

    ಕಕ್ಕೇರಾ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಸಮೂಹ ಶಿಕ್ಷಕರೊಂದಿಗೆ ಬುಧವಾರ ಕೇಕ್ ಕತ್ತರಿಸುವ ಮೂಲಕ ನೂತನ ವರ್ಷ ಆಚರಿಸಲಾಯಿತು.

    ನಂತರ ಮುಖ್ಯಗುರು ಬಸವರಾಜ ಗುತ್ತೇದಾರ ಮಾತನಾಡಿದ ಅವರು, ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಅಧ್ಯಯನಶೀಲರಾಗಿ ಶ್ರದ್ಧೆ ಹಾಗೂ ಏಕಾಗ್ರತೆಯಿಂದ ಉತ್ತಮ ರೀತಿಯ ಅಭ್ಯಾಸ ಮಾಡಬೇಕು ಎಂದರು.

    ಹಜ್ ಯಾತ್ರೆ ತೆರಳಿದ್ದ ಶಾಲಾ ಸಹಶಿಕ್ಷಕ ರಂಜಾನ ಲೋಣಿ ಅವರನ್ನು ಸನ್ಮಾನಿಸಲಾಯಿತು. ಸಿಆರ್ಪಿ ರವಿ ಕೋಟ್ಯಾಳ್, ಶಿಕ್ಷಕರಾದ ರಂಜಾನ ಲೋಣಿ, ರವಿ ಭಜಂತ್ರಿ, ರಿಜ್ವಾನಬೇಗಂ, ಸಂಗೀತಾ ಜೋಶಿ, ಛಾಯಾ ಗುರಿಕಾರ, ಶಾಹೀನಕೌಸರ್ ಅನಿತಾ ಜೋಗಿ, ಯಮನಪ್ಪ, ಬಸವರಾಜ ಇತರರಿದ್ದರು.

    ಕೃಷ್ಣಾ ಶಾಲೆಯಲ್ಲಿ ಸಂಭ್ರಮದ ಹೊಸವರ್ಷ
    ವಡಗೇರಾ: ಹೊಸ ವರ್ಷ ಬಂದಿದೆ ಎಲ್ಲರ ಬಾಳಲ್ಲಿ ಶುಭ ತರಲಿ, ನಿಮ್ಮ ಬಯಕೆಗಳು ಈಡೇರಲಿ ಎಂದು ಶಿಕ್ಷಕಿ ಸಿಂಧೂ ಬಿ.ಪಾಟೀಲ್ ಶುಭಹಾರೈಸಿದರು. ಕಾಡಂಗೇರಾ ಬಿ ಗ್ರಾಮದ ಕೃಷ್ಣಾ ನರ್ಸರಿ ಮತ್ತು ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಿದ್ದ ಹೊಸ ವರ್ಷದ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು ಹೊಸವರ್ಷವು ಹೊಸ ಕನಸುಗಳನ್ನು ಹೊತ್ತು ತರಲಿ , ನೆಮ್ಮದಿ, ಶಾಂತಿ, ಸ್ನೇಹ, ಸಮೃದ್ಧಿ, ಸೌಹಾರ್ದತೆ ನಮ್ಮಲ್ಲಿರುವ ದ್ವೇಷ ಅಸೂಯೆ ದೂರವಾಗಲಿ. ಮಕ್ಕಳು ಮುಂಬರುವ ದಿನಗಳಲ್ಲಿ ಉತ್ತಮವಾಗಿ ಅಭ್ಯಾಸ ಮಾಡಿ ದೇಶದ ಒಳ್ಳೆಯ ಪ್ರಜಗಳಾಗಬೇಕೆಂದು ಕರೆ ನೀಡಿದರು. ಶಿಕ್ಷಕರಾದ ಷಣ್ಮುಖ ಪುಲರ್ೆ, ರೇಣುಕಾ ಕ್ಯಾತನಾಳ, ಭೀಮಣ್ಣ ಆಡಿನೊರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts